ಲೋಕಸಭೆ ಚುನಾವಣೆಯ ಮತದಾನ ಮುಕ್ತಾಯವಾಗಿದ್ದು ಇನ್ನೇನು ಎಲ್ಲರ ಚಿತ್ತ ಫಲಿತಾಂಶದತ್ತ ಎನ್ನುವಂತೆ ಜೂನ್ 4 ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನ ಎಕ್ಸಿಟ್ ಪೋಲ್ಗಳ ಸಮೀಕ್ಷೆ ಫಲಿತಾಂಶ ಈಗ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ, ಲೆಕ್ಕಾಚಾರ ಬುಡ ಮೇಲು ಮಾಡಿದೆ ಅದೇ ರೀತಿ ಕೆಲ ಜನರು ತಮ್ಮ ನೆಚ್ಚಿನ ಪಕ್ಷ ಹಾಗೂ ತಮ್ಮ ನೆಚ್ಚಿನ ನಾಯಕರುಗಳು ಚುನಾವಣೆಯಲ್ಲಿ ಗೆಲ್ಲುತ್ತಾರೆಂದು ಬೆಟ್ಟಿಂಗ್ ಹಾಗೂ ಇನ್ನಿತರ ಸವಾಲುಗಳನ್ನು ಕೂಡ ಹಾಕುತ್ತಿದ್ದಾರೆ. ಕೆಲವರು ಪೂಜೆ, ಪುನಸ್ಕಾರ, ಹೋಮ ಹವನ ಅಂತ ಹೋದರೆ ಇನ್ನೂ ಕೆಲವು ಅಭಿಮಾನಿಗಳು ತಮ್ಮ ನಾಯಕರು ಗೆಲ್ಲಲಿ ಅಂತ ದೀರ್ಘ ದಂಡ ನಮಸ್ಕಾರ ಕೂಡ ಹಾಕುತ್ತಿದ್ದಾರೆ, ಅದೇ ರೀತಿ ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಿಯಾಂಕಾ ಜಾರಕಿಹೊಳಿ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ಗೆಲುವು ಸಾಧಿಸಲಿ ಎಂದು ತಮ್ಮ ಅಭಿಮಾನಿಗಳು ದೀರ್ಘ ದಂಡ ನಮಸ್ಕಾರ ಹಾಕಿ ತಮ್ಮ ನೆಚ್ಚಿನ ನಾಯಕಿ ಅಬೂತಪೂರ್ವ ಗೆಲುವು ಸಾಧಿಸಲಿ ಎಂದು ಹರಕೆ ಹೊತ್ತಿದ್ದಾರೆ.
ಚಿಕ್ಕೋಡಿ: ಹೌದು ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಗೆಲುವಿಗಾಗಿ
ಅಭಿಮಾನಿಗಳು ದೀರ್ಘದಂಡ ನಮಸ್ಕಾರ ಹಾಕಿದ್ದಾರೆ.
ಪ್ರಿಯಾಂಕಾ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಜೂನ್ 4 ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬೀಳಲಿರುವ ಹಿನ್ನೆಲೆಯಲ್ಲಿ ನಿಪ್ಪಾಣಿ ತಾಲೂಕಿನ ಹುನ್ನರಗಿ
ಗ್ರಾಮದ ಭಜರಂಗ ಶಿಂಗೆ ಹಾಗೂ ರಮೇಶ ಮಾಳಿಯವರು ಪ್ರಿಯಾಂಕಾ ಜಾರಕಿಹೊಳಿ ಅತ್ಯಧಿಕ ಮತಗಳಿಂದ ಗೆಲುವನ್ನು
ಸಾಧಿಸಲಿ ಎಂದು ದೀರ್ಘ ದಂಡ ನಮಸ್ಕಾರ ಹಾಕಿದರು.
ಈ ವೇಳೆ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಅಕ್ಕೋಳ ಗ್ರಾಮದ ಸಂತ ಬಾಳುಮಾಮಾ
ದೇವಸ್ಥಾನವರೆಗೆ ದೀರ್ಘ ದಂಡ ನಮಸ್ಕಾರ ಹಾಕಿ, ಪ್ರಿಯಾಂಕಾ ಜಾರಕಿಹೋಳಿ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಇದೇ ಸಂಧರ್ಭದಲ್ಲಿ ಮಾತನಾಡಿದ ಅಭಿಮಾನಿಗಳು, ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ
ಪ್ರೀಯಾಂಕಾ ಜಾರಕಿಹೋಳಿ ಅತ್ಯಧಿಕ ಮತಗಳಿಂದ ಗೆಲವು ಸಾಧಿಸಲಿ, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸರ್ಕಾರ ರಚನೆ
ಆಗಲಿ ಎನ್ನುವ ಉದ್ದೇಶದಿಂದ ಸುಮಾರು 6 ಕಿಮೀ ವರೆಗೆ ದೀರ್ಘ ದಂಡ ನಮಸ್ಕಾರ ಹಾಕಿ ದೇವರಲ್ಲಿ ಪ್ರಾರ್ಥಿಸಿಕೊಂಡಿದೇವೆ
ಎಂದರು.
ಈ ಸಂಧರ್ಭದಲ್ಲಿ ಭಾರತಿ ಬರಗಾಲೆ, ಪ್ರಕಾಶ ಬರಗಾಲೆ, ಬಸವರಾಜ ಬರಗಾಲೆ, ದೀಲಿಪ ವರಾಳೆ ಇತರರಿದ್ದರು.