ಕೊಣ್ಣೂರ – ಮರಡಿಮಠದ ಶ್ರೀ ಗಳಾದ ಶ್ರೀ ಮ,ಘ,ಚ,ಡಾ! ಪವಾಡೇಶ್ವರ ಮಹಾ ಸ್ವಾಮೀಜಿಯವರ 36 ನೇ ಹುಟ್ಟು ಹಬ್ಬದ ನಿಮಿತ್ಯ ಗೋಮಾತೆಯನ್ನು ಉಡುಗೊರೆಯಾಗಿ ನೀಡಿದ ಭಕ್ತ ಸಮೂಹ.

ಗೋಮಾತೆ ಉಡುಗೊರೆ ನೀಡಿದ ಸಂದರ್ಭ

ಹುಟ್ಟು ಹಬ್ಬ, ನಾವುಗಳು ಇಷ್ಟ ಪಡುವವರ ಹಾಗೂ ನಮ್ಮ ಆತ್ಮೀಯ ವ್ಯಕ್ತಿಗಳ ಹುಟ್ಟು ಹಬ್ಬ ಬಂದರೆ ಸಾಕು ಅವರ ಹುಟ್ಟು ಹಬ್ಬಕ್ಕೆ ವಿಶೇಷವಾದ ಉಡುಗೊರೆ ಕೊಡುವುದು ಮತ್ತು ಬಹಳ ಹತ್ತಿರವಾದ ವ್ಯಕ್ತಿಗಳಿದ್ದರೆ ಅವರಿಗಾಗಿ ವಿಶೇಷ ರೀತಿಯ ಕೇಕ್ ತಂದು ಹೂ ಗುಚ್ಚ, ಮತ್ತು ಹೂವಿನ ಮಾಲೆ ಹಾಕಿ ಸತ್ಕಾರ ಮಾಡಿ, ಸಂಜೆ ಆದ್ರೆ ಡಿಜೆ ಸೌಂಡ್ ಹಾಕಿ ಸ್ಟೆಪ್ ಹಾಕಿ ಪಟಾಕಿ ಹೊಡೆದು ಹುಟ್ಟು ಹಬ್ಬ ಸಂಭ್ರಮ ಮಾಡುವ ಈ ಕಾಲದಲ್ಲಿ. ಆದರೆ ಇವತ್ತಿನ ಹುಟ್ಟು ಹಬ್ಬದ ವಿಶೇಷತೆನೆ ಬೇರೆ….

ಹೌದೂ ಪ್ರತಿಯೊಬ್ಬರ ಹುಟ್ಟು ಹಬ್ಬದ ಸಂಭ್ರಮಾಚರಣೆ ವಿಭಿನ್ನವಾಗಿ ಇರುತ್ತದೆ. ಆದರೆ ಇಲ್ಲೊಂದು ವಿಶೇಷ ಹುಟ್ಟು ಹಬ್ಬದ ಆಚರಣೆ ಗೋಕಾಕ್ ತಾಲೂಕಿನ ಕೊಣ್ಣೂರ – ಮರಡಿಮಠದ ಸುಪ್ರಸಿದ್ಧ ಕ್ಷೇತ್ರ ಪಾಲಕ ಜಗದ್ಗುರು ಶ್ರೀ ಕಾಡಸಿದ್ದೇಶ್ವರ ಮಠದ ಶ್ರೀಗಳಾದ ಶ್ರೀ, ಮ,ಘ, ಚ, ಡಾ! ಪವಾಡೇಶ್ವರ ಮಹಾ ಸ್ವಾಮೀಜಿಯವರ 36 ನೇ ಹುಟ್ಟುಹಬ್ಬದ ನಿಮಿತ್ಯ ಮಠದ ಸದ್ಭಕ್ತ ಸಮೂಹ ಅವರ ಹುಟ್ಟು ಹಬ್ಬದ ದಿನದಂದು ವಿಶೇಷವಾದ ಉಡುಗೊರೆ ಕೊಟ್ಟು ಅರ್ಥಗರ್ಭಿತವಾದ ವಿಶೇಷ ಸಂಭ್ರಮಾಚರಣೆ ಮಾಡಿದ್ದಾರೆ. ಹೌದು ಶ್ರೀಗಳ ಹುಟ್ಟು ಹಬ್ಬಕ್ಕೆ ಕೋಟ್ಯಾನು ಕೋಟಿ ದೇವಾನುದೇವತೆಗಳ ನೆಲೆಸಿರುವ ಗೋಮಾತೆಯನ್ನು ಶ್ರೀಗಳಿಗೆ ಉಡುಗೊರೆಯಾಗಿ ಕೊಟ್ಟು ವಿಭಿನ್ನ ರೀತಿಯ ಹುಟ್ಟು ಹಬ್ಬದ ಆಚರಣೆಯನ್ನು ಮಾಡಿದ ಭಕ್ತ ಸಮೂಹ.

ಗೋಕಾಕ : ತಾಲೂಕಿನ ಸುಪ್ರಸಿದ್ಧ ಜಗದ್ಗುರು ಶ್ರೀ ಕಾಡಸಿದ್ದೇಶ್ವರ ಮಠದ ಪೂಜ್ಯ ಶ್ರೀಗಳಾದ ಶ್ರೀ ಮ,ಘ,ಚ, ಡಾ! ಪವಾಡೇಶ್ವರ ಮಹಾಸ್ವಾಮಿಗಳ 36 ನೇ ಹುಟ್ಟು ಹಬ್ಬದ ನಿಮಿತ್ಯ ಶ್ರೀ ಮಠದ ಭಕ್ತ ಸಮೂಹ ಕೋಟ್ಯಾನುಕೋಟಿ ದೇವಾನುದೇವತೆಗಳ ನೆಲೆಸಿರುವ ಗೋಮಾತೆಯನ್ನು ಕೊಡುಗೆ ಕೊಡುವುದರ ಮೂಲಕ ವಿಭಿನ್ನ ರೀತಿಯ ಹುಟ್ಟು ಹಬ್ಬದ ಆಚರಣೆ ಮಾಡಿದ್ದಾರೆ.ಈ ರೀತಿ ಸಾಂಪ್ರದಾಯಿಕವಾಗಿ ಹುಟ್ಟು ಹಬ್ಬಗಳು ಜರುಗುವುದು ವಿಶೇಷ.

ಶ್ರೀ ಗಳ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸಿದ ಎಲ್ಲಾ ಭಕ್ತ ಸಮೂಹಕ್ಕೆ ಶ್ರೀ ಗಳಿಂದ ಆಶೀರ್ವಾದ ನೀಡಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಗೋಮಾತೆಯನ್ನು ಉಡುಗೊರೆಯಾಗಿ ನೀಡಿದ ಭಕ್ತ ಸಮೂಹ ಚಂದ್ರು ಗುರವ, ಸಂಜು ಕುರಬೇಟ, ಸುರೇಶ್ ತಿರ್ಕನ್ನವರ, ಯಮನಪ್ಪಾ  ಹಂದ್ಯಾಗೋಳ,  ಮಂಜುನಾಥ್ ಹುಕ್ಕೇರಿ, ಅಕ್ಷಯ ನೇಗಿನಹಾಳ,  ಬಾಲಚಂದ್ರ ಬೇಡರಟ್ಟಿ, ಅಕ್ಷಯ್ ಪಾಟೀಲ,  ಬಾಳು ಗುಡನಟ್ಟಿ, ಹಾಗೂ ಭಕ್ತ ಸಮೂಹ ನೆರೆದಿದ್ದರೂ.