ನಾಳೆ ಬೆಳಿಗ್ಗೆ 10 : 30 ಕ್ಕೆ SSLC ಪರೀಕ್ಷೆ ಫಲಿತಾಂಶ ಪ್ರಕಟ.

ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಅಂತೂ ಪರೀಕ್ಷೆ ಫಲಿತಾಂಶದ ದಿನಾಂಕವನ್ನು ಘೋಷಣೆ ಮಾಡಿದ ಶಿಕ್ಷಣ ಇಲಾಖೆ ಹೌದು ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ನಡೆದಂತಹ 2023- 24 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಮೌಲ್ಯಮಾಪನ ಮುಕ್ತಾಯವಾಗಿದ್ದು ಇದೀಗ ಶಿಕ್ಷಣ ಇಲಾಖೆ ಫಲಿತಾಂಶದ ದಿನಾಂಕವನ್ನು ಘೋಷಿಸಿದೆ.

ಬೆಂಗಳೂರು: ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ-1 ನ್ನು ದಿನಾಂಕ: 25:03:2024 ರಿಂದ 06:04: 2024 ರವೆಗೆ ನಡೆದ ಪರೀಕ್ಷೆ ಮೌಲ್ಯ ಮಾಪನ ಮುಕ್ತಾಯವಾಗಿದ್ದು ಅದರ ಫಲಿತಾಂಶ ನಾಳೆ ದಿನಾಂಕ 09: 05:2024 ರಂದು ಬೆಳಿಗ್ಗೆ 10:30 ಕ್ಕೆ  ಫಲಿತಾಂಶವನ್ನು https://karresults.nic. ಜಾಲತಾಣದಲ್ಲಿ ವೀಕ್ಷಿಸಬಹುದು.