ಬೆಳಗಾವಿ ಡಿ. 25: ಗೋಕಾಕ ತಾಲೂಕಿನ ದುಂಡನಾಟ್ಟಿ ಗ್ರಾಮದ ಯಲ್ಲಪ್ಪ ಪರಸಪ್ಪ ಧರೆನ್ನವರ ಅವರು ದಿನಾಂಕ: 02/12/2024 ರಂದು ಇವರು ಗೋಕಾಕ ಠಾಣೆಯಲ್ಲಿ ದೂರು ನೀಡಿದನ್ವಯ, ಯಾರೋ ಕಳ್ಳರು ದಿನಾಂಕ: 26-11-2024 ರಂದು ಬೆಳಗಿನ 3 ಗಂಟೆಯಿಂದ ದಿನಾಂಕ: 30-11-2024 ರಂದು ಮಧ್ಯಾಹ್ನ 12 ಗಂಟೆಯ ನಡುವಿನ ವೇಳೆಯಲ್ಲಿ ದುಂಡಾನಟ್ಟಿ ಗ್ರಾಮ ಹದ್ದಿಯಲ್ಲಿ ಕರೆಪ್ಪ ಗೌಡರ ಹಾಗೂ ಸಂತೋಷ ಬಂಡಿ ಇವರ ಹೊಲದ ಹತ್ತಿರ ಇರುವ ದುಂಡನಾಟ್ಟಿ ಹಳ್ಳದ ದಡದಲ್ಲಿ ಕೂರಿಸಿದ 86,500 ರೂ ಬೆಲೆಬಾಳುವ 10 ಎಚ್ ಪಿ ಒಂದು ಕರೆಂಟ್ ಮೋಟಾರ್ ಮತ್ತು 5 ಎಚ್ ಪಿ ಎರಡು ಕರೆಂಟ್ ಮೋಟಾರಗಳನ್ನು ಯಾರೋ ಕಳ್ಳತನ ಮಾಡಿರುತ್ತಾರೆ ಎಂದು ಗೋಕಾಕ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಕುರಿತು.
ಕರೆಂಟ ಮೋಟರ(ಪಂಪಸೆಟ್)ಗಳ ಪತ್ತೆ ಕುರಿತು ಡಾ: ಭೀಮಾಶಂಕರ ಎಸ್.ಗುಳೇದ ಬೆಳಗಾವಿ ಜಿಲ್ಲಾ ಪೊಲೀಸ ಅಧಿಕ್ಷಕರು ಈ ಪ್ರಕರಣದ ಪತ್ತೇಗಾಗಿ ಗೋಕಾಕ ಸಿಪಿಐ ಶ್ರೀ ಸುರೇಶಬಾಬು ಆರ್ ಬಿ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ತನಿಖಾ ತಂಡವು ಶೃತಿ ಎನ್ ಎಸ್, ಮಾನ್ಯ ಹೆಚ್ಚುವರಿ ಎಸ್ ಪಿ 01 ಮತ್ತು ಶ್ರೀ ರಾಮಗೊಂಡ ಬಿ ಬಸರಗಿ ಹೆಚ್ಚುವರಿ ಎಸ್ ಪಿ 02 ಬೆಳಗಾವಿ, ಶ್ರೀ ಡಿ ಎಚ್ ಮುಲ್ಲಾ, ಡಿಎಸ್‌ಪಿ ಗೋಕಾಕ ಇವರ ಮಾರ್ಗದರ್ಶನದಲ್ಲಿ ದಿ. 22/12/2024 ರಂದು ಕರೆಂಟ ಮೋಟರ(ಪಂಪಸೆಟ್) ಕಳ್ಳತನ ಪ್ರಕರಣದಲ್ಲಿ ತನಿಖೆ ಕೈಕೊಂಡು 04 ಜನರನ್ನು ಬಂಧಿಸಿ ವಿಚಾರಣೆ ಮಾಡಿದ್ದರಿಂದ ಕರೆಂಟ ಮೋಟರ(ಪಂಪಸೆಟ್)ಗಳನ್ನು ದುಂಡಾನಟ್ಟಿ ಹಳ್ಳದ ದಂಡೆಯಲ್ಲಿಂದ ಕಳ್ಳತನ ಮಾಡಿ, ಕರೆಂಟ್ ಮೋಟರಗಳನ್ನು ಮಾರಿ ಬಂದ 86000/ ರೂ ಹಣವನ್ನು ಮತ್ತು ಕೃತ್ಯಕ್ಕೆ ಬಳಸಿದ 04 ಲಕ್ಷ ರೂ ಕಿಮ್ಮತ್ತಿನ 01 ಗೂಡ್ಸ್ ವಾಹನ ಮತ್ತು 80 ಸಾವಿರ ರೂ ಕಿಮ್ಮತ್ತಿನ 02 ಮೋಟಾರ್ ಸೈಕಲಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಇನ್ನೂ ಈ ಪ್ರಕರಣದಲ್ಲಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಗೋಕಾಕ ಸಿಪಿಐ ಶ್ರೀ ಸುರೇಶಬಾಬು ಆರ್.ಬಿ, ಗೋಕಾಕ ಗ್ರಾಮೀಣ ಪಿಎಸ್ಐ ಶ್ರೀ ಕಿರಣ ಎಸ್ ಮೋಹಿತೆ, ಮತ್ತು ಸಿಬ್ಬಂದಿಗಳಾದ ಶ್ರೀ ಬಿ.ವಿ ನೆರ್ಲಿ, ಶ್ರೀ ಜಗದೀಶ ಗುಡ್ಲಿ, ಶ್ರೀ ಮಾರುತಿ ವಾಯ್ ಪಡದಲ್ಲಿ, ಶ್ರೀ ಡಿ ಬಿ ಅಂತರಗಟ್ಟಿ, ಶ್ರೀ ಡಿ ಜಿ ಕೊಣ್ಣೂರ, ಶ್ರೀ ಎಚ್ ಡಿ ಗೌಡಿ, ಶ್ರೀ ಎನ್ ಎಲ್ ಮಂಗಿ, ಶ್ರೀ ವಿ.ಎಲ್. ನಾಯ್ಕವಾಡಿ, ಶ್ರೀ ಎನ್ ಜಿ ದುರದುಂಡಿ ಹಾಗೂ ಬೆಳಗಾವಿಯ ಟೆಕ್ನಿಕಲ್ ಸೆಲ್‌ನ ಶ್ರೀ ಸಚೀನ ಪಾಟೀಲ ಮತ್ತು ವಿನೋದ ಠಕ್ಕನ್ನವರ ಇವರ ಕಾರ್ಯವನ್ನು ಬೆಳಗಾವಿ ಪೊಲೀಸ ಅಧೀಕ್ಷಕರು ಶ್ಲಾಘಿಸಿರುತ್ತಾರೆ.