ಬೆಳಗಾವಿ ಸೆ.15: ಮನುಷ್ಯನಿಗೆ ಜೀವನದಲ್ಲಿ ಏನಾದರೂ ಸಾಧಿಸುವ ಛಲವೊಂದಿದ್ದರೆ ಎಂತಹ ಸನ್ನಿವೇಶ ಬಂದರು ಅದನ್ನು ಎದುರಿಸಿ ಸಾಧಿಸುವ ಛಲ ಇರಬೇಕು. ದೈಹಿಕವಾಗಿ ಬಲಿಷ್ಠರಾದರು ಕೂಡ ಮಾನಸಿಕವಾಗಿ ಸಾಧಿಸುತ್ತೇನೆ ಎಂಬ ಛಲ ಇದ್ದರೆ ಮಾತ್ರ ಸಾಧನೆಯ ಶಿಖರವನ್ನು ಏರಲು ಸಾಧ್ಯ. ದೈಹಿಕವಾಗಿ ದಷ್ಟಪುಷ್ಟ ರಾಗಿದ್ದರು ಕೂಡ ಕೆಲ ಯುವಕರು ಯಾವುದೇ ಕ್ರೀಡೆಗಳಲ್ಲಿ ಭಾಗವಹಿಸದೆ ಹಾಗೂ ಇನ್ನಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗದೆ ಕಾಲಹರಣ ಮಾಡುವ ಕೆಲ ಯುವಕರ ಮಧ್ಯೆ ತಮ್ಮ ಜೀವನದಲ್ಲಿ ಅಂಗವಿಕಲತೆ ನೋವು ಕಾಡಿದರೂ ಕೂಡ ಏನಾದರೂ ಸಾಧಿಸುವ ಛಲ ಹೊಂದಿದ ಬೆಳಗಾವಿ ಜಿಲ್ಲೆಯ ಇಬ್ಬರು ಅಂಗವಿಕಲ ಕ್ರೀಡಾ ಪಟುಗಳು. ಈಜಿಪ್ಟ್ ದೇಶದಲ್ಲಿ ನಡೆಯುವ ವೀಲ್ ಚೇರ್ ವರ್ಲ್ಡ್ ಚಾಂಪಿಯನ್ಶಿಪ್ ಪಂದ್ಯಾವಳಿಗೆ ಆಯ್ಕೆ ಆಗುವುದರ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಹೌದು ಅಂಗವಿಕಲರ ವಿಭಾಗದ ವರ್ಲ್ಡ್ ಚಾಂಪಿಯನ್ ಶಿಪ್ ಹ್ಯಾಂಡ್ ಬಾಲ್ ಪಂದ್ಯಾವಳಿಗೆ ಭಾರತ ತಂಡದಿಂದ ಪ್ರತಿನಿಧಿಸುತ್ತಿರುವ ಬೆಳಗಾವಿ ಜಿಲ್ಲೆಯ ಇಬ್ಬರು ಆಟಗಾರರು ಅದರಲ್ಲಿ ಗೋಕಾಕ್ ತಾಲೂಕಿನ ಕೊಣ್ಣೂರು ಪಟ್ಟಣದ ಕ್ರೀಡಾಪಟು ಸಿದ್ದಪ್ಪ ಈರಪ್ಪ ಪಟುಗುಂದಿ ಹಾಗೂ ಯರಗಟ್ಟಿ ತಾಲೂಕಿನ ಗೊರಗುದ್ದಿ ಗ್ರಾಮದ ಕ್ರೀಡಾಪಟು ಬಸಪ್ಪ ಸುನದೋಳಿ ಈ ಇಬ್ಬರು ಆಟಗಾರರು ಕರ್ನಾಟಕ ರಾಜ್ಯದಿಂದ ಅದರಲ್ಲೂ ಬೆಳಗಾವಿ ಜಿಲ್ಲೆಯಿಂದ ಭಾರತದ ತಂಡಕ್ಕೆ ಆಯ್ಕೆಯಾಗಿದ್ದು ರಾಜ್ಯ ಹಾಗೂ ಜಿಲ್ಲೆಗೆ ಅಪಾರ ಕೀರ್ತಿಯನ್ನು ತಂದಿರುತ್ತಾರೆ.
ಇನ್ನು ಈ ಇಬ್ಬರು ಕ್ರೀಡಾಪಟುಗಳು ಸೆಪ್ಟೆಂಬರ್ 1 ರಿಂದ 14ನೇ ದಿನಾಂಕದವರೆಗೆ ರಾಜಸ್ಥಾನದಲ್ಲಿ ನಡೆದ ಭಾರತ ತಂಡದ ಕ್ರೀಡಾ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಸೆಪ್ಟೆಂಬರ್ 16 ರಿಂದ ಸೆ. 21ರವರೆಗೆ ಈಜಿಪ್ಟ್ ದೇಶದ ಕೈರೋನಲ್ಲಿ ನಡೆಯುತ್ತಿರುವ ವರ್ಲ್ಡ್ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಭಾಗವಹಿಸಲು ನಿನ್ನೆ ದೆಹಲಿ ವಿಮಾನ ನಿಲ್ದಾಣ ಮೂಲಕ ಈಜಿಪ್ಟ್ ದೇಶಕ್ಕೆ ತೆರಳಿದರು.
ಬೆಳಗಾವಿ ಜಿಲ್ಲೆಯ ಈ ಅಂಗವಿಕಲ ಕ್ರೀಡಾಪಟುಗಳ ಸಾಧನೆಯನ್ನು ಕಂಡು ಕ್ರೀಡಾಪಟುಗಳಿಗೆ ಶುಭ ಹಾರೈಸುವ ಮೂಲಕ ಗ್ರಾಮಸ್ಥರ ಪ್ರೀತಿಗೆ ಪಾತ್ರರಾದರು ಹಾಗೂ ಗ್ರಾಮದ ವಿವಿಧ ಸ್ಥಳಗಳಲ್ಲಿ ಇವರ ಕುರಿತು ಶುಭಾಶಯ ಕೋರುವ ಬ್ಯಾನರ್ ಗಳನ್ನು ಅಳವಡಿಸಿ ವಿಭಿನ್ನ ರೀತಿಯಲ್ಲಿ ಶುಭಾಶಯ ಕೋರಿದರು.