ಗೋಕಾಕ: ಲೊಕಸಭಾ ಚುನಾವಣೆ ಕುರಿತು ಗೋಕಾಕ ಹಾಗೂ ಅರಭಾವಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಹಿನ್ನಲೆ ತಾಲೂಕಿನ ವಿವಿಧ ಮಠಗಳಿಗೆ ಬೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ತಾಲೂಕಿನ ಕೊಣ್ಣೂರ-ಮರಡಿಮಠದ ಸುಪ್ರಸಿದ್ದ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಪೂಜೆಸಲ್ಲಿಸಿ ನಂತರ ಮಠದ ಶ್ರೀಗಳಾದ ಶ್ರೀ ಮ, ಘ,ಚ,ಡಾ. ಪವಾಡೇಶ್ವರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಠದ ಶ್ರೀಗಳನ್ನು ಗೌರವ ಪೂರಕವಾಗಿ ಸತ್ಕರಿಸಿ ಗೌರವಿಸಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಕಾಂಗ್ರೆಸ್ ಮುಖಂಡರಾದ ಡಾ.ಮಹಾಂತೇಶ್ ಕಡಾಡಿ, ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.