ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್: 10 ಜನ ಹೋರಾಟಗಾರರು, 14 ಜನ ಪೊಲೀಸರಿಗೆ ಗಾಯ.

ಬೆಳಗಾವಿ ಡಿ. 10: ಬೆಳಗಾವಿಯ  ಸುವರ್ಣ ಸೌಧದಲ್ಲಿ  ನಡೆಯುತ್ತಿರುವ  ಚಳಿಗಾಲ ಅಧಿವೇಶನದ ಎರಡನೇ ದಿನ 2A ಮೀಸಲಾತಿಗಾಗಿ  ಪಂಚಮಸಾಲಿ ಹೋರಾಟಗಾರರು  ಸುವರ್ಣ ಸೌಧದ ಎದುರಿರುವ ಕೊಂಡಸಕೊಪ್ಪದಲ್ಲಿ ಮೀಸಲಾತಿ ಕುರಿತು ಪ್ರತಿಭಟನೆ ಆರಂಭಿಸಿದ್ದರು. ಇದಾದ ನಂತರ ಪ್ರತಿಭಟನಾ ನಿರಂತರರು  ಸುವರ್ಣ ಸೌಧದ ಮುತ್ತಿಗೆಗೆ  ಯತ್ನಿಸಿದ ಸಮಯದಲ್ಲಿ   ಹೋರಾಟಗಾರರ ಮೇಲೆ  ಲಾಠಿ ಚಾರ್ಜ ಮಾಡಿದ ಪೊಲೀಸರು.

ಲಾಠಿ ಚಾರ್ಜ್ ಕುರಿತು ಸ್ಪಷ್ಟನೆ ನೀಡಿದ ಬೆಳಗಾವಿ IG, DC, SP, ಕಮಿಷನರ್.

ನಿನ್ನೆಯ ದಿನ ಕೋರ್ಟ್ ಆದೇಶದ ಮೇರೆಗೆ ಪಂಚಮಸಾಲಿ  ಹೋರಾಟಗಾರರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು. ಅದರ ಪ್ರಕಾರ ಸಮಾಜದ ಮುಖಂಡರು ಹಾಗೂ ಪ್ರತಿಭಟನಾಕಾರರು ಕೂಡ ಒಪ್ಪಿಕೊಂಡಿದ್ದರು. ಆದರೆ  ಪ್ರತಿಭಟನಾ  ಸ್ಥಳವನ್ನು ಬಿಟ್ಟು ಸುವರ್ಣಸೌಧ  ಒಳಗೆ ನುಗ್ಗಲು  ಯತ್ನಿಸಿದ ಪ್ರತಿಭಟನಾಕಾರರು  ಇದರಿಂದ ಪ್ರತಿಭಟನಾ ನಿರಂತರರು ಕಾನೂನಿನ ಸುವ್ಯವಸ್ಥೆಯನ್ನು ಕೈಗೆತ್ತಿಕೊಂಡಿದ್ದರಿಂದ ಪರಿಸ್ಥಿತಿ  ಉದ್ವಿಗ್ನಗೊಂಡು ಪೊಲೀಸರ ಮೇಲೆ ಕಲ್ಲು ತೂರಾಟ ಆರಂಭಿಸಿದಾಗ, ಪೊಲೀಸರು ಅನಿವಾರ್ಯವಾಗಿ ಹೋರಾಟಗಾರರ ಮೇಲೆ ಲಾಟಿಚಾರ್ಜ್ ಮಾಡಲಾಯಿತು   ಎಂದು ಬೆಳಗಾವಿ ಉತ್ತರ ವಲಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬೆಳಗಾವಿ ಜಿಲ್ಲಾಧಿಕಾರಿ, ಬೆಳಗಾವಿ ವರಿಷ್ಠಾಧಿಕಾರಿ, ಪೊಲೀಸ್ ಆಯುಕ್ತರು  ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.

ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ 70 ಜನರ ಮೇಲೆ FIR…!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ  70 ಜನರನ್ನು  ವಶಪಡಿಸಿಕೊಂಡು ಅವರ ಮೇಲೆ ಪ್ರಕರಣ ದಾಖಲಿಸಿ  ಮುಂದಿನ ಪ್ರಮುಖ ಗೊಳ್ಳಲಾಗಿದೆ ಎಂದರು. ಇನ್ನು ಈ ಪ್ರಕರಣ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಈ ಹೋರಾಟ ಸಂಘರ್ಷದ ಸ್ವರೂಪ ಪಡೆದ ವೇಳೆ 14 ಜನ ಪೊಲೀಸರು ಹಾಗೂ 10 ಜನ ಹೋರಾಟಗಾರರು ಗಾಯಗೊಂಡಿದ್ದಾರೆ.