ಮೃಣಾಲ ಹೆಬ್ಬಾಳ್ಕರ ನಾಮ ಪತ್ರ ಸಲ್ಲಿಸುವ ಮುನ್ನ ಮನೆಯಲ್ಲಿ ವಿವಿಧ ಮಠಾಧೀಶರ ಪಾದ ಪೂಜೆ

ಇಂದು ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳ್ಕರ್ ನಾಮ ಪತ್ರ ಸಲ್ಲಿಸುವ ಮುನ್ನ ಮನೆಯಲ್ಲಿ ವಿವಿಧ ಮಠಾಧೀಶರ ಪಾದ ಪೂಜೆ ಮಾಡಿದರು. ಜೊತೆಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಫಲ ಪುಷ್ಪಗಳನ್ನು ನೀಡಿ ಸತ್ಕರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಗ ಮೃಣಾಲ ಹೆಬ್ಬಾಳ್ಕರ್ ಬೆಳಗಾವಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದು, ಮಗನ ಗೆಲುವಿಗಾಗಿ ಕ್ಷೇತ್ರದಾದಂತ್ಯ ಹಗಲಿರುಳು ಸುತ್ತಾಡಿ, ಮತಯಾಚನೆ ಮಾಡುವುದು ಒಂದು ಕಡೆ ಆದರೆ ಜಿಲ್ಲೆಯಲ್ಲಿನ ವಿವಿಧ ಮಠ ಮಾನ್ಯಗಳಿಗೆ ಹೋಗಿ ಮಠಾಧೀಶರ ಬೆಂಬಲ ಕೋರುತ್ತಿದ್ದಾರೆ. ಇಂದು ಮಗ್ ಮೃಣಾಲ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೊದಲು ಜಿಲ್ಲೆಯ ಹಲವು ಮಠಾಧೀಶರನ್ನು ಮನೆಗೆ ಆಹ್ವಾನಿಸಿ ಮಗನಿಂದ ಪಾದ ಪೂಜೆ ಸಲ್ಲಿಸಿ ಸತ್ಕರಿಸಿ ಅವರಿಂದ ಆಶೀರ್ವಾದ ಪಡೆದುಕೊಂಡರು. ಸುಮಾರು ಜಿಲ್ಲೆಯ 25 ಮಠಾಧೀಶರು ಭಾಗಿಯಾಗಿದ್ದು ಅವರಿಂದ ಆಶೀರ್ವಾದ ಪಡೆದರು. ನಂತರ ಮೃಣಾಲ ಹೆಬ್ಬಾಳ್ಕರಗೆ ಮಠಾಧೀಶರೆಲ್ಲರು ಆಶೀರ್ವಾದ ಮಾಡಿದರು.