ಸ್ಯಾಂಡಲ್ ವುಡ್ ನ ಪ್ರಚಂಡ ಕುಳ್ಳ ಹಿರಿಯ ನಟ ದ್ವಾರಕೀಶ ವಿಧಿವಶ.

ಹಿರಿಯ ನಟ ದ್ವಾರಕೀಶ

ಕಳಚಿತು ಕನ್ನಡ ಚಲನಚಿತ್ರದ ಹಿರಿಯ ಕೊಂಡಿ ಕನ್ನಡದ ಹಿರಿಯ ನಟ ದ್ವಾರಕೀಶ್ ( 81 )ಇನ್ನಿಲ್ಲ. ಕನ್ನಡ ಚಿತ್ರರಂಗದಲ್ಲಿ ಹಲವು ಚಲನಚಿತ್ರಗಳಲ್ಲಿ ನಟಿಸಿರುವ ದ್ವಾರಕೀಶ್ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ.  ಕನ್ನಡ ಚಲನಚಿತ್ರಗಳಲ್ಲಿ ಹಿರಿಯ ನಟರಾಗಿ ನಟಿಸಿದ ದ್ವಾರಕೀಶ್ ಅವರು ಹಲವಾರು ಹೆಸರಾಂತ ಚಿತ್ರಗಳನ್ನು ಕೊಡುಗೆ ನೀಡಿದ್ದರು. ಅಗಸ್ಟ್ 19, 1942 ರಂದು ಜನಿಸಿದ ಹಿರಿಯ ನಟ ದ್ವಾರಕೀಶ್. ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ ರಾಗಿ ಹಲವು ಚಲನಚಿತ್ರಗಳ ಕೊಡುಗೆಯನ್ನು ನೀಡಿದರು.

ದ್ವಾರಕೀಶ್ ಅವರು ಡಾ. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ಜೊತೆಗೆ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದರು. ಹೃದಯಘಾತದಿಂದ ಇಂದು ವಿಧಿವಶರಾಗಿದ್ದಾರೆ.ದ್ವಾರಕೀಶ್ ಅವರು ಶಮರಾಮ್ ಜಯಮ್ಮ ದಂಪತಿಗೆ ಜನಿಸಿದ ಅವರು ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ಅವರು 1963 ರಲ್ಲಿ ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಮಾಡಿದ್ದರು.