ಸುವರ್ಣ ಸೌಧ ಮುತ್ತಿಗೆ ಹಾಕಲು ಯತ್ನಿಸಿದ ವಿಕಲಚೇತನರು.

ಚಳಿಗಾಲ ಅಧಿವೇಶನ:

ಕನಿಷ್ಠ ವೇತನ ಹಾಗೂ ಖಾಯಂಮಾತಿಗೆ ಆಗ್ರಹಿಸಿ ವಿಕಲಚೇತನರಿಂದ ಪ್ರೊಟೆಸ್ಟ್.
ಬೆಳಗಾವಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗ್ಗೆಯಿಂದ ಧರಣಿ ಮಾಡುತ್ತಿರುವ  ವಿಕಲ ಚೇತನರು. ಬೆಳಿಗ್ಗೆಯಿಂದ  ತಮ್ಮ ಹಕ್ಕುಗಳ ಸಲುವಾಗಿ  ಧರಣಿ ಮಾಡುತ್ತಿರುವ ವಿಕಲಚೇತನರ ಬಳಿ  ಯಾವೊಬ್ಬ ಸರ್ಕಾರದ  ಸಚಿವರು ಬಾರದೇ ಇರುವುದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು. ಬೆಳಿಗ್ಗೆಯಿಂದ ಕಾದು ಕುಳಿತಿರುವ ವಿಕಲಚೇತನರು. ಕೈಯಲ್ಲಿ ಗಾಂಧೀಜಿ ಹಾಗೂ ಅಂಬೇಡ್ಕರ್ ಫೋಟೋ ಹಿಡಿದು ಸುವರ್ಣ ಸೌಧ ಮುತ್ತಿಗೆಗೆ ಯತ್ನ.

ಪ್ರತಿಭಟನಾ ನಿರತ ವಿಕಲಚೇತನರ್ ವಿಡಿಯೋ 👇

https://youtu.be/UvtujxMEOrY


ಸುವರ್ಣ ಗಾರ್ಡನ್ ಬಳಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ.
ನಾವಿಲ್ಲಿ ಬೆಳಿಗ್ಗೆಯಿಂದ ಧರಣಿ ಮಾಡ್ತಾ ಇದ್ದೇವೆ.
ಸೌಜನ್ಯಕ್ಕಾಗಿಯೂ ಸರ್ಕಾರದಿಂದ ಯಾವೊಬ್ಬ ಅಧಿಕಾರಿಯಾಗಲಿ, ಸಚಿವರಾಗಲಿ ಭೇಟಿ ನೀಡದ ಹಿನ್ನೆಲೆ. ಸುವರ್ಣಸೌಧ ಮುತ್ತಿಗೆಗೆ ಯತ್ನ.
ಸುವರ್ಣ ಸೌಧ ಮುತ್ತಿಗೆ ಹಾಕಲು ಮುಂದಾದ ಪ್ರತಿಭಟನಾಕಾರರು.
ಪ್ರತಿಭಟನಾಕಾರನ್ನು ಸುವರ್ಣ ಗಾರ್ಡನ್ ಬಳಿಯೇ ತಡೆದ ಪೊಲೀಸರು.
ಪ್ರತಿಭಟನಾ ಸ್ಥಳಕ್ಕೆ ಸಚಿವರು ಭೇಟಿಯಾಗುವವರಿಗೆ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಹೇಳಿದ ವಿಕಲಚೇತನರು.