ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲೂಕಿನ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೊಣ್ಣೂರು ಮರಡಿಮಠದ ಸುಪ್ರಸಿದ್ಧ ಶ್ರೀ ಕಾಡಸಿದ್ದೇಶ್ವರ ಮಠದ ಲಿಂಗೈಕ್ಯ ಶ್ರೀ ಮ, ಘ, ಚ, ಡಾ. ಅದೃಶ್ಯ ಗುರುಸಿದ್ದೇಶ್ವರ ಮಹಾಸ್ವಾಮಿಜಿಯವರ 8 ನೇ ಪುಣ್ಯ ಸ್ಮರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಹಾಗೂ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಶ್ರೀಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬಹುಶಃ ಜಗತ್ತಿನಾದ್ಯಂತ ಜಾತಿ, ಮತ, ಧರ್ಮ ಕೇಳದೆನೇ ತೆಗೆದುಕೊಳ್ಳುವ ಜೀವಹನಿ ಏನಾದರೂ ಇದ್ದರೆ ಅದು ಕೇವಲ ರಕ್ತದಾನ ಮಾತ್ರ. ದಾನಗಳಲ್ಲಿ ಶ್ರೇಷ್ಠದಾನ ಎಂದರೆ ರಕ್ತದಾನವಾಗಿದ್ದು ಒಂದು ಅಮೂಲ್ಯವಾದ ಜೀವಕ್ಕೇ ಜೀವಿಸಲು ಸಹಾಯ ಹಸ್ತ ಚಾಚಲು ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು.
ಪುಣ್ಯ ಸ್ಮರಣೆಯ ದಿನ ರಕ್ತದಾನ ಶಿಬಿರ ವಿಶೇಷವಾಗಿದ್ದು: ಬಸವರಾಜ ಕಪರಟ್ಟಿ👇
https://youtu.be/QEnTEY5w8BU?si=HT6NHe3UglHQ7aVt
ಕೆಲ ಮಠಗಳಲ್ಲಿ ಪುಣ್ಯಸ್ಮರಣೆ ದಿನ ಪೂಜೆ ಪುನಸ್ಕಾರ ಭಜನೆ ಮತ್ತು ಮಹಾಪ್ರಸಾದ ಏರ್ಪಡಿಸಿರುತ್ತಾರೆ ಆದರೆ ಈ ಕೊಣ್ಣೂರು ಮರಡಿಮಠದ ವಿಶೇಷತೆ ಎಂದರೆ ಸ್ವಾಮೀಜಿಯವರ ಪುಣ್ಯ ಸ್ಮರಣೆ ಪ್ರಯುಕ್ತ ಮಠದ ಭಕ್ತರಿಗಾಗಿ ಉಚಿತ ಆರೋಗ್ಯ ಶಿಬಿರ ಹಾಗೂ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗುತ್ತದೆ. ಇದು ಕಳೆದ ನಾಲ್ಕು ವರ್ಷಗಳಿಂದ ಇಂತಹ ಕಾರ್ಯಕ್ರಮವನ್ನು ಶ್ರೀಮಠದ ಪೀಠಾಧಿಪತಿಗಳಾದ ಡಾ. ಪವಾಡೇಶ್ವರ ಮಹಾಸ್ವಾಮಿಜಿಯವರು ಹಾಗೂ ಮಠದ ಸದ್ಭಕ್ತರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಇನ್ನು ಈ ಬೃಹತ್ ರಕ್ತದಾನ ಶಿಬಿರಕ್ಕೆ ಶ್ರೀಮಠದ ಭಕ್ತರು ಬೇರೆ ಬೇರೆ ಊರಿನಿಂದ ಆಗಮಿಸಿ ಸ್ವಯಂ ಪ್ರೇರಿತರಾಗಿ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡುವುದರ ಮೂಲಕ ಈ ಅಮೂಲ್ಯವಾದ ಕಾರ್ಯಕ್ರಮವನ್ನು ಯಶಸ್ವಿಗೊಳಿಸವುಲ್ಲಿ ಕಾರಣಿಭೂತರಾದರು ಮತ್ತು ರಕ್ತದಾನ ಶಿಬಿರದಲ್ಲಿ ಸುಮಾರು 250ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಜನ ಸ್ವಯಂ ಪ್ರೇರಿತರಾಗಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಶ್ರೀ ಕಾಡಸಿದ್ದೇಶ್ವರ ಮಠದ ಭಕ್ತರ ಏಳಿಗೆಗಾಗಿ ಹಾಗೂ ಭಕ್ತರ ಹಿತದೃಷ್ಟಿಯಿಂದ ಶ್ರೀಮಠದಲ್ಲಿ ಇಂತಹ ಸಮಾಜಮುಖಿ ಕಾರ್ಯಗಳನ್ನು ಡಾ.ಪವಾಡೇಶ್ವರ ಮಹಾಸ್ವಾಮಿಜಿಯವರು ನಡೆಸಿಕೊಂಡು ಬರುತ್ತಿದ್ದಾರೆ.
ಈ ಉಚಿತ ಆರೋಗ್ಯ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು J G Co ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಗಳು ಉಚಿತವಾಗಿ ನೆರವೇರಿಸಿದ್ದು ಅದೇ ರೀತಿ ರೋಟರಿ ಬ್ಲಡ್ ಬ್ಯಾಂಕ್, ಗೋಕಾಕ್ ಹಾಗೂ ಅಂಕುರ್ ಬ್ಲಡ್ ಬ್ಯಾಂಕ್ ಚಿಕ್ಕೋಡಿ ಇವರ ಸಿಬ್ಬಂದಿಗಳು ಕೂಡ ಈ ಶಿಬಿರದಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಮ, ಘ, ಚ, ಡಾ.ಪವಾಡೇಶ್ವರ ಮಹಾಸ್ವಾಮಿಜಿ ಕೊಣ್ಣೂರ ಮರಡಿಮಠ. ಹಾಗೂ ಅಧ್ಯಕ್ಷತೆ ಡಾ.B.K.H ಪಾಟೀಲ್ ( CEO. JG-Co ಆಸ್ಪತ್ರೆ ಘಟಪ್ರಭಾ). ಇನ್ನು ಈ ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಬ್ಲಡ್ ಬ್ಯಾಂಕ್ ಗೋಕಾಕ ಚೇರ್ಮನರಾದ ಶ್ರೀ ಮಲ್ಲಿಕಾರ್ಜುನ್ ಕಲ್ಲೋಳಿ, ಹಾಗೂ ಶ್ರೀ ಬಸವರಾಜ್ ಕಪರಟ್ಟಿ (ಕಳ್ಳಿಗುದ್ದಿ) ವಹಿಸಿದರು. ಮುಖ್ಯ ಅತಿಥಿಗಳಾದ A S ಜಮಾದಾರ ಚೇರ್ಮನರು ( ಅಂಕೂರ ಬ್ಲಡ್ ಬ್ಯಾಂಕ್ ಚಿಕ್ಕೋಡಿ), ಸೋಮಶೇಖರ್ ಮಗದುಮ್ ಕಾರ್ಯದರ್ಶಿಗಳು (ರೋಟರಿ ಬ್ಲಡ್ ಬ್ಯಾಂಕ್ ಗೋಕಾಕ್) ಮತ್ತು ಅತಿಥಿಗಳಾದ ಶ್ರೀ A J ಪಾಟೀಲ್ ಚೇರ್ಮನ್ನರು SKS ಸಮಿತಿ ಕೊಣ್ಣೂರ, ಶ್ರೀ K B ಹುಕ್ಕೇರಿ ನಿರ್ದೇಶಕರು SKS ಸಮಿತಿ ಕೊಣ್ಣೂರ ಹಾಗೂ ಶ್ರೀಮಠದ ಸರ್ವಭಕ್ತ ಸಮೂಹ ಪಾಲ್ಗೊಂಡಿದ್ದರು.