ದೇಶ ಕಂಡ ಅಪ್ರತಿಮ ಉದ್ಯಮಿ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ರತನ್ ಟಾಟಾ ಅವರು ವಯೋಸಹಜ ಅನಾರೋಗ್ಯದಿಂದ ಬುಧವಾರ ರಾತ್ರಿ 11.50ಕ್ಕೆ ನಿಧನ ಹೊಂದಿದರು.
ಸೋಮವಾರ ದಿನ ಆಸ್ಪತ್ರೆಗೆ ದಾಖಲಾಗಿದ್ದ ರತನ್ ಟಾಟಾ ಅವರು ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದೇನೆ. ಎಂದು ದೇಶವಾಸಿ ಅಭಿಮಾನಿಗಳಿಗೆ ರತನ್ ಟಾಟಾ ಅವರು ತಿಳಿಸಿದ್ದರು. ಆದರೆ ಬುಧವಾರ ದಿನ ಅವರ ಸ್ಥಿತಿ ಚಿಂತಾ ಜನಕವಾಗಿತ್ತು ರಾತ್ರಿ ಸುಮಾರು 11 ಗಂಟೆ 50 ನಿಮಿಷಕ್ಕೆ ನಿಧನ ಹೊಂದಿದ್ದರು ಎಂದು ಟಾಟಾ ಸನ್ಸ್ ಚೇರಮನ್ ಚಂದ್ರಶೇಖರ್ ಅಧಿಕೃತ ಘೋಷಣೆ ಮಾಡಿದರು.
ರತನ್ ಟಾಟಾ ಅವರ ಕಿರು ಪರಿಚಯ
1937 ರಂದು ಮುಂಬೈನಲ್ಲಿ ಜನಿಸಿದ ರತನ್ ಟಾಟಾ ಅವರು ಟಾಟಾ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಜಮ್ಶೆಡ್ ಜಿ ಟಾಟಾ ಅವರ ಮೀರಿ ಮೊಮ್ಮಗ. 1948ರಲ್ಲಿ ರತನ್ ಟಾಟಾ ಅವರ ತಂದೆ ತಾಯಿ ದೂರವಾದಾಗ ಅಜ್ಜಿ ನವಾಜ್ ಬಾಯ್ ಆರ್ ಟಾಟಾ ಅವರ ಆಶ್ರಯದಲ್ಲಿ ಬೆಳೆದರು. ರತನ್ ಟಾಟಾ ಅವರ ಬದುಕಿನಲ್ಲಿ ನಾಲ್ಕು ಬಾರಿ ಮದುವೆಯ ಅವಕಾಶ ಒದಗಿ ಬಂದರೂ ಕೊನೆಗೆ ಬ್ರಹ್ಮಚಾರಿಯಾಗಿ ಉಳಿದುಬಿಟ್ಟರು.
ಅಮೆರಿಕದ ಲಾಸ್ ಏಂಜಲೀಸ್ ನಲ್ಲಿದ್ದಾಗ ರತನ್ ಟಾಟಾ ಅವರಿಗೆ ಯುವತಿಯೊಬ್ಬಳ ಜೊತೆಗೆ ಪ್ರೇಮಾಂಕುರವಾಗಿತ್ತು ಆದರೆ 1962ರಲ್ಲಿ ಭಾರತ ಹಾಗೂ ಚೀನಾ ದೇಶಗಳ ನಡುವೆ ಯುದ್ಧ ನಡೆಯುತ್ತಿದ್ದ ಕಾರಣ ರತನ್ ಟಾಟಾ ಅವರ ಪ್ರೇಯಸಿಯ ತಂದೆ ತಾಯಿಯರು ಆಕೆಯನ್ನು ಭಾರತಕ್ಕೆ ತೆರಳಲು ಅವಕಾಶ ನೀಡಲಿಲ್ಲ ಇದರಿಂದ ಅವರಿಬ್ಬರ ಪ್ರೀತಿ ಮದುವೆಯವರೆಗೆ ಹೋಗದೆ ಅಲ್ಲಿಯೇ ಮುಗಿದು ಹೋಗಿತ್ತು.
1991ರಲ್ಲಿ ದೇಶದ ಬಹುದೊಡ್ಡ ಸಮೂಹ ಸಂಸ್ಥೆ ಟಾಟಾ ಉದ್ಯಮ ಸಂಸ್ಥೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು. 2012ರವರೆಗೂ ಮುಖ್ಯಸ್ಥರಾಗಿ ಮುಂದುವರೆದರು. ದೇಶದ ಮಧ್ಯಮ ಜನಕ್ಕೆ ಕೈಗೆಟುಕುವಂತೆ ವಿಶ್ವದ ಅತಿ ಕಡಿಮೆ ಬೆಲೆಯ ಕಾರು ಉತ್ಪಾದಿಸುವ ಮಾತು ಕೊಟ್ಟಿದ್ದವರು 2019ರಲ್ಲಿ 1 ಲಕ್ಷ ಬೆಲೆಬಾಳುವ ಟಾಟಾ ನೌಕರರನ್ನು ದೇಶಕ್ಕೆ ಪರಿಚಯಿಸಿದರು.
2020 ರಲ್ಲಿ ದೇಶಕ್ಕೆ ವಕ್ಕರಿಸಿದ ಮಹಾಮಾರಿ ಕೊರೋನಾ ಸಮಯದಲ್ಲಿ ದೇಶದ ಜನತೆಗಾಗಿ ಸಹಾಯ ಹಸ್ತ ಚಾಚಿದ ಕರುಣಾಮಯಿ. ಟಾಟಾ ಸಂಸ್ಥೆಯ ಉದ್ಯಮಿಗಳಿಗೆ ಬೆನ್ನೆಲುಬಾಗಿ ಹಾಗೂ ದೇಶದ ಹಲವಾರು ಸಾಮಾಜಿಕ ಅಭಿವೃದ್ಧಿಗಾಗಿ ಕೈಜೋಡಿಸಿದ್ದರು. ಭಾರತದ ಹೆಸರನ್ನು ಜಗತ್ತಿನಾದ್ಯಂತ ಹೆಸರುವಾಸಿ ಮಾಡಿದ ರತನ್ ಟಾಟಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು.