ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಏಕಾಏಕಿ ಕೊರಳೊಡ್ಡಿ ಸಾವಿಗೀಡಾದ ಸುದ್ದಿ ಕಳೆದ ಮಂಗಳವಾರ ನಡೆದಿದೆ. ಬಾಳಿ ಬದುಕಬೇಕಾದ ಬಾಲೆ ತನ್ನ ಈ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಕಾರಣವಾದರೂ ಏನು ಎಂಬುವುದು ಎಲ್ಲರಲ್ಲೂ ಅನುಮಾನ ಹುಟ್ಟಿಸಿತ್ತು. ಓದಿನಲ್ಲಿ ಮುಂದಿದ್ದ ಬಾಲಕಿ ಏಕಾಏಕಿ ಯಾಕೆ ಇಂತಹ ದೃಢ ನಿರ್ಧಾರ ಕೈ ಗೊಂಡಿದ್ದಾಳೆ ಎನ್ನುವಷ್ಟರಲ್ಲಿ ಈಕೆಯ ಸಾವಿಗೆ ಕಾರಣವಾದ ಸಂಗತಿ ಬೆಳಕಿಗೆ ಬಂದಿದ್ದೆ ಆಕೆ ಸಾವಿನ ಮೊದಲು ಡೆತ್ ನೋಟ್ ಬರೆದಿಟ್ಟ ಪತ್ರ ಸಿಕ್ಕಮೇಲೆ.
ಹಾವೇರಿ: ಹೌದು ಇಷ್ಟಕ್ಕೂ ಈ ಘಟನೆ ನಡೆದಿರುವುದು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ದೂದಿಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ. ಅದೇ ತಾಲೂಕಿನ ಆಲದಕಟ್ಟೆ ಗ್ರಾಮದ ಅರ್ಚನಾ ಗೌಡಣ್ಣವರ ಎಂಬ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಸಾವಿಗೆ ಕಾರಣರಾದವರ ಬಗ್ಗೆ ಎಳೆ ಎಳೆಯಾಗಿ ಬರೆದಿಟ್ಟು ಕೊರಳೊಡ್ಡಿದ್ದಾಳೆ. ಹೌದು ಈಕೆ ಬರೆದಿಟ್ಟ ಡೆತ್ ನೋಟ್ ಪ್ರಕಾರ ಅದೇ ಶಾಲೆಯ ಹಿಂದಿ ಶಿಕ್ಷಕನಾದ ಆರಿತವುಲ್ ಕುಟುಂಬದ ಮಾನಸಿಕ ಕಿರುಕುಳವೆ ಮುಖ್ಯ ಕಾರಣ ಎಂದು ಬರೆದಿಟ್ಟಿದ್ದಾಳೆ. ಅರ್ಚನಾ ಶಾಲೆಯ ಪ್ರತಿಯೊಂದರಲ್ಲೂ ಮುಂದಿರುವುದು ಈಕೆ ಸಾವಿಗೆ ಮುಳುವಾಯಿತು.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರುವ ಬಹಳಷ್ಟು ಜನ ಪ್ರತಿಭಾವಂತ ವಿದ್ಯಾರ್ಥಿಗಳೇ ಈ ಶಾಲೆಗೆ ಆಯ್ಕೆಯಾಗಿರುತ್ತಾರೆ. ಅದೇ ರೀತಿ ತಮ್ಮ ಜೀವನದ ಗುರಿ ತಲುಪುವ ನಿಟ್ಟಿನಲ್ಲಿ ಹಲವಾರು ಆಸೆ ಆಕಾಂಕ್ಷೆಗಳನ್ನು ಹೊತ್ತು ಬಂದಿರುತ್ತಾರೆ ಇವರೆಲ್ಲ ಬಾಳಿಗೆ ಬೆಳಕಾಗಿ ಇವರಿಗೆ ಸರಿಯಾದ ಮಾರ್ಗದರ್ಶನವನ್ನು ನೀಡುವ ಕಾರ್ಯ ಶಿಕ್ಷಕರದಾಗಿರುತ್ತದೆ. ಹೀಗೆ ದಾರಿ ತೋರುವ ಶಿಕ್ಷಕರೇ ವಿದ್ಯಾರ್ಥಿಗಳ ಜೀವನದಲ್ಲಿ ರಾಕ್ಷಸರಂತೆ ವರ್ತಿಸಿದರೆ ಆ ವಿದ್ಯಾರ್ಥಿಗಳ ಭವಿಷ್ಯ ಏನಾಗಬಹುದು! ಹೌದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಾವಿಗೀಡಾದ 9 ನೇ ತರಗತಿಯಲ್ಲಿ ಓದುತ್ತಿರುವ ಅರ್ಚನಾ ಎಂಬ ವಿದ್ಯಾರ್ಥಿನಿ ಹಾಗೂ ಅದೇ ಶಾಲೆಯ ಹಿಂದಿ ಶಿಕ್ಷಕ ಆರಿತವುಲ್ ಎಂಬ ಶಿಕ್ಷಕನ ಮಗಳು ಝೋಯಾ ಒಂದೇ ತರಗತಿಯಲ್ಲಿ ಓದುತ್ತಿದ್ದರು. ಹಾಗೆ ಇಬ್ಬರೂ ಕೂಡ ಸ್ನೇಹಿತರಾಗಿದ್ದರು ಆದರೆ ಶಾಲೆಯ ಪ್ರತಿಯೊಂದರಲ್ಲಿ ಅರ್ಚನಾ ಮೇಲುಗೈ ಸಾಧಿಸುತ್ತಿದ್ದಳು ಓದಿನಲೂ ಕೂಡ ಈಕೆ ಮುಂದೆ ಇದ್ದಳು ಅರ್ಚನಾಳ ಪ್ರಗತಿಯನ್ನು ಅರಗಿಸಿಕೊಳ್ಳಲಾಗದ ಜೋಯಾ ಪ್ರತಿದಿನ ಅರ್ಚನಾಳ ಬಗ್ಗೆ ಇಲ್ಲಸಲ್ಲದ ಕಂಪ್ಲೀಟ್ ಮಾಡುತ್ತಿದ್ದಳು.
ಅದೇ ರೀತಿ ತರಗತಿಯಲ್ಲಿ ತನ್ನ ಮಗಳಿಗಿಂತ ಅರ್ಚನಾ ಮುಂದೆ ಇರುವುದು ಸಹಿಸದ ಶಿಕ್ಷಕನ ಹೆಂಡತಿ ಮನೆಗೆ ಕರೆಸಿ ರಾತ್ರಿ ಇಡಿ ಕಿರುಕುಳ ಕೊಟ್ಟಿದ್ದಳಂತೆ. ಅತ್ತ ಮನೆ ಕಡೆ ನೋಡಿದರೆ ತಂದೆ ದಿನನಿತ್ಯ ಕುಡಿದು ನಿತ್ಯ ಕಾಟ ಕೊಡುವ ಕುಡುಕ ಮಹಾಶಯಾನಾಗಿದ್ದ ಇವೆಲ್ಲವನ್ನು ಮೀರಿ ಶಾಲೆಯಲ್ಲಿ ಉತ್ತಮ ಸಾಧನೆ ಮಾಡಬೇಕೆಂಬ ಛಲವನ್ನು ಹೊಂದಿದ ಅರ್ಚನಾಳ ಬದುಕಿನಲ್ಲಿ ವಿಲನ್ ಆಗಿ ಬಂದಿದ್ದೆ ಈ ಹಿಂದಿ ಶಿಕ್ಷಕನ ಹೆಂಡತಿ ಹೀಗೆ ತನ್ನ ಬದುಕಿಗೆ ಬೆಂಕಿಯಿಟ್ಟ ಶಿಕ್ಷಕನ ಕುಟುಂಬದ ವಿರುದ್ಧ ಅರ್ಚನಾ ಸಾಯುವ ಮುನ್ನ ಎಳೆ ಎಳೆಯಾಗಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇನ್ನು ಅರ್ಚನಾ ಸಾವು ಒಂದು ಕಡೆಯಾದರೆ ಇತ್ತ ಸಾವಿಗೆ ಕಾರಣರಾದವರ ಕಡೆ ಹಣ ಪೀಕಲು ಮುಂದಾದ ಅರ್ಚನಾಳ ಕುಟುಂಬ ಐದು ಲಕ್ಷ ರೂಪಾಯಿಗೆ ಡಿಮ್ಯಾಂಡ್ ಇಟ್ಟಿದ್ದರು. ಪತ್ನಿ ಹಾಗೂ ಮಗಳನ್ನು ಕಾಪಾಡುವ ನಿಟ್ಟಿನಲ್ಲಿ ಆರಿತವುಲ್ 1 ಲಕ್ಷ ಕೊಟ್ಟು ಸುಮ್ಮನೆ ಆಗಿದ್ದ. ದುಡ್ಡು ತೆಗೆದುಕೊಂಡು ಕುಟುಂಬಸ್ಥರು ಶವವನ್ನು ಅಂತ್ಯಸಂಸ್ಕಾರ ಮಾಡಿದ್ದರು. ಆದರೆ ಅಕ್ಷರ ಹೇಳುವ ಶಿಕ್ಷಕನೇ ನರಭಕ್ಷಕನಾದ, ಹಣದ ಆಸೆಗೆ ಬಾಯಿತೆರೆದ ಕುಟುಂಬ. ಇವೆಲ್ಲದರ ನಡುವೆ ಏನು ಅರಿಯದ ಬಾಳಿ ಬೆಳಕಾಗಬೇಕಾಗಿದ್ದ ಅರ್ಚನಾ ಮಾತ್ರ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾಳೆ.