ಪ್ರತಿ ವರ್ಷ ಜೂನ್ ತಿಂಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವ ಪ್ರಾರಂಭದಲ್ಲಿ ಜುಲೈ ಹಾಗೂ ಅಗಸ್ಟ್ ತಿಂಗಳಲ್ಲಿ ನಡೆಯುವ ಕ್ರೀಡಾಕೂಟಗಳ ತರಬೇತಿಯ ಸಲುವಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಕ್ರೀಡಾ ಅಭ್ಯಾಸ ನಡೆದಿರುತ್ತದೆ ಹಾಗೆ ರಾಜ್ಯದ ಕೆಲವು ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಇರುವುದರಿಂದ ಊರಲ್ಲಿರುವ ಶಾಲೆ ಮುಗಿಸಿದ ಹಳೆಯ ವಿದ್ಯಾರ್ಥಿಗಳು ಓದುತ್ತಿರುವ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ಕೊಡುವ ನೆಪದಲ್ಲಿ ಬಂದು ಶಾಲೆಯಲ್ಲಿರುವ ವಿದ್ಯಾರ್ಥಿನಿಯರಿಗೆ ಆಟವನ್ನು ಕಲಿಸುವ ನೆಪದಲ್ಲಿ ಹುಡುಗಿಯರನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಒಂದು ಮಂಡ್ಯ ಜಿಲ್ಲೆಯ ಪ್ರೌಢಶಾಲೆಯಲ್ಲಿ ನಡೆದಿದೆ.
ಮಂಡ್ಯ ಜು.09: ಹೌದು ಇಡೀ ರಾಜ್ಯವೇ ಶಾಕ್ ಆದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದು ಶಾಲಾ ವಿದ್ಯಾರ್ಥಿನಿಯರಿಗೆ ಆಟ ಕಲಿಸುವ ನೆಪದಲ್ಲಿ ಪ್ರತಿದಿನ ಶಾಲೆಗೆ ಬಂದ ಹಳೆಯ ವಿದ್ಯಾರ್ಥಿ ಒಬ್ಬ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಯೋಗಿ ಎಂಬ ಹೆಸರಿನ ಕಿರಾತಕ ವಿದ್ಯಾರ್ಥಿಗಳಿಗೆ ಕ್ರೀಡೆ ಹಾಗೂ ಡ್ರಾಯಿಂಗ್ ಹೇಳಿಕೊಡೋ ನೆಪದಲ್ಲಿ ಹೀನ ಕೃತ್ಯ ಎಸಿಗಿದ್ದಾನೆ ಮೊದಲಿಗೆ ಅಣ್ಣನಂತೆ ನಂಬಿಸಿ ವಿದ್ಯಾರ್ಥಿನಿಯರ ನಗ್ನ ಫೋಟೋಗಳನ್ನು ತೆಗೆದು ಬಳಿಕ ನಿಮ್ಮ ತಂದೆ ತಾಯಿಯರಿಗೆ ಫೋಟೋಗಳನ್ನು ತೋರಿಸುವದಾಗಿ ಬ್ಲಾಕ್ಮೇಲ್ ಮಾಡುತ್ತಿದ್ದಾನೆ ಹೀಗೆ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ.
ಕ್ರೀಡೆಯಲ್ಲಿ ಆಸಕ್ತಿ ಇರುವ ಬಾಲಕಿಯರನ್ನೇ ಟಾರ್ಗೆಟು ಮಾಡುತ್ತಿದ್ದ ಈತ ಶಾಲೆಯಿಂದ ಬೈಕ್ ಮೇಲೆ ಡ್ರಾಪ್ ಕೊಡುವ ನೆಪದಲ್ಲಿ ಹಾಗೂ ಕ್ರೀಡೆ ಹೇಳಿಕೊಡುವ ನೆಪದಲ್ಲಿ ಅವರನ್ನು ಮೈ ಕೈ ಮುಟ್ಟಿ ಬಳಸಿಕೊಂಡಿದ್ದಾನೆ ಅದೇ ರೀತಿ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವ ನಗ್ನ ಫೋಟೋಗಳನ್ನು ತೆಗೆಯುತ್ತಿದ್ದನು, ಇದರಿಂದ ಬೇಸತ್ತಿದ್ದ ಶಾಲೆಯ ನಾಲ್ವರು ಬಾಲಕಿಯರು ಸೇರಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ, ಅದೇ ರೀತಿ ಈ ದೂರಿನ ಅನ್ವಯ ಶಾಲೆಗೆ ದಿಢೀರನೆ ಭೇಟಿ ನೀಡಿದ ಅಧಿಕಾರಿಗಳು ವಿಚಾರಣೆ ಮಾಡಿದಾಗ ಈ ಘೋರ ಕೃತ್ಯ ಬೆಳಕಿಗೆ ಬಂದಿದೆ ಅಧಿಕಾರಿಗಳು ನೀಡಿದ ಈ ದೂರಿನ ಆಧಾರದ ಮೇಲೆ ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 354A 354D 509 ಅಡಿ ಕೇಸ್ ದಾಖಲಿಸಲಾಗಿದೆ.