ಶಿಕ್ಷಕ ಎಂಬ ವೃತ್ತಿ ಇನ್ನೊಬ್ಬರ ಜೀವನ ರೂಪಿಸಿ ಉದ್ದಾರ ಮಾಡುವಂತದು ಹೊರತು ಇನ್ನೊಬ್ಬರ ಜೀವನ ಹಾಳು ಮಾಡುವುದಲ್ಲ ! ತಂದೆ ತಾಯಿಯನ್ನು ಬಿಟ್ಟರೆ ಶಿಕ್ಷಕರೆ ನಮ್ಮ ಜೀವನದ ದಾರಿ ತೋರುವ ಮಾರ್ಗದರ್ಶಕರು ಇಂತಹ ಹುದ್ದೆಗೆ ಕಳಂಕ ತರುವ ಕೆಲ ಕಾಮುಕ ಶಿಕ್ಷಕರಿಂದ ಪ್ರಾಮಾಣಿಕ ಶಿಕ್ಷಕರನ್ನು ಕೂಡ ಅನುಮಾನದಿಂದ ನೋಡುವ ಹಾಗೆ ಆಗಿದೆ. ಕೋಲಾರ ಜಿಲ್ಲೆಯ ವಸತಿ ಶಾಲೆಯ ಶಿಕ್ಷಕನೊಬ್ಬ ಸ್ವತಃ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋಗಳನ್ನು ತನ್ನ ಮೊಬೈಲನಲ್ಲಿ ಚಿತ್ರಕರಿಸಿ ಇದೀಗ ಪೋಕ್ಸೋ ಕಾಯ್ದೆ ಅಡಿ ಜೈಲಿನ ಅತಿಥಿಯಾಗಿದ್ದಾನೆ.
ಕೋಲಾರ ಸೆ.7: ಇತ್ತೀಚಿಗೆ ಅತ್ಯಾಚಾರ, ಲೈಂಗಿಕ ಕಿರುಕುಳ, ಹಾಗೂ ಅಪ್ರಾಪ್ತ ಬಾಲಕಿಯರ ಲೈಂಗಿಕ ದೌರ್ಜನ್ಯ ಹೀಗೆ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಆದರೆ ಇಂತಹ ವಿಕೃತ ಕಾಮುಕರಿಗೆ ಕಠಿಣ ಶಿಕ್ಷೆ ಆಗುವ ತನಕ ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವೇ ಎನ್ನುವಂತಾಗಿದೆ. ಹೌದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಒಂದರಲ್ಲಿ ಚಿತ್ರಕಲಾ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕನೊಬ್ಬ 2023 ಡಿಸೆಂಬರ್ 17 ರಂದು ವಿದ್ಯಾರ್ಥಿಗಳಿಂದ ಶೌಚಾಲಯ ಗುಂಡಿಯನ್ನು ಸ್ವಚ್ಛಗೊಳಿಸುವ ಆರೋಪದಲ್ಲಿ ಶಿಕ್ಷಕನ ತನಿಖೆ ನಡೆಸಲಾಗುತ್ತಿತ್ತು ಆದರೆ ಆ ತನಿಖೆ ವೇಳೆ ಆಘಾತಕಾರಿ ಸುದ್ದಿ ಒಂದು ಬೆಳಕಿಗೆ ಬಂದಿತ್ತು.
ಶೌಚಾಲಯ ಗುಂಡಿ ಸ್ವಚ್ಛ ಮಾಡಿಸಿದ ಪ್ರಕರಣದಲ್ಲಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕನನ್ನು ವಿಚಾರಣೆ ಮಾಡುವ ವೇಳೆ ಆಘಾತಕಾರಿ ಪ್ರಕರಣ ಒಂದು ಬೆಳಕಿಗೆ ಬಂದಿದೆ ಶಿಕ್ಷಕ ಮುನಿಯಪ್ಪನ ಬಳಿ ಇದ್ದ ನಾಲ್ಕು ಮೊಬೈಲ್ ಗಳನ್ನು ಪರಿಶೀಲನೆ ಮಾಡಿದಾಗ ಶಿಕ್ಷಕನ ಮೊಬೈಲ್ನಲ್ಲಿ ಹೆಣ್ಣು ಮಕ್ಕಳ ನಗ್ನ ವಿಡಿಯೋಗಳು ಹಾಗೂ ವಿದ್ಯಾರ್ಥಿಗಳ ಅಶ್ಲೀಲ ಪೋಟೋಗಳು ಸೇರಿ 5 ಸಾವಿರಕ್ಕು ಹೆಚ್ಚು ವಿಡಿಯೋ ಪತ್ತೆಯಾಗಿದ್ದವು ಹೀಗಾಗಿ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಕಾಮುಕ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು.
ಮೊಬೈಲ್ ನಲ್ಲಿ ಹೆಣ್ಣು ಮಕ್ಕಳ ನಗ್ನ ವಿಡಿಯೋಗಳು ಹಾಗೂ ಫೊಟೋ ಮಾಡಿ ಇಟ್ಟುಕೊಂಡಿದ್ದ ಮತ್ತು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿರುವ ಆರೋಪ ಎದುರಿಸುತ್ತಿರುವ ಮಾಲೂರು ತಾಲೂಕಿನ ವಸತಿ ಶಾಲೆಯ ಶಿಕ್ಷಕ ಮುನಿಯಪ್ಪ ಆತನ ವಿರುದ್ಧ ಪೋಕ್ಸೋ ಕೇಸ್ ರದ್ದುಗೊಳಿಸುವಂತೆ ಕರ್ನಾಟಕ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ. ಆದರೆ ಕಾಮುಕ ಶಿಕ್ಷಕನ ಹಿನ್ನೆಲೆ ತಿಳಿದು ಕೋರ್ಟ್ ಆತನ ಅರ್ಜಿಯನ್ನು ರದ್ದುಗೊಳಿಸಿದೆ.