ಲೋಕ ಕದನ ಮುಗಿದಿದ್ದು, ಇಂದು ದೇಶದ ಮೂರನೇ ಬಾರಿ ಅಧಿಕಾರ ಗದ್ದುಗೆ ಏರಲಿರುವ ನರೇಂದ್ರ ಮೋದಿಯವರ (NDA)ನೇತೃತ್ವದ ಬಿಜೆಪಿ ಸತತ ಮೂರನೇ ಅವಧಿಗೆ ದೇಶದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಿರೀಕ್ಷಿಸಿದ ಸ್ಥಾನಗಳಿಗಿಂತ ಕಡಿಮೆ ಸ್ಥಾನಗಳಲ್ಲಿ ಕುಂಠಿತಗೊಂಡಿದ್ದರು ಸಹ ಅಧಿಕಾರದ ಗದ್ದುಗೆ ಏರುವಷ್ಟು ಸ್ಥಾನವನ್ನು ಗಳಿಸಿದೆ. ಮೊನ್ನೆ ಶುಕ್ರವಾರ ನಡೆದ ನೂತನ ಆಯ್ಕೆಯಾದ ಸಂಸದರ ಹಾಗೂ ಮಿತ್ರ ಪಕ್ಷಗಳ ಸರ್ವಾನು ಮತದಿಂದ ಮೋದಿಯನ್ನು ಮತ್ತೊಮ್ಮೆ ತಮ್ಮ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.
ಇಂದು (ಜೂನ 9) ರವಿವಾರದಂದು ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಹೌದು ದೇಶವೇ ಕಾದು ನೋಡುತ್ತಿರುವ ಇಂದಿನ ಕಾರ್ಯಕ್ರಮ ದೇಶದ ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವ ನರೇಂದ್ರ ಮೋದಿಯವರ ಈ ಕಾರ್ಯಕ್ರಮಕ್ಕೆ ಪ್ರಪಂಚದ ಹಲವು ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ. ಪ್ರಧಾನ ಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಭಾನುವಾರ ಸಂಜೆ 7.15 ಕ್ಕೆ ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ಜರುಗಲಿದೆ. ಸಮಾರಂಭಕ್ಕೆ ದೇಶ ವಿದೇಶದ 8000ಕ್ಕೂ ಹೆಚ್ಚು ಗಣ್ಯಾತಿಗಣ್ಯರು ಆಗಮಿಸುವ ನಿರೀಕ್ಷೆ ಇದೆ. ವಿದೇಶಿ ನಾಯಕರುಗಳಿಗೆ ಭಾಗವಹಿಸಲು ಆಮಂತ್ರಣ ಸ್ವೀಕರಿಸಿದ್ದಾರೆ. ಸಮಾರಂಭದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿರುವ ಔತಣಕೂಟದಲ್ಲಿ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಪ್ರಮಾಣ ವಚನಕ್ಕೂ ಮುನ್ನ ವೀರ ಯೋಧರಿಗೆ ಹಾಗೂ ವಾಜಪೇ ಸ್ಮಾರಕಕ್ಕೆ ಮೋದಿ ನಮನ.
ಇಂದು ಸಂಜೆ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮುನ್ನ ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವೀರಯೋಧರಿಗೆ ನಮನ ಸಲ್ಲಿಸಿದರು ಜೊತೆಗೆ ರಾಜಕೀಯ ಗುರು ಅಟಲ್ ಬಿಹಾರಿ ವಾಜಪೇಯಿಯವರ್ ಸ್ಮಾರಕಕ್ಕೆ ನಮ್ಮನ್ ಸಲ್ಲಿಸಿದರು, ಜೊತೆಗೆ ಗಾಂಧೀಜಿಯವರ ಸ್ಮಾರಕಕ್ಕು ಕೂಡ ನಮನ ಸಲ್ಲಿಸಿದ ನರೇಂದ್ರ ಮೋದಿ. ಇಂದು ಸಂಜೆ 7:15ಕ್ಕೆ ಪ್ರಮಾಣ ವಚನ ಕಾರ್ಯಕ್ರಮ ನೆರವೇರಲಿದೆ ನರೇಂದ್ರ ಮೋದಿ ಮತ್ತು 30 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅದರಂತೆ ರಾಜ್ಯದ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಬಸವರಾಜ್ ಬೊಮ್ಮಾಯಿ ಅವರು ಕೂಡ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.