ರಾಜ್ಯದಲ್ಲಿ ಬಿಸಲಿನ ತಾಪಕ್ಕೆ ಕಂಗೆಟ್ಟ ಜನತೆಗೆ ವರುಣನ ಆಗಮನದಿಂದ ತಂಪೆರೆದಿದೆ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳ ಸೇರಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ದಿಢೀರ್ ಮಳೆಯಾಗಿದ್ದು ಕೆಲವು ಕಡೆ ಜನ ಜೀವನ ಅಸ್ವಸ್ಥವಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ ಸಿಡಿಲು ಬಡಿದು ಮಹಿಳೆ ಸಾವು.
ವಿಜಯಪುರ: ರಾಜ್ಯದಲ್ಲಿ ವಿಪರೀತ ಬಿಸಿಲಿಗೆ ತತ್ತರಿಸಿದ ಜನತೆಗೆ ವರುಣನ ಆಗಮನದಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ತಂಪೆರೆದಿದೆ, ಸಮುದ್ರ ಮಟ್ಟದಿಂದ ಸುಳಿಗಾಳಿ ಹಿನ್ನೆಲೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ದಿಢೀರ್ ಮಳೆಯಾಗಿದೆ.
ಸಿಡಿಲಿಗೆ ಮಹಿಳೆ ಬಲಿ
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದ ರೈತ ಮಹಿಳೆ ಸಿಡಿಲು ಬಡಿದು ಮರಣ ಹೊಂದಿದ್ದಾರೆ. ತಾಂಬಾ ಗ್ರಾಮದ ಭಾರತಿ ಕೆಂಗನಾಳ (40) ಮೃತ್ ಮಹಿಳೆ ಹೊಲದಲ್ಲಿ ಕೆಲಸ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.