(ಈ ವಿಕಲಚೇತನ ಕನ್ನಡದ ಕ್ರೀಡಾ ಪಟುವಿಗೆ ಬೇಕಿರುವುದು ಕೃತಕ ಕಾಲು)
ಬೆಳಗಾವಿ: “ದೋಸ್ತ ನೋಡಕೆ ಈ ಸಲಾ ಆರ್ಮಿ ಸೇರಿ ದೇಶ ಸೇವೆ ಮಾಡೂದ ಫಿಕ್ಸ್” ಅನ್ನುತ್ತ ಅದಕ್ಕಾಗಿ ತಾಲೀಮು ಮಾಡುತ್ತಿದ್ದ ಯುವಕನೊಬ್ಬನ ಬಾಳಿನಲ್ಲಿ ಇದ್ದಕ್ಕಿದ್ದಂತೆ ಅಂಧಕಾರ ಕವಿದಿತ್ತು.
ಸೈನಿಕ ನಾಗುವ ಆಸೆ ಕನಸು ಕಟ್ಟಿಕೊಂಡು ದಿನವೂ ವ್ಯಾಯಾಮ,ರನ್ನಿಂಗ್ ಅಂತೆಲ್ಲ ತಯಾರಿ ನಡೆಸುತ್ತಿದ್ದ ಯುವಕ ವಿಧಿಯ ಆಟಕ್ಕೆ ದಾಳವಾಗಿ ತನ್ನ ಬಲಗಾಲು ಕಳೆದುಕೊಂಡಿದ್ದ. ಮುಂದೇನಾಯ್ತು ಅನ್ನುವ ವರದಿ ಇಲ್ಲಿದೆ ನೋಡಿ…
ಸಾಧನೆ ಅನ್ನುವದು ಮನಸ್ಸಿನಲ್ಲಿ ಸಾಧಿಸುವ ಛಲವಿದ್ದರಷ್ಟೇ ಹುಟ್ಟಿಕೊಳ್ಳುತ್ತದೆ. ಬಹಳಷ್ಟು ಜನ ಸಾಧಕರು ಎದ್ದು ಬಂದದ್ದೇ ತಮ್ಮ ಬಡತನ,ಆರ್ಥಿಕ ಅಸಮರ್ಥತೆಗಳ ನಡುವೆ ಅನ್ನುವದು ಅಚ್ಚರಿಯಾದರೂ ಸತ್ಯ.
ಸತತವಾದ ಪರಿಶ್ರಮ, ಗೆದ್ದೆ ಗೆಲ್ಲುವೆ ಅನ್ನುವ ಛಲ ಮತ್ತು ಒಂದಷ್ಟು ತಾಳ್ಮೆ ಎಂಥವರನ್ನೂ ಸಾಧನೆಯ ಶಿಖರಕ್ಕೆ ಏರಿಸುತ್ತದೆ.ಸೈನ್ಯ ಸೇರಬೇಕು ಅನ್ನುವ ಮಹತ್ವಾಕಾಂಕ್ಷೆ ಹೊಂದಿದ್ದ ಯುವಕನೊಬ್ಬ 2019 ರಲ್ಲಿ ಬೆಳಗಾವಿ ಜಿಲ್ಲೆಯ ಬಡಾಲ ಅಂಕಲಗಿಯ ಅಜ್ಜಿ ಊರಿಗೆ ಹೋದ ಸಂಧರ್ಭದಲ್ಲಿ ನೀರಿನ ಟ್ಯಾಂಕರ್ ಕಾಲಿನ ಮೇಲೆ ಹಾಯ್ದ ಪರಿಣಾಮವಾಗಿ ಅಪಘಾತದಲ್ಲಿ ತನ್ನ ಬಲಗಾಲು ಕಳೆದುಕೊಂಡರೂ ಕೂಡ ಛಲ ಬಿಡದೆ ಕ್ರೀಡಾಪಟುವಾಗಿ ಭಾಗವಹಿಸುತ್ತ ವಿಕಲಚೇತನರಲ್ಲೇ ವಿಭಿನ್ನ ಕ್ರೀಡಾಪಟುವಾಗಿ ಹೊರಹೊಮ್ಮಿದ್ದು ಬದುಕು ಸೋತೆ ಅಂದುಕೊಂಡ ಎಷ್ಟೋ ಜನರಿಗೆ ಪ್ರೇರಣೆ ಯಾಗಿ ನಿಂತಿದ್ದಾನೆ. ಆ ಕ್ರೀಡಾ ಪಟುವಿನ ಹೆಸರೇ ಸಿದ್ದಪ್ಪ ಪಟಗುಂದಿ.
ಮನೆಯಲ್ಲಿ ಒಟ್ಟು ಮೂರು ಜನ ಹೆಣ್ಣುಮಕ್ಕಳು ಮತ್ತು ಒಬ್ಬನೆ ಗಂಡು ಮಗನಾಗಿ ಹುಟ್ಟಿದ ಸಿದ್ದಪ್ಪ ಕಾಣುತ್ತಿದ್ದ ಕನಸುಗಳು ಇನ್ನೇನು ಗಗನವನ್ನು ಚುಂಬಿಸಬೇಕು ಅಷ್ಟರಲ್ಲೇ ಬರಸಿಡಿಲಿನಂತೆ ಬದುಕಿಗೆ ಅಪಘಾತದ ರೂಪದಲ್ಲಿ ವಿಧಿ ಆಘಾತವನ್ನ ನೀಡಿ ಆಗಿತ್ತು.ಸ್ವಂತದ ಜಮೀನು ಇದ್ದರೂ ನೀರಾವರಿ ಸೌಲಭ್ಯ ಇಲ್ಲದೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ವಾಸವಾಗಿರುವ ಬಡ ಕುಟುಂಬದ ಆಶಾಕಿರಣವಾಗಿದ್ದ ಸಿದ್ದಪ್ಪ ಪಟಗುಂಡಿ ತನ್ನ ಇಬ್ಬರು ಅಕ್ಕಂದಿರ ಮದುವೆ ಮಾಡುವ ವೇಳೆಗೆ ಅಪಘಾತ ಸಂಭವಿಸಿದ್ದರಿಂದ ಸುಮಾರು ಆರು ಲಕ್ಷ ಆಸ್ಪತ್ರೆಯ ವೆಚ್ಚ ಭರಿಸಿ ಬದುಕಿ ಉಳಿದದ್ದೆ ಹೆಚ್ಚು ಅನ್ನುವ ಪರಿಸ್ಥಿತಿ ಸಿದ್ದಪ್ಪ ಪಟಗುಂದಿಯ ಮನೆಯದ್ದಾಗಿತ್ತು.
ಅಪಘಾತವಾಗುವ ಮೊದಲಿನಿಂದಲೂ ಹೈಸ್ಕೂಲ್ ವಿಭಾಗದಲ್ಲಿ ಇದ್ದಾಗ ಕಬ್ಬಡ್ಡಿ ಕ್ರೀಡಾಪಟುವಾಗಿದ್ದು ಅಪಘಾತದ ಬಳಿಕವೂ ಕ್ರೀಡಾ ಮನೋಭಾವ ಬಿಡದೆ ವ್ಹೀಲ್ ಚೆರ್ ಬಾಸ್ಕೆಟ್ ಬಾಲ್, ವ್ಹೀಲ್ ಚೇರ್ ಹ್ಯಾಂಡ್ ಬಾಲ್ ಮತ್ತು ವ್ಹೀಲ್ ಚೇರ್ ರಬ್ಬಿ ಕ್ರೀಡೆಗಳಲ್ಲಿ ಆಸಕ್ತಿ ತೋರಿಸುತ್ತಿದ್ದು 27 ವರ್ಷದ ಈ ಕ್ರೀಡಾಪಟುವಿಗೆ ಸದ್ಯ ಅಂತರಾಷ್ಟ್ರೀಯ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಸ್ಪರ್ಧೆಗೆ ಕೃತಕ ಕಾಲು ಜೋಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.ಅದಕ್ಕಾಗಿ ಸುಮಾರು ಐವತ್ತು ಸಾವಿರ ರೂಪಾಯಿಗಳ (50.000) ಅಗತ್ಯವಿದ್ದು ಯಾರಾದರೂ ದಾನಿಗಳು ಮುಂದೆ ಬಂದು ಇಂತಹ ಕ್ರೀಡಾಪಟುವಿನ ಬೆನ್ನು ತಟ್ಟಬೇಕಾಗಿದೆ.
ರಾಜ್ಯ ಹಾಗೂ ಅಂತರ್ ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ರಾಜ್ಯದ ಕ್ರೀಡಾಪಟುವಾಗಿ ಸಾಧನೆ ತೋರಿಸಿರುವ ಕನ್ನಡಿಗ ವಿಶೇಷ ಚೇತನ ಕ್ರೀಡಾಪಟುವಿಗೆ ಸದ್ಯ ಅವಕಾಶದ ಬಾಗಿಲು ತೆರೆದರೂ ಆರ್ಥಿಕ ತೊಂದರೆಯಿಂದ ಕೃತಕ ಕಾಲು ಜೋಡಿಸಿಕೊಳ್ಳುವದು ಅಸಾಧ್ಯವಾಗಿದ್ದು ಈ ಗ್ರಾಮೀಣ ಬಡ ಕುಟುಂಬದ ಸಿದ್ದಪ್ಪನಿಗೆ ಯಾರಾದರೂ ಸಹಾಯ ಮಾಡುತ್ತಾರಾ ಕಾಯ್ದು ನೋಡಬೇಕಾಗಿದೆ.
ಬ್ಯಾಂಕ ಡೀಟೇಲ್ಸ್
ಸಿದ್ದಪ್ಪ ಪಟಗುಂದಿ
ಕೆನರಾ ಬ್ಯಾಂಕ್ ಕೊಣ್ಣೂರ
A/C No: 0446108024626
IFSC No : CNRB0000446
ಮೊಬೈಲ್ ಸಂಖ್ಯೆ: 81475 45101