ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳಗಾವಿ ಜಿಲ್ಲೆ ಸೇರಿ ರಾಜ್ಯಾದ್ಯಂತ ಬಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಸಂಪರ್ಕ ಕಲ್ಪಿಸುವ ಸೇತುವೆಗಳು ಜಲಾವೃತಗೊಂಡಿವೆ. ನಿನ್ನೆ ತಾನೆ ಗೋಕಾಕ್ ನಗರದ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯ ರಸ್ತೆ ಕಲ್ಪಿಸುವ ಸೇತುವೆ ತುಂಬಿ ಹರಿಯುತ್ತಿರುವ ಘಟಪ್ರಭಾ ನದಿಯ ಅಬ್ಬರಕ್ಕೆ ಮುಳುಗಡೆಗೊಂಡಿದ್ದು. ಇದೀಗ ಗೋಕಾಕ್ ನಗರದ ಕೊಣ್ಣೂರ ಹಾಗೂ ಗೋಕಾಕ್ ನಗರಕ್ಕೆ ಕಲ್ಪಿಸುವ ಮಾರ್ಕಂಡೇಯ ನದಿಯ ಚಿಕ್ಕೋಳಿ ಸೇತುವೆ ಮೇಲೆ ನೀರಿನ ಪ್ರಮಾಣ ಹೆಚ್ಚಾಗಿದ್ದು ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ.
ಬೆಳಗಾವಿ: ಬೆಳಗಾವಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ನದಿಗಳಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಗಳು ಮುಳುಗಡೆಗೊಂಡಿದ್ದು ಸಾರ್ವಜನಿಕರಿಗೆ ಸಂಚರಿಸಲು ಅನಾನುಕೂಲವಾಗಿದೆ. ಹಾಗೆ ಬೆಳಗಾವಿ ಸೇರಿದಂತೆ ಚಿಕ್ಕೋಡಿ ಭಾಗದ ಹಲವಾರು ಸೇತುವೆಗಳು ಜಲಾವೃತಗೊಂಡಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ ಗೋಕಾಕ್ ನಗರದ ಘಟಪ್ರಭಾ ನದಿಯು ಅಪಾಯ ಮಟ್ಟದಲ್ಲಿ ಉಕ್ಕಿ ಹರಿಯುತ್ತಿರುವುದರಿಂದ ನಿನ್ನೆ ತಾನೇ ಲೋಳಸೂರು ಸೇತುವೆ ಮುಳುಗಡೆ ಗೊಂಡಿದ್ದು. ಇದೀಗ ಮಾರ್ಕಂಡೇಯ ನದಿಯು ಉಕ್ಕಿ ಹರಿಯುತ್ತಿರುವುದರಿಂದ ಗೋಕಾಕ್ ಹಾಗೂ ಕೊಣ್ಣೂರ ನಗರಕ್ಕೆ ಕಲ್ಪಿಸುವ ಚಿಕ್ಕೋಳಿ ಸೇತುವೆ ಜಲಾವೃತಗೊಂಡಿದ್ದು ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ.