ಬೆಳಗಾವಿ ಚಳಿಗಾಲ ಅಧಿವೇಶನ :
ಪ್ರಥಮ ದರ್ಜೆ ಕಾಲೇಜುಗಳ ಅಥಿತಿ ಉಪನ್ಯಾಸಕರ ಪ್ರತಿಭಟನೆ
ವಿದ್ಯಾರ್ಥಿಗಳ ಬಾಳಲ್ಲಿ ಬೆಳಕು ಮೂಡಿಸುವ ಶಿಕ್ಷಕರ ಬಾಳಲ್ಲಿ ಅಂಧಕಾರ. ಅಕ್ಷರ ಕಲಿಸುವ ಶಿಕ್ಷಕರಿಗೆ ರಾಜ್ಯದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ, ಸರ್ಕಾರಿ ಅತಿಥಿ ಉಪನ್ಯಾಸಕರನ್ನು ಸರ್ಕಾರ ಏಕಾಏಕಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಮಧ್ಯದಲ್ಲಿಯೇ ತೇರುವು ಗೊಳಿಸಿದ್ದರಿಂದ ಶಿಕ್ಷಕರ ಜೀವನ ಬೀದಿಗೆ ಬಂದಂತಾಗಿದೆ. ಶಿಕ್ಷಕ ವೃತ್ತಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಅತಿಥಿ ಉಪನ್ಯಾಸಕರ ಬಾಳಲ್ಲಿ ಅಂಧಕಾರ ಮೂಡಿದೆ.
ಅತಿಥಿ ಉಪನ್ಯಾಸಕಿ ಒಬ್ಬರು ಕಣ್ಣೀರಾಗಿ ಭಾವುಕರಾದ ವಿಡಿಯೋ 👇https://youtu.be/Mkk2ktOdzbs
ಕರ್ನಾಟಕ ರಾಜ್ಯ ಸರಕಾರಿ ಪ್ರಥಮದರ್ಜೆ ಕಾಲೇಜು ಅಥಿತಿ ಉಪನ್ಯಾಸಕರಿಂದ ಶೀಘ್ರವಾಗಿ ಜನರಲ್ ಕೌನ್ಸಿಲಿಂಗ ಮಾಡಬೇಕು ಮತ್ತು ಜನರಲ್ ಕೌನ್ಸಿಲಿಂಗ ಆಗುವವರೆಗೂ 2024 ರಿಂದ 25 ನೇ ಶೈಕ್ಷಣಿಕ ವರ್ಷದಲ್ಲಿ ಸೇವೆಯಿಂದ ಹೊರಗುಳಿದ ಉಪನ್ಯಾಸಕರಿಗೆ ಗೌರವ ಧನ ಮುಂದುವರೆಸುವಂತೆ ಆಗ್ರಹಿಸಿ ಬೆಳಗಾವಿಯ ಸುವರ್ಣ ಗಾರ್ಡನ್ ನಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಸರ್ಕಾರದ ನಡೆಯಿಂದ ಕಂಗಾಲಾದ ಉಪನ್ಯಾಸಕಿ ಒಬ್ಬರು ಸಂಸಾರಕ್ಕೆ ಎದುರಾಗಿರುವ ಆರ್ಥಿಕ ಸಂಕಷ್ಟ ಹೇಳಿಕೊಂಡು ಕಣ್ಣೀರಾಗಿ ಭಾವುಕರಾದ ಘಟನೆ ಜರುಗಿತು.