ಲೋಕಸಭೆ ಚುನಾವಣೆ ದಿನದಿಂದ ದಿನ ರಂಗೇರುತ್ತಿದು ಉಭಯ ನಾಯಕರ ಪರಸ್ಪರ ಟೀಕಿಸುವುದುರ ಜೊತೆಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದೇ ರೀತಿ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುಧ್ದ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮೋದಿ ಸತ್ತರೆ ಮುಂದೆ ಯಾರು ಪ್ರಧಾನಿ ಆಗುದಿಲ್ಲವೇ? ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ಬೆಳಗಾವಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಸಾವಿನ ಮಾತು ಆಡಿ ವಿವಾದ ಸೃಷ್ಟಿ ಮಾಡಿದ್ದಾರೆ. ನರೇಂದ್ರ ಮೋದಿ ಅವರು ಸತ್ತರೆ ಮುಂದೆ ಯಾರು ಪ್ರಧಾನಿ ಆಗುವುದಿಲ್ಲವೇ.? ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದ್ದರು ಕೂಡ ಯಾರೂ ಪ್ರಧಾನಿ ಆಗಲು ಅರ್ಹರಿಲ್ಲವೇ.? ಅದೇ ರೀತಿ ಈಗಿನ ಯುವಕರು ಬರೇ ಮೋದಿ ಮೋದಿ ಅನ್ನುತ್ತಾರೆ ಮೋದಿ ತೆಗೆದುಕೊಂಡು ನೆಕ್ಕುತ್ತಿರಿ ಏನು..? ಅಂತ ಹೀಗೇ ಮೋದಿ ವಿರುದ್ಧ ಏಕವಚನದಲ್ಲೇ ವಾಗ್ವಾದ ನಡೆಸಿದರು.