4g 5g ಅಂತ ವೇಗವಾಗಿ ಮುಂದುವರಿಯುತ್ತಿರುವ ಇಂಟರ್ನೆಟ್ ಯುಗದಲ್ಲಿ ಫೇಸಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಹೀಗೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡುವ ಯುವಕ ಯುವತಿಯರ ಸಂಖ್ಯೆಗೇನೂ ಕಡಿಮೆ ಇಲ್ಲ. ಅದರಲ್ಲೂ ಒಳ್ಳೆ ಸಂದೇಶ ನೀಡುವ ರೀಲ್ಸಗಳನ್ನು ಮಾಡಿದರೆ ಏನು ತೊಂದರೆ ಇಲ್ಲ. ಆದರೆ ಸಮಾಜದ ಸ್ವಾಸ್ಥ್ಯ ಕೆಡಿಸುವ ಹಾಗೂ ಅಸಹ್ಯಕರ ಮತ್ತು ಮುಜುಗರ ವಾಗುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮುಂದೆ ಹಾಗೂ ಮಕ್ಕಳ ಮುಂದೆ ಅರೆಬರೆ ಬಟ್ಟೆಗಳನ್ನು ಹಾಕಿಕೊಂಡು ತಿರುಪೆ ಶೋಕಿಗೋಸ್ಕರ ರಿಲ್ಸ್ ಮಾಡುವ ಕೆಲ್ ಯುವಕರ ಸಂಖ್ಯೆ ಕೂಡ ಕಡಿಮೆ ಇಲ್ಲ.
ಬೆಳಗಾವಿ: ಹೌದು ಅಥಣಿ ತಾಲೂಕಿನ ಶಿನಾಳ ಗ್ರಾಮದ ಬಾಳೇಶ್ ದುರ್ಗಿ ಎಂಬ ಯುವಕ ಕಳೆದ ಎರಡು ವರ್ಷಗಳಿಂದ ಬಾಡಿ ಮೇಂಟೈನ್ಸ್ ಎಂದು ಜಿಮ್ ಮಾಡಿ ದೇಹವನ್ನು ಬಲಿಷ್ಠ ಮಾಡಿದ್ದ ಇದನ್ನು ಕೇವಲ ತನ್ನ ಆರೋಗ್ಯ ದೃಷ್ಟಿಯಿಂದ ಮಾಡಿದರೆ ಒಳ್ಳೆಯದಿತ್ತು. ಆದರೆ ಈತ ತಿರ್ಪೆ ಶೋಕಿಗಾಗಿ ಕಂಡು ಕಂಡಲ್ಲಿ ಶರ್ಟ್ ಬಿಚ್ಚಿ instagram ನಲ್ಲಿ ಪೋಸ್ಟ್ ಮಾಡುತ್ತಿದ್ದ ಅದೇ ರೀತಿ ಇಂತಹದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ (ಜೂ.28) ಶುಕ್ರವಾರದಂದು ಅಥಣಿ ಬಸ್ ಸ್ಟಾಪ್ ನಲ್ಲಿ ಮೈ ಮೇಲೆ ಶರ್ಟ ಇಲ್ಲದೆ ಕಾಲೇಜು ಯುವತಿಯರು ಹಾಗೂ ಮಹಿಳೆಯರ ನೋಡಲಿ ಎಂದು ರೀಲ್ಸ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ (Instagram) ಪೋಸ್ಟ ಮಾಡಿ ಹವಾ ಸೃಷ್ಟಿಸಲು ಹೋಗಿದ್ದ ಯುವಕನ ಹುಚ್ಚಾಟದ ವಿಡಿಯೋವನ್ನು ಸಿಸಿ ಕ್ಯಾಮೆರಾ ದಲ್ಲಿ ನೋಡಿದ ಪೊಲೀಸರು ತಕ್ಷಣವೇ ಕಾರ್ಯ ಪ್ರವೃಚರಾಗಿ ಠಾಣೆಗೆ ಕರಿಸಿ ತಮ್ಮದೇ ಶೈಲಿಯಲ್ಲಿ ರೀಲ್ಸ್ ರಾಜನಿಗೆ ಬುದ್ಧಿ ಹೇಳಿದ ಪೊಲೀಸರು.
ಪೋಲೀಸ ಶೈಲಿಯ ಬುದ್ದಿ ಮಾತಿಗೆ ಯುವಕ ತಾನು ಮಾಡಿದ ವಿಡಿಯೋ ಕುರಿತು ಕ್ಷಮಾಪಣೆ ಕೋರಿ ಮುಂದೆ ಈ ರೀತಿ ಯಾರು ಕೂಡ ವಿಡಿಯೋಗಳನ್ನು ಮಾಡಬೇಡಿ ಅಂತ ವಿಡಿಯೋ ಮೂಲಕ್ ಕ್ಷಮಾಪಣೆ ಕೋರಿದ್ದಾನೆ.