ಲೋಕ ಸಭೆ ಚುನಾವಣಾ ರಂಗು ದಿನದಿಂದ ದಿನ ಹೆಚ್ಚಾಗುತ್ತಲೇ ಇದ್ದು, ಒಬ್ಬರ ವಿರುದ್ಧ ಒಬ್ಬರ ವಾಕ್ಸಮರ ಹೆಚ್ಚುತ್ತಿದ್ದು, ಇದೀಗ ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಗ ಮೃಣಾಲ ಪಂಚಮಸಾಲಿ ಸಮಾಜದವರಲ್ಲ, ಅವರ ತಂದೆ ವೀರ ಶೈವ ಲಿಂಗಾಯತ ಬಣಜಿಗ ಸಮಾಜದವರು ಹಾಗಾಗಿ ಮಗನಿಗೆ ಅಪ್ಪನ ಜಾತಿ ಮನೆತನದ ಹೆಸರು ಅನ್ವಯಿಸುತ್ತದೆ ಎಂದು ಮಾಜಿ ಸಚಿವ ನಿರಾಣಿ ಅವರು ಹೇಳಿದರು.
ಬಾಗಲಕೋಟೆ: ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಸಚಿವೆ ಹೆಬ್ಬಾಳ್ಕರ್ ಪುತ್ರ ಮೃಣಾಲ ಉಪಜಾತಿ ಬಗ್ಗೆ ಮಾತನಾಡಿದ ಅವರು ಲಕ್ಷ್ಮೀ ಹೆಬ್ಬಾಳಕರ ಹಾಗೂ ಅವರ ಸಹೋದರ ಚನ್ನರಾಜ್ ಹಟ್ಟಿಹೋಳಿ ಅವರು ವೀರ ಶೈವ ಪಂಚಮಸಾಲಿ ಸಮಾಜದವರೆ ಅನ್ನುವುದು ನಿಸ್ಸಂದೇಹವೇ ಇಲ್ಲ. ಆದರೆ ಲಕ್ಷ್ಮೀ ಹೆಬ್ಬಾಳಕರ ಅವರ ಗಂಡ ರವೀಂದ್ರ ಹೆಬ್ಬಾಳಕರ ಅವರು ವೀರ ಶೈವ ಲಿಂಗಾಯತ ಬಣಜಿಗ ಸಮಾಜದವರು.
ಮಗನಿಗೆ ಅಪ್ಪನ ಮನೆತನದ ಜಾತಿ, ಹೆಸರು ಅನ್ವಯಿಸುತ್ತದೆ. ಹಾಗಿದ್ದಲ್ಲಿ ಮೃಣಾಲ ಹೇಗೆ ಪಂಚಮಸಾಲಿ ಸಮಾಜದವನಾಗುತ್ತಾನೆ.? ಅವನು ಬನಜಿಗ ಸಮಾಜಕ್ಕೆ ಸೇರತ್ತಾನೆ ಎಂದು ಮಾಜಿ ಸಚಿವ ನಿರಾಣಿ ಹೇಳಿದರು.