ಬೆಳಗಾವಿ: ರಾಮದುರ್ಗ ತಾಲೂಕಿನ ಎಸ್ ಎಂ ಕಲೂತಿ ಸಂಯುಕ್ತ ಕ್ರೀಡಾ ವಸತಿ ಮಹಾವಿದ್ಯಾಲಯ ಚಂದರಗಿ ಸನ್ 2024 – 25 ನೆ ಸಾಲಿನ ಪ್ರವೇಶಗಳು ಆರಂಭವಾಗಿದ್ದು ಮಾರ್ಚ್ 3.2024 ರವಿವಾರದಂದು 6 ರಿಂದ 9ನೇ ತರಗತಿಯವರೆಗೆ ಸಿ ಬಿ ಎಸ್ ಸಿ ಹಾಗೂ ಕನ್ನಡ ಮಾಧ್ಯಮ ಪ್ರವೇಶ ಪರೀಕ್ಷೆ ಜರುಗಲಿದ್ದು ಆಸಕ್ತರು ಪ್ರವೇಶ ಪರೀಕ್ಷೆಗೆ ನಿಮ್ಮ ಮಗುವಿನೊಂದಿಗೆ ಹಾಜರಾಗಿ.
ಶಾಲೆಯಲ್ಲಿ ನುರಿತ ಹಾಗೂ ಅನುಭವ ಉಳ್ಳ ಶಿಕ್ಷಕವೃಂದ, ಮತ್ತು ಪ್ರತಿಭಾವಂತ ಹಾಗೂ ಅನುಭವಿಕ ತರಬೇತುದಾರರನ್ನು ಒಳಗೊಂಡಿದೆ. ಈ ಶಾಲೆಯಲ್ಲಿ ಪ್ರತಿ ವರ್ಷ ವಿವಿಧ ಕ್ರೀಡೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿ ವಿದ್ಯಾರ್ಥಿಗಳು ಪ್ರಶಸ್ತಿ ಪಡೆಯುತ್ತಾರೆ. ಅದೇ ರೀತಿ ಕನ್ನಡ ಮಾಧ್ಯಮ ಹಾಗೂ ಸಿಬಿಎಸಇ ವಿಭಾಗದಲ್ಲಿ 10 ನೇ ತರಗತಿಯ ವಾರ್ಷಿಕ ಪರೀಕ್ಷೆಗಳಲ್ಲಿ ಶೇಕಡಾ ನೂರಕ್ಕೆ ನೂರರಷ್ಟು (100%) ಫಲಿತಾಂಶ.
ಈ ಶಾಲೆಯ ಕ್ರೀಡಾ ಸಾಧನೆಯನ್ನು ಗುರುತಿಸಿ, ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯ ಸೈಕ್ಲಿಂಗ, ಖೋ-ಖೋ, ಕುಸ್ತಿ ಹಾಗೂ ಅಥ್ಲೆಟಿಕ್ ಕ್ರೀಡೆಗಳ ಅಕಾಡೆಮಿಯನ್ನು ಮಂಜೂರು ಮಾಡಿದೆ.