ಇದು ಮುಕ್ತ ನ್ಯೂಜ್ ವರದಿಗೆ ಸಿಕ್ಕ ಫಲ ಶೃತಿ ಅಂತ ಹೇಳುವದಕ್ಕಿಂತ ಮಾನವೀಯ ಕಳ ಕಳಿಯ ವರದಿಯನ್ನು ನೋಡಿ ಸ್ಪಂದಿಸಿದ ವಿಶ್ವಾಸ್ ಫೌಂಡೇಶನ್ ಅವರ ಸಹಾಯದ ಗುಣ ದೊಡ್ಡದು ಅಂದರೆ ತಪ್ಪಾಗಲಿಕ್ಕಿಲ್ಲ.
ಜೂನ್ ತಿಂಗಳಲ್ಲಿ ಸಿದ್ದಪ್ಪ ಪಟುಗುಂದಿ ಕುರಿತು ವರದಿ ಮಾಡಿದ ಮುಕ್ತ ನ್ಯೂಸ್ 👇https://muktha.live/konnurinsiddappyembchaladankmallanige/
ಬೆಳಗಾವಿ ಸೆ.14: ಕೆಲ ದಿನಗಳ ಹಿಂದಷ್ಟೇ ಆರ್ಥಿಕ ಸಭಲತೆ ಇಲ್ಲದ ವಿಶೇಷ ಚೇತನ ಸಿದ್ಧಪ್ಪ ಪಟಗುಂದಿ ಅವರೊಳಗಿನ ಅದಮ್ಯ ಆಸೆಯ ಕುರಿತು ಹಾಗೂ ಅವರಿಗೆ ಅಗತ್ಯ ಇರುವ ಸಹಾಯದ ಕುರಿತು ಮತ್ತು ಅವರಲ್ಲಿ ಇರುವ ಸಾಧನೆಯ ಸಾಮರ್ಥ್ಯದ ಕುರಿತಾಗಿ ವರದಿ ಮಾಡಿದ್ದನ್ನು ನೋಡಿದ ವಿಶ್ವಾಸ್ ಫೌಂಡೇಶನ್ ಪದಾಧಿಕಾರಿಗಳು ಸಿದ್ದಪ್ಪ ಪಟಗುಂದಿ ಅವರಿಗೆ ಅಗತ್ಯವಿರುವ ಕೃತಕ ಕಾಲಿನ ಜೋಡಣೆಯ ಕೆಲಸ ಆರ್ಥಿಕ ಸಹಾಯ ಮಾಡಿದ್ದು .
ಸದ್ಯ ಗೋಕಾಕ ತಾಲೂಕಿನ ಕೊಣ್ಣೂರಿನ ಕ್ರೀಡಾಪಟು ಸಿದ್ದಪ್ಪ ಪಟಗುಂದಿ ಸೆಪ್ಟಂಬರ್ 16 ರಿಂದ 21 ರವರೆಗೆ ಈಜಿಪ್ಟ್ ದೇಶದ ಕೈರೋ ನಲ್ಲಿ ನಡೆಯಲಿರುವ ವೀಲ್ ಚೇರ್ ಹ್ಯಾಂಡ್ ಬಾಲ್ ವರ್ಡ್ ಚಾಂಪಿಯನ್ಶಿಪ್ 2024ರ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸತತವಾದ ಪರಿಶ್ರಮ ಮತ್ತು ಸಾಧಿಸುವ ಛಲ ಒಂದಿದ್ದರೆ ಏನನ್ನಾದರೂ ಸಾಧಿಸಬಹುದು ಅನ್ನುವ ಮಾತಿನೊಂದಿಗೆ ಸಾಧಿಸುವ ಮನಸ್ಸಿರುವವರಿಗೆ ಅಗತ್ಯವಿರುವ ಆರ್ಥಿಕ ಸಹಾಯದ ಉಪಕಾರ ಮಾಡುವ ಮನೋಭಾವವು ಅಷ್ಟೇ ಮುಖ್ಯವಾಗಿದೆ. ಸದ್ಯ ನಮ್ಮ ವರದಿಯನ್ನು ನೋಡಿ ವಿಶ್ವಾಸ್ ಫೌಂಡೇಶನ್ ಸಹಾಯ ಹಸ್ತ ಮಾಡಿದ್ದು ಕ್ರೀಡಾಪಟು ಸಿದ್ದಪ್ಪ ಪಟಗುಂದಿ ಮುಕ್ತ ನ್ಯೂಸ್ ತಂಡಕ್ಕೆ ಮತ್ತು ಸಹಾಯ ಮಾಡಿದ ವಿಶ್ವಾಸ್ ಫೌಂಡೇಶನ್ ಪದಾಧಿಕಾರಿಗಳಿಗೆ ಧನ್ಯವಾದಗಳು ತಿಳಿಸಿದ್ದು ಭಾರತದ ಕೀರ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಮ್ಮ ತಂಡದಿಂದ ವಿಶೇಷ ಶ್ರಮ ವಹಿಸುವುದಾಗಿ ತಿಳಿಸಿದ್ದಾರೆ.
ಕಳೆದ ಎರಡು ವಾರಗಳಿಂದ ರಾಜಸ್ಥಾನದಲ್ಲಿ ಭಾರತ ತಂಡದ ವ್ಹೀಲ್ ಚೇರ್ ಕ್ರೀಡಾಪಟುಗಳಿಗೆ ಕ್ರೀಡಾ ತರಬೇತಿ ನೀಡಲಾಗಿದ್ದು ಇಂದು ದಿ. ಸೆ.14 ರಂದು ದೇಶದ ರಾಜಧಾನಿ ದೆಹಲಿ ವಿಮಾನ ನಿಲ್ದಾಣದ ಮೂಲಕ ಪಂದ್ಯಾವಳಿ ನಡೆಯುವ ಈಜಿಪ್ಟ್ ದೇಶಕ್ಕೆ ಕೊಣ್ಣೂರಿನ ಛಲದಂಕಮಲ್ಲ ಸಿದ್ದಪ್ಪ ಪಟುಗುಂದಿ ಸೇರಿ ಇನ್ನುಳಿದ ಭಾರತ ತಂಡದ ವೀಲ್ ಚೇರ್ ಹ್ಯಾಂಡ್ ಬಾಲ್ ಕ್ರೀಡಾಪಟುಗಳು ತೆರಳಿದರು.