ಬೆಳಗಾವಿ:ಲೋಕಸಭೆ ಚುನಾವಣೆ ಫಲಿತಾಂಶ ದೇಶದಾದ್ಯಂತ ಸಂಚಲನ ಮೂಡಿಸಿದ್ದು ಇದೀಗ ಜಿದ್ದಾ ಜಿದ್ದೀನಿ ಕಣವಾದ ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಭಾರಿ ಮುನ್ನಡೆ ಅಂತರ್ ಕಾಯ್ದು ಕೊಂಡಂತೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಮತ ಎಣಿಕೆ ಕೇಂದ್ರದಿಂದ ಹೊರನಡೆದಿದ್ದಾರೆ.
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಗೆಲುವಿಗಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಗನ ಪರವಾಗಿ ಬಾರಿ ರಣತಂತ್ರ ರೂಪಿಸಿದ್ದು ಕ್ಷೇತ್ರದ ತುಂಬ ಸಾಲು ಸಾಲು ಸಭೆಗಳು, ಪ್ರಚಾರ ಹಾಗೂ ಕ್ಷೇತ್ರದ ತುಂಬ ಗಣ್ಯಾತಿ ಗಣ್ಯರ ಬೇಟಿ ಇಂದ ಸಂಚಲನ ಮೂಡಿಸಿದರು, ಅದು ಅಲ್ಲದೇ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹೊರಗಿನವರು ಅಂತ ಪ್ರಚಾರದ ವೇಳೆ ಮುಖ್ಯವಾಗಿ ಇದೆ ವಿಷಯವನ್ನು ಮುಂದೆ ಇಟ್ಟುಕೊಂಡು ಮನೆ ಮಗನಿಗೆ ಓಟು ನೀಡಿ ಅಂತ ಕೇಳುತ್ತಿದ್ದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ವ ಕ್ಷೇತ್ರದಲ್ಲೇ ಕಾಂಗ್ರೆಸ್ ಹಿನ್ನಡೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ವ ಕ್ಷೇತ್ರದಲ್ಲಿಯೇ 20 ಸಾವಿರ ಮತಗಳ ಹೆಚ್ಚಿನ ಅಂತರ ಕಾಯ್ದು ಕೊಂಡ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಮುನ್ನಡೆ ಸಾಧಿಸಿದಾರೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಮತ ಎಣಿಕೆ ಕೇಂದ್ರದಿಂದ ಒಬ್ಬಂಟಿಯಾಗಿ ಹೊರನಡೆದರು.
10 ನೇ ಸುತ್ತಿನ ಮತ ಎಣಿಕೆಯಲ್ಲೂ ಜಗದೀಶ ಶೆಟ್ಟರ್ ಭಾರಿ ಮುನ್ನಡೆ.
ಜಗದೀಶ್ ಶೆಟ್ಟರ್ ಅವರು ಅಂಚೆ ಮತಗಳಿಂದ ಹಿಡಿದು ಹತ್ತನೇ ಸುತ್ತಿನ ಮತ ಎಣಿಕೆ ವರೆಗೂ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ ಈಗ ಹತ್ತನೇ ಸುತ್ತಿನ ಎಣಿಕೆಯಲ್ಲೂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಅಭ್ಯರ್ಥಿಗಿಂತ ಭಾರಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.