ಕೊಲ್ಕತ್ತಾ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದ್ದು ಈ ಪ್ರಕರಣದ ಕುರಿತು ದೇಶ ವ್ಯಾಪ್ತಿ ಆಕ್ರೋಶ ವ್ಯಕ್ತವಾಗಿದೆ ಅದೇ ರೀತಿ ಇಂತಹ ಪ್ರಕರಣಗಳು ಮೇಲಿಂದ ಮೇಲೆ ಲೈಂಗಿಕ ಕಿರುಕುಳ ಹಾಗೂ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಪ್ರಕರಣಗಳು ಬೆಳಕಿಗೆ ಬಂದರು ಕೂಡ ಕಾಮುಕರ ಅಟ್ಟಹಾಸ ಮಾತ್ರ ತಗ್ಗಿಲ್ಲ.
ಬೆಳಗಾವಿ ಆ.22: ಹೌದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಮುದಿ ವಯಸ್ಸಿನ ಕಾಮುಕನೊಬ್ಬ ಅಪ್ರಾಪ್ತ ಬಾಲಕಿಗೆ ದುಡ್ಡು ನೀಡುವ ಆಮಿಷ ಒಡ್ಡಿ ಬಾಲಕಿಯ ಖಾಸಗಿ ಅಂಗಾಂಗಗಳನ್ನು ಸ್ಪರ್ಶಿಸಿ ಲೈಂಗಿಕ ವಿಕೃತ ಮೆರೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ನಿಪ್ಪಾಣಿಯ ಬಾದಲ್ ಪ್ಲಾಟ್ ಎಂಬಲ್ಲಿ ಈ ಪ್ರಕರಣ ನಡೆದಿದ್ದು ಬಾಲಕಿಗೆ 10 ರೂಪಾಯಿಗಳ ನೀಡುವ ಆಮಿಷ ತೋರಿಸಿ ಮುದಿ ವಯಸ್ಸಿನ ವಿಕೃತಕಾಮಿ ಹತ್ತು ವರ್ಷದ ಬಾಲಕಿಯ ಅಂಗಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಬಾಲಕಿಯು ಮನೆಯಲ್ಲಿ ಆಗಾಗ ತನ್ನ ಅಂಗಾಂಗವನ್ನು ಮುಟ್ಟಿ ಗಮನಿಸುತ್ತಿದ್ದಾಗ ಬಾಲಕಿಯ ಪಾಲಕರು ನೋಡಿದ್ದಾರೆ. ಇದರ ಕುರಿತು ಕೇಳಿದ್ದಾಗ ಬಾಲಕಿ ವಿಷಯವನ್ನು ಪಾಲಕರ ಮುಂದೆ ತಿಳಿಸಿದ್ದಾಳೆ. ಇದರಿಂದ ಪಾಲಕರು ಆರೋಪಿಯನ್ನು ಥಳಿಸಿ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಈ ಅಮಾನವೀಯ ಕೃತ್ಯ ಎಸಗಿದ ಆರೋಪಿಯನ್ನು ಆಸಿಫ್ ಬಾಗವಾನ್ ಎಂದು ಗುರುತಿಸಲಾಗಿದೆ. ಇಂತಹ ಮಾನಗೆಟ್ಟ ವಿಕೃತ ಮನಸ್ಸಿನ ವಿಕೃತಕಾಮಿಗಳಿಗೆ ಕಠಿಣ ಶಿಕ್ಷೆಗಳಾಗುವವರೆಗೆ ದೇಶದಲ್ಲಿ ಇಂತಹ ಪ್ರಕರಣಗಳು ತಗ್ಗುವುದಿಲ್ಲ.