ರಾಜ್ಯಾದ್ಯಂತ ಅತಿಥಿ ಶಿಕ್ಷಕರ ಸರಣಿ ಸಾವುಗಳು ಸಂಭವಿಸಿದರು!   ಬೆಲೆ ತೋರದ ಸರ್ಕಾರದ ವಿರುದ್ಧ ಕಿಡಿ.

ಅತಿಥಿ ಶಿಕ್ಷಕ ಸರ್ಕಾರಿ ಶಾಲೆಗಳ ರಕ್ಷಕ

2024-2025 ನೇ ಸಾಲಿನ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿರುವಂತಹ ಅತಿಥಿ ಶಿಕ್ಷಕರ
ರಾಜ್ಯಾದ್ಯಂತ ಸರಣಿ ಸಾವುಗಳ ಆದರೂ ಸಹಿತ ಬೆಲೆ ತೋರದ ಸರ್ಕಾರ.

ನಾವು ಸಹ ಎಲ್ಲರಂತೆ ಕಾರ್ಯನಿರ್ವಹಿಸುತ್ತಿದ್ದೇವೆ, ಆದರೆ ನಮ್ಮ ಕಾರ್ಯಕ್ಕೆ ಇರುವ ಮನ್ನಣೆ ನಮಗೆ ಸಿಗುತ್ತಿಲ್ಲ.

“ಸರ್ಕಾರದ ಕೀಳರಿಮೆ ಮುಖ್ಯ ಕಾರಣ”

ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅಂತಹ ರಾಜ್ಯಾದ್ಯಂತ ಅತಿಥಿ ಶಿಕ್ಷಕರಿಗೆ ಒಂದು ವಿಮಾ ಸೌಲಭ್ಯವಿಲ್ಲ, ಒಂದು ದೃಢವಾದ ನೆಲೆ ಇಲ್ಲ.

ಹೀಗಿದ್ದ ಮೇಲೆ ತಾನು ಇದ್ದಾಗಲೂ ಕುಟುಂಬದ ನಿರ್ವಹಣೆ ಕಷ್ಟಕರ ಸಾವಿನ ನಂತರ ತನ್ನ ಕುಟುಂಬದ ನಿರ್ವಹಣೆ ತೀರ ಹೇಳಲೇಬಾರದಂತ ದುಸ್ಥಿತಿಗೆ ಸಾಗುವಂತಹ ಅತಿಥಿ ಶಿಕ್ಷಕರ
ಸಾವು ಬದುಕಿನ ಗೋಳು ಕೇಳುವವರು ಯಾರು…..?

ಸರ್ಕಾರಿ ನೌಕರರಿಗೆ ಆಕಸ್ಮಿಕ ಸಾವು, ಅಪಘಾತದ ಸಂದರ್ಭದಲ್ಲಿ ಅವರಿಗೆ ಸರ್ಕಾರವು ಅನುಕಂಪದ ಮೇಲೆ ಅವರ ಕುಟುಂಬಕ್ಕೆ ಕೆಲಸ ಹಾಗೂ ಇತರೆ ಪರಿಹಾರ ನೀಡುವಂತೆ ನಮ್ಮ ಅತಿಥಿ ಶಿಕ್ಷಕರಿಗೂ ಕೂಡ ಅಪಘಾತ ಹಾಗೂ ತುರ್ತು ಸಂದರ್ಭಗಳಲ್ಲಿ ಸಾವು ನೋವು ಸಂಭವಿಸಿದಾಗ ನಮ್ಮ ಅತಿಥಿ ಶಿಕ್ಷಕರ ಕುಟುಂಬಕ್ಕೆ ಸರ್ಕಾರವು ಕನಿಷ್ಠ ಪರಿಹಾರ ನೀಡಿ ಅವರ ಕುಟುಂಬಕ್ಕೆ ಅನುಕೂಲವಾಗುವಂತೆ ಕೇಳಿಕೊಳ್ಳತ್ತೇನೆ ಎಂದು ಸರ್ಕಾರಕ್ಕೆ ತಮ್ಮ ಅಳಲು ತೋಡಿಕೊಂಡ ಅತಿಥಿ ಶಿಕ್ಷಕರು

ಸರ್ಕಾರ ಎಲ್ಲಾ ಸಂಘಟನೆಗಳ ಬಗ್ಗೆ ಎಲ್ಲಾ ನೌಕರರ ಬಗ್ಗೆ ಚಿಂತಿಸುವ ಹಾಗೆ ಈ ಅತಿಥಿ ಶಿಕ್ಷಕರ  ಬಗ್ಗೆ ಕೊಂಚವಾದರೂ ಚಿಂತಿಸಲಿ ಎನ್ನುವುದೇ ನನ್ನ ಕಳಕಳಿಯ ವಿನಂತಿಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ರಾಜ್ಯ
ಕಾರ್ಯಾಧ್ಯಕ್ಷ  ಪ್ರದೀಪ್ ಮಾಳಿ.

Leave a Reply

Your email address will not be published. Required fields are marked *