ಮರಡಿಮಠ ಜೈ ಹನುಮಾನ್ ಶಾಲೆಯ ಬಸ್ ಉರುಳಿದ ಪರಿಣಾಮ ವಿದ್ಯಾರ್ಥಿಗಳಿಗೆ ಗಾಯ.

ಬೆಳಗಾವಿ: ಗೋಕಾಕ ತಾಲೂಕಿನ ಮರಡಿಮಠ ಜೈ ಹನುಮಾನ್ ಶಾಲೆಯ ಬಸ್ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವ ವೇಳೆ ಮೇಲ್ಮನಹಟ್ಟಿ ಹಾಗೂ ಮರಡಿಮಠ ರಸ್ತೆಯ ಮಧ್ಯೆ ಬಸ್ ಉರುಳಿ  ಬಿದ್ಧ ಪರಿಣಾಮ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಇನ್ನು ಬಸ್ ಉರುಳಿದ ಪರಿಣಾಮ 5 ವಿದ್ಯಾರ್ಥಿಗಳಿಗೆ ಗಂಭೀರವಾದ ಗಾಯವಾಗಿದ್ದು ಉಳಿದ ವಿದ್ಯಾರ್ಥಿಗಳಿಗೆ ಕೆಲ ಸಣ್ಣ ಪುಟ್ಟ ಗಾಯಗಳಾಗಿವೆ. ಮರಡಿಮಠದ ಸಂಜೀವ್ ನಾಯಕ್ ಆಂಗ್ಲ ಮಾಧ್ಯಮ ಶಾಲೆಗೆ ಗೊಡಚಿನಮಲ್ಕಿ, ಮೇಲ್ಮನಟ್ಟಿ ಮಾವನೂರು ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳನ್ನು ಶಾಲೆಗೆ   ಕರೆತರುವ ಬಸ್ ಏಕಾಏಕಿ  ಬಸ್ ಸ್ಟೇರಿಂಗ್ ಲಾಕ್ ಆಗಿದ್ದರಿಂದ ಬಸ್ ನಿಯಂತ್ರಣ ತಪ್ಪಿ ಉರುಳಿದೆ ಎಂದು ಕೆಲ ಪ್ರತ್ಯಕ್ಷ ಧರಿಸಿಗಳು ಹೇಳಿದ್ದಾರೆ.

ಇನ್ನು ಬಸ್ ಉರುಳಿ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ  ದಾಖಲಿಸಲಾಗಿದ್ದು ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ಸಿಬ್ಬಂದಿಗಳು ಆಗಮಿಸಿದ್ದಾರೆ.