RCB ತಂಡ ಪೈನಲ್ ಗೆದ್ದರೆ ಪ್ರತಿ ವರ್ಷ ರಜೆ ಘೋಷಣೆ ಮಾಡಬೇಕು; ಸಿಎಂ ಗೆ ಪತ್ರ ಬರೆದ RCB ಫ್ಯಾನ್ಸ್.

ಕ್ರಿಕೇಟ್ ಪ್ರೀಯರಿಗೆ ಐ ಪಿ ಲ್ (IPL) ಆರಂಭವಾದರೆ ಹಬ್ಬವ್ವೋ ಹಬ್ಬ ಅದರಲ್ಲೂ RCB ತಂಡದ ಅಭಿಮಾನಿಗಳ ಕ್ರೇಜ್ ಅಂತು ಹೇಳತೀರದು, ಐಪಿಎಲ್ ಆರಂಭವಾದಾಗಿನಿಂದ ಇದೂ ವರೆಗೂ ಒಂದು ಬಾರಿ ಸಹ ಟ್ರೋಫಿ ಗೆಲ್ಲದ RCB ತಂಡಕ್ಕೆ ಅಭಿಮಾನಿಗಳ ಸಂಖ್ಯೆಗೆ ಏನು ಕೊರತೆ ಇಲ್ಲ.  ಅದರಲ್ಲೂ ಈ ಬಾರಿ RCB ತಂಡ ಫೈನಲ್ ಪಂದ್ಯ ಗೆದ್ದರೆ RCB Fance ಹಬ್ಬ ಎಂದು ಪ್ರತಿ ವರ್ಷ ಅಧಿಕೃತ ರಜೆ ಘೋಷಣೆ ಮಾಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರ ಎಲ್ಲೆಡೆ ವೈರಲ್ ಆಗಿದೆ.

ಸಿಎಂ ಗೆ ಬರೆದ ವೈರಲ್ ಆದ ಪತ್ರ್

ದಿ: 22. ಮೇ 2024: ಹೌದು RCB ತಂಡ ಪ್ರತೀ ಸಾರಿ ಐಪಿಎಲ್ ಪಂದ್ಯಾವಳಿಯಲ್ಲಿ ಸೋತರು ಸಹ ಅಭಿಮಾನಿಗಳ ಹುಮ್ಮಸ್ಸು ಮಾತ್ರ ಎಂದಿಗೂ ಕುಗ್ಗುವುದಿಲ್ಲ. ಅದರಲ್ಲೂ ಈ ಭಾರಿ ನಡೆದ್ ಐಪಿಎಲ್ ಪಂದ್ಯಾವಳಿಯಲ್ಲಿ ಮೊದಲ ಏಳು ಪಂದ್ಯಗಳಲ್ಲಿ ಸೋತು ಇನ್ನೇನು ಪಂದ್ಯಾವಳಿಯಿಂದ ಆರ್ಸಿಬಿ ತಂಡವು ಹೊರ ಬೀಳುವುದು ಖಚಿತ ಎನ್ನುವಷ್ಟರಲ್ಲಿ ಆರ್ ಸಿ ಬಿ ತಂಡ ಸತತ ಏಳು ಪಂದ್ಯಗಳನ್ನು ಗೆಲ್ಲುವುದರ ಮೂಲಕ ಹಾಗೂ ಚೆನ್ನೈ ತಂಡವನ್ನು ಸೋಲಿಸುವುದರ ಮೂಲಕ ಪ್ಲೇ ಆಫ್ ಕನಸನ್ನು ನನಸಾಗಿಸಿದೆ. ಅದೇ ರೀತಿ ಈ ಬಾರಿ ಐಪಿಎಲ್ ಪಂದ್ಯಾವಳಿಯಲ್ಲಿ ಆರ್ಸಿಬಿ ತಂಡ  ಪೈನಲ್ ಗೆದ್ದರೆ ಪ್ರತಿ ವರ್ಷ “RCB ಪ್ಯಾನ್ಸ್ ಹಬ್ಬ” ಎಂದು ಪ್ರತಿ ವರ್ಷ ರಜೆ ಘೋಷಣೆ ಮಾಡಬೇಕೆಂದು ಅಭಿಮಾನಿಗಳಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರ ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿದೆ.