ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿಗೆ ಯಾವುದೇ ಸಂದರ್ಭದಲ್ಲಿ ಭದ್ರತೆಯಾಗಲಿ, ಯಾರಾದರೂ ಕಿತ್ತಾಡಿದರು, ಅವಘಡ ಅಪಘಾತಗಳು ಸಂಭವಿಸಿದಾಗಲೂ, ಹಬ್ಬ ಹರಿದಿನ ಜಾತ್ರೆಗಳಿದ್ದಾಗಲೂ ತಮ್ಮ ಮನೆ ಮಡದಿ ಮಕ್ಕಳು ಇವೆಲ್ಲವುಗಳನ್ನು ತೊರೆದು ರಕ್ಷಕನಾಗಿ ನಿಲ್ಲುವಂತಹ ಇಲಾಖೆ ಪೊಲೀಸ್ ಇಲಾಖೆ ಇಲ್ಲಿ ಕೆಲಸ ಮಾಡುವ ಅದೆಷ್ಟೋ ಪ್ರಾಮಾಣಿಕ ಪೊಲೀಸರು ತಮ್ಮ ನಿಸ್ವಾರ್ಥ ಸೇವೆಯಿಂದ ಸೇವೆಯನ್ನು ಸಲ್ಲಿಸಿ ಹೆಸರನ್ನು ಗಳಿಸಿದ್ದಾರೆ.
ನಾವೆಲ್ಲರೂ ಹೇಳುವಂತದ್ದು ಭಾರತ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲಿ ಎಲ್ಲರೂ ಸಮಾನರು ಜೊತೆಗೆ ಎಲ್ಲರಿಗೂ ತಮ್ಮದೇ ಆದಂತಹ ಹಕ್ಕನ್ನ ಹೊಂದಿದ್ದಾರೆ ಎಂಬುದನ್ನು ಗರ್ವದಿಂದ ಹೇಳುತ್ತೇವೆ ಆದರೆ ಚುನಾವಣಾ ಅಂತ ಬಂದಾಗ ಬಿಗಿ ಬಂದೋಸ್ತು ಮಾಡ್ಲಿಕ್ಕೆ ಪೊಲೀಸರು ಬೇಕು, ಗಲಾಟೆಗಳು ಆಗದಂತೆ ತಡೆಹಿಡಿಯಲಿಕ್ಕೆ ಪೊಲೀಸರು ಬೇಕು ಮತದಾನವನ್ನು ಶಾಂತಿಯುತವಾಗಿ ನಡೆಸಿಕೊಡಲು ಪೊಲೀಸರು ಬೇಕು ಆದರೆ ಕೆಲವೊಂದು ಪೊಲೀಸರು ಮತದಾನದಿಂದ ಹೊರಗೆ ಉಳಿಯುತ್ತಿದ್ದಾರೆ ಕಾರಣ ಅವರಿಗೆ ಸೂಕ್ತ ಸಂದರ್ಭದಲ್ಲಿ ಬ್ಯಾಲೆಟ್ ಪೇಪರ್ಗಳನ್ನು ಕಳಿಸೋದೇ ಇರುವುದು ಆನ್ಲೈನ್ ಮುಖಾಂತರವೂ ಕೂಡ ಮತದಾನಕ್ಕೆ ಅವಕಾಶ ಮಾಡಿಕೊಡದೆ ಇರುವುದು.
ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ನನ್ನ ಸಹೋದರಿಗೆ ಫೋನ್ ಮುಖಾಂತರ ಇವತ್ತು ಮತದಾನ ಮಾಡುವುದಿಲ್ಲ ಎಂದು ಕೇಳಿದಾಗ ಇಲ್ಲಪ್ಪ ಕರ್ತವ್ಯದ ಮೇಲಿದ್ದೇವೆ ನಮಗೆ ಮುಂಚಿತವಾಗಿ ಬ್ಯಾಲೆಟ್ ಪೇಪರ್ ಗಳನ್ನು ಕೂಡ ಕಳಿಸಿರುವುದಿಲ್ಲ ಎಂಬುದನ್ನ ತಿಳಿಸಿದರು ಈ ಸಮಸ್ಯೆ ಅವರದು ಅಷ್ಟೇ ಅಲ್ಲ ಹೀಗೆ ಅನೇಕರ ಸಮಸ್ಯೆಯಾಗಿದೆ. ಸರ್ಕಾರ ನೂರಕ್ಕೆ ನೂರರಷ್ಟು ಮತದಾನ ಆಗಬೇಕೆಂಬ ಜಾಹೀರಾತುಗಳನ್ನು ಹೊರಡಿಸುತ್ತಾರೆ ಯಾರು ಮತದಾನದಿಂದ ಹೊರಗೆ ಉಳಿಯಬಾರದೆಂಬುದನ್ನ ಹೇಳುತ್ತಾರೆ ಆದರೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಕೆಲಸ ಗೈಯುವ ಇಂತಹ ಅದೆಷ್ಟೋ ಜನರಿಗೆ ಮತದಾನ ಎಂಬ ಹಬ್ಬದಿಂದ ಹೊರಗೆ ಉಳಿಯುತ್ತಿರುವುದು ನಿಜಕ್ಕೂ ದುರಾದೃಷ್ಟಕರ.
ಕೂಡಲೆ ಸರ್ಕಾರ ಎಚ್ಚೆತ್ತುಕೊಂಡು ಮುಂಬರುವ ಚುನಾವಣೆಯಲ್ಲಿ ಆದರೂ ಕೂಡ ಅವರು ತಮ್ಮ ಹಕ್ಕನ್ನ ಚಲಾಯಿಸುವಂತೆ ಆಗಬೇಕೆಂಬುದು ಎಲ್ಲರ ಆಶಯವಾಗಿದೆ. ಭಾರತದಲ್ಲಿ ಹುಟ್ಟಿರುವಂತ ಪ್ರತಿಯೊಂದು ಪ್ರಜೆ ತನ್ನ ಹಕ್ಕನ್ನು ಚಲಾಯಿಸುವಂತಾಗಬೇಕು.
ಬರಹ: ಶಿವಾನಂದ ತೋರಣಗಟ್ಟಿ
ಶಿಕ್ಷಕರು, ಪದವಿ ಪೂರ್ವ ಮಹಾವಿದ್ಯಾಲಯ ಚಂದರಗಿ