ಶಾಲಾ ಬಸ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತ: ಇಬ್ಬರು ವಿದ್ಯಾರ್ಥಿಗಳ ದಾರುಣ ಸಾವು!

ರಾಯಚೂರು ಸೆ.5: ಜಿಲ್ಲೆಯ ಮಾನ್ವಿ ತಾಲೂಕಿನ ಖಾಸಗಿ ಶಾಲೆ ಒಂದರ ಬಸ್ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವೇಳೆ ಕೆಎಸ್ಆರ್ಟಿಸಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗಳಾಗಿದೆ ಇನ್ನು ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳ ಕೈಕಾಲುಗಳು ತುಂಡಾಗಿವೆ. ಅದೇ ರೀತಿ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ದಾರುಣ ಸಾವನ್ನಪ್ಪಿದ್ದಾರೆ.

ಮಾನ್ವಿ ತಾಲೂಕಿನ ಕಪಗಲ್ ಗ್ರಾಮದಲ್ಲಿ ನಡೆದ ಭೀಕರ ಅಪಘಾತದಲ್ಲಿ ಏಳು ವರ್ಷದ (7) ಸಮರ್ಥ, ಹನ್ನೆರಡು (12) ವರ್ಷದ ಶ್ರೀಕಾಂತ ಎಂಬ ವಿದ್ಯಾರ್ಥಿಗಳು ‌ ದಾರುಣ ಸಾವನ್ನಪ್ಪಿದ್ದಾರೆ.  ಕೆಲ ಗಾಯಳು ವಿದ್ಯಾರ್ಥಿಗಳನ್ನು ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು. ಇನ್ನುಳಿದ ವಿದ್ಯಾರ್ಥಿಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಿಷಯ ತಿಳಿಯುತ್ತಿದ್ದಂತೆ ಅಪಘಾತವಾದ ಸ್ಥಳಕ್ಕೆ ಆಗಮಿಸಿದ ವಿದ್ಯಾರ್ಥಿಗಳ ಪಾಲಕರ ಆಕ್ರಂದನವಂತು ಮುಗಿಲು ಮುಟ್ಟಿದೆ. ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿದ್ಯಾರ್ಥಿಗಳನ್ನು ನೋಡಲು ಆಸ್ಪತ್ರೆ ಎದುರುಗಡೆ ಪಾಲಕರು ಜಮಾಯಿಸಿದ್ದು. ಕೆಲ ವಿದ್ಯಾರ್ಥಿಗಳು ಐಸಿಯು ನಲ್ಲಿ ಇದ್ದಿದ್ದರಿಂದ ಬೇಟಿಗೆ ನಿರಾಕರಣೆ ಮಾಡಿದ್ದರಿಂದ ಪೊಲೀಸರು ಹಾಗೂ ಪಾಲಕರ ನಡುವೆ ವಾಗ್ವಾದ ಉಂಟಾಗಿತ್ತು.

ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ

ಅಪಘಾತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಗಳ ಸುದ್ದಿ ತಿಳಿದಿದ್ದಂತೆ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯ ಅವರು ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲ ಐದು ಲಕ್ಷ ಪರಿಹಾರ ನೀಡಬೇಕೆಂದು ಹಾಗೂ ಗಾಯಗೊಂಡ ವಿದ್ಯಾರ್ಥಿಗಳ ಚಿಕಿತ್ಸೆಗೆಂದು ಮೂರು ಲಕ್ಷ ರೂಪಾಯಿ ನೆರವು ಕೊಡಬೇಕೆಂದು ರಾಯಚೂರು ಜಿಲ್ಲಾಧಿಕಾರಿಗಳಾದ ಕೆ ನಿತೇಶ್ ಅವರಿಗೆ ಸೂಚಿಸಿದ್ದಾರೆಂದು  ಮಾಧ್ಯಮದವರೊಂದಿಗೆ ಮಾತನಾಡಿದರು.