ಮದುವೆಯಾಗಿ ಗಂಡನಿದ್ದರು ಪರಪುರುಷನ ಜೊತೆ ಪಲ್ಲಂಗ ಏರೋ ಹುಚ್ಚಿಗೆ ತಾಳಿ ಕಟ್ಟಿದ ಪತಿರಾಯನನ್ನೆ ಆಕೆಯ ಪ್ರಿಯಕರನ ಜೊತೆ ಸೇರಿ ಹೊಂಚು ಹಾಕಿ ಕೊಲೆ ಮಾಡಿದ ಘಟನೆ ಕಳೆದ ಸೆಪ್ಟೆಂಬರ್ 25 ರಂದು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ.
ಹಾವೇರಿ ಅ.2: ಮೊದಮೊದಲಿಗೆ ಗಂಡ ಬಾತ್ ರೂಮ್ ನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಕಥೆ ಕಟ್ಟಿದ ಐನಾತಿ ಹೆಂಡತಿ. ಈಕೆಯ ಮಾತಿನಲ್ಲಿ ಅನುಮಾನದ ವಾಸನೆ ಬರುತ್ತಿದ್ದಂತೆ ಈಕೆಯನ್ನು ಪೊಲೀಸರು ತಮ್ಮದೇ ಭಾಷೆಯಲ್ಲಿ ವಿಚಾರಣೆ ನಡೆಸಿದ್ದಾಗ ಕೊನೆಗೆ ಗಂಡನನ್ನು ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿರುವ ಸಂಪೂರ್ಣ ಕಥೆ ಬಿಚ್ಚಿಟ್ಟಿದ್ದಾಳೆ.
ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದ 26 ವಯಸ್ಸಿನ ಸಲ್ಮಾ ಎಂಬ ಮಹಿಳೆಗೆ ಮದುವೆಯಾಗಿದ್ದರು ಪರಪುರುಷನ ಜೊತೆ ಸರಸವಾಡುವ ಚಾಳಿ ಇತ್ತು. ಈಕೆಯ ಸರಸ ಸಲ್ಲಾಪವನ್ನು ಕಣ್ಣಾರೆ ಕಂಡು ಬೇಸತ್ತಿದ್ದ ಗಂಡ ಸುಮಾರು ಬಾರಿ ಆಕೆಗೆ ವಾರ್ನಿಂಗ್ ಮಾಡಿದ್ದ ಆದರೂ ಆಕೆ ಗಂಡನ ಮಾತಿಗೆ ಕ್ಯಾರೇ ಅಂದಿರಲಿಲ್ಲ. ಹೀಗಾಗಿ ಹೆಂಡತಿಯ ಸರಸ ಸಲ್ಲಾಪಕ್ಕೆ ಬೇಸತ್ತಿದ ಗಂಡ ಕೊನೆಗೆ ನಿಮ್ಮಿಬ್ಬರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳಿದ್ದ.
ಗಂಡ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರೆ ನಾವಿಬ್ಬರು ಜೈಲು ಸೇರಬೇಕಾಗುತ್ತದೆ ಎಂದು ಆತಂಕಗೊಂಡ ಸಲ್ಮಾ ಆಕೆಯ ಪ್ರಿಯಕರನಾದ 28 ವರ್ಷದ ಜಾಫರ್ ಜೊತೆ ಸೇರಿ ಸಾಧಿಕ್ ನನ್ನು ಕೊಲೆ ಮಾಡಲು ರಾತ್ರೋರಾತ್ರಿ ಹೊಂಚು ಹಾಕಿ ಗಂಡನನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದರು. ಆದರೂ ಸಾಧಿಕ್ ಇನ್ನೂ ಜೀವಂತ ಇರಬಹುದು ಎಂದು ಅನುಮಾನ ಗೊಂಡ ಇಬ್ಬರು ಮಚ್ಚಿನಿಂದ ಸಾಧಿಕ್ ನ ತಲೆಗೆ ಹೊಡೆದು ಬಾತ್ ರೂಮ್ನಲ್ಲಿ ಕಾಲು ಜಾರಿಬಿದ್ದು ಸಾವನಪ್ಪಿದ್ದಾನೆಂದು ಕಥೆ ಕಟ್ಟಿದ ಐನಾತಿ ಹೆಂಡತಿ.
ಈಕೆಯ ಮಾತಿನ ಮೇಲೆ ಅನುಮಾನ ವ್ಯಕ್ತವಾಗುತ್ತಿದ್ದಂತೆ ಪೊಲೀಸರು ಈಕೆಯನ್ನು ತನಿಖೆಗೆ ಒಳಪಡಿಸುತ್ತಾರೆ ಪೊಲೀಸರ ತನಿಖೆ ವೇಳೆ ಸಲ್ಮಾ ಹಾಗೂ ಆಕೆಯ ಪ್ರಿಯಕರ ಜಾಫರ್ ಇಬ್ಬರ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಚಟ್ಟ ಕಟ್ಟಿದ ಐನಾತಿ ಮಹಿಳೆಯ ಕಥೆ ಬಯಲಾಗಿದೆ.
ಇನ್ನು ಮೃತ ದುರ್ದೈವಿ ಸಾಧಿಕ್ ಮತ್ತೂರು (30), ಹಾಗೂ ಆರೋಪಿಗಳಾದ ಸಲ್ಮಾ (26) ಹಾಗೂ ಜಾಫರ್ (28), ಈ ಪ್ರಕರಣದ ಕುರಿತು ಹಂಸಭಾವಿ ಪೊಲೀಸ್ ಠಾಣಿ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ನಡೆದಿದೆ.