ಕೇರಳದ ಭೀಕರ ಗುಡ್ಡ ಕುಸಿತದಲ್ಲಿ ಮೂವರನ್ನು ರಕ್ಷಿಸಿ ಸಾವನ್ನೇ ಗೆದ್ದು ಬಂದ ಕನ್ನಡಿಗನ ರೋಚಕ ಕಥೆ:

ಸ್ವಾಮಿಶೆಟ್ಟಿ

ದೇವರ ನಾಡು ಕೇರಳದ ವಯನಾಡು ಜಿಲ್ಲೆಯಲ್ಲಿ ಕಳೆದ ಜುಲೈ 23 ರಂದು ನಡೆದ ಭೀಕರ ಭೂಕುಸಿತ ಘಟನೆಯಲ್ಲಿ ನೂರಾರು ಜನ ಸಾವನ್ನಪ್ಪಿದ್ದು ಇನ್ನು ಕೂಡ್ ಕೆಲವರ ಹುಡುಕಾಟ ನಡೆದಿದೆ. ಇದುವರೆಗೆ 316 ಕ್ಕೆ ಏರಿದ ಮೃತರ ಸಂಖ್ಯೆ 200 ಜನರಿಗೆ ಗಂಭೀರ ಗಾಯಗಳಾಗಿದ್ದು, 290 ಕ್ಕೂ ಅಧಿಕ್ ಜನ ನಾಪತ್ತೆ. ಇಂತಹ ಮರಣ ಮೃದಂಗ  ಭಯಾನಕ ಸುದ್ದಿ ದಕ್ಷಿಣ ಭಾರತದಲ್ಲಿ ಇದೆ ಮೊದಲಾಗಿದ್ದು ಪ್ರಕೃತಿ ವಿಕೋಪಕ್ಕೆ ಊರಿಗೆ ಊರೇ ಸ್ಮಶಾನವಾದಂತಾಗಿದೆ.  ಭೀಕರ ಮಳೆಯಿಂದಾಗಿ ಗುಡ್ಡ ಕುಸಿದು ಹಲವಾರು ಸಾವು ನೋವುಗಳಾಗಿದೆ ಎಷ್ಟೋ ಜನ ಇದುವರೆಗೂ ನಾಪತ್ತೆಯಾದವರು ಸಿಕ್ಕಿಲ್ಲ. ಕುಟುಂಬಸ್ಥರನ್ನು ಕಳೆದುಕೊಂಡ ಎಷ್ಟೋ ಜನ ಅನಾಥರಂತಾಗಿದ್ದಾರೆ. ಇಂತಹ ದುರಂತದಿಂದ ಪಾರಾಗಿ ಬಂದ ಕನ್ನಡಿಗನ ರೋಚಕ ಕಥೆ ಇಲ್ಲಿದೆ.

ಕೇರಳ: ದೇವರ ನಾಡಲ್ಲಿ ಇದೆಂತಹ ಘೋರ ಘಟನೆ ನೂರಾರು ಸಾವು ನೋವುಗಳು, ಅಲ್ಲಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡ ಅದೆಷ್ಟೋ ಮಕ್ಕಳ ರೋಧನೆ.  ಗುಡ್ಡ ಕುಸಿತದಿಂದ ಮಣ್ಣಲ್ಲಿ ಮಣ್ಣಾಗಿರುವ ಮೃತ ದೇಹಗಳು. ತಮ್ಮವರ ಗುರುತು ಹಿಡಿಯುತ್ತಿರುವ ಕುಟುಂಬಸ್ಥರು. ಭೀಕರ ಗುಡ್ಡ ಕುಸಿತ ಮನ ಕಲಕುವಂತಿದೆ. ಇದೇ ದುರ್ಘಟನೆಯಲ್ಲಿ ಕರ್ನಾಟಕದ ಆರು ಜನ ಮೃತಪಟ್ಟಿದ್ದಾರೆ. ಹಾಗೆ ಈ ಘಟನೆಯಲ್ಲಿ ಸಾವನ್ನೇ ಗೆದ್ದು ಬಂದ ಕನ್ನಡಿಗನೊಬ್ಬನ ರೋಚಕ ಕಥೆ. ಹೌದು ಸ್ವಾಮಿ ಶೆಟ್ಟಿ ಎಂಬ ಚಾಮರಾಜ್ ನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತ್ರಿಯಂಬಕಪುರ್ ಗ್ರಾಮಸ್ಥನು  ಮರಣ ಮೃದಂಗದಿಂದ ಪಾರಾಗಿ ಬಂದ ಘಟನೆ ಖಾಸಗಿ ಸುದ್ದಿ ವಾಹಿನಿ ಒಂದರ ಮುಂದೆ ಬಿಚ್ಚಿಟ್ಟ ರೋಚಕ ಕಥೆ.

ಚಾಮರಾಜನಗರದ ಸ್ವಾಮೀ ಶೆಟ್ಟಿ ಕೇರಳದ ವಯನಾಡು ಬಳಿ ಚುರಲಮಲ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದ ಅಣ್ಣ ಘಟನೆ ನಡೆದ ಎರಡು ದಿನಗಳ ಹಿಂದೆ ಮರಣ ಹೊಂದಿದ್ದರು. ಹೀಗಾಗಿ ಸ್ವಾಮಿ ಶೆಟ್ಟಿ ಅಣ್ಣನ ಅಂತ್ಯಕ್ರಿಯೆಗೆಂದು  ಗುಂಡ್ಲುಪೇಟೆ ತಾಲೂಕಿನ ತ್ರಿಯಂಬಕಪುರ ಗ್ರಾಮದಿಂದ ವಯನಾಡು ಬಳಿ ಚುರಲಮರ ಗ್ರಾಮಕ್ಕೆ ತೆರಳಿದ್ದರು. ಅಂತ್ಯಕ್ರಿಯೆ ಮುಗಿದ ಮೇಲೆ ಅಣ್ಣನ ವಿಧಿ ವಿಧಾನಗಳನ್ನು ಮಾಡಲು ಎರಡು ಮೂರು ದಿನ ಅಲ್ಲಿ ವಾಸವಿದ್ದರೂ ಈ ಘಟನೆ ನಡೆಯುವ ಸಾಯಂಕಾಲ  ಭೀಕರ ಮಳೆಯಿಂದ ಇರುವಜಿಂಝಿ ನದಿಯು ಅಪಾಯದ ಮಟ್ಟ ಮೀರಿ ಹರಿಯಲು ಆರಂಭಿಸಿದಾಗ ಜುಲೈ 23 ರಂದು ನದಿ ನೀರು ಸಮುದ್ರದ ಅಲೆಗಳಂತೆ ಅಪ್ಪಳಿಸಲು ಆರಂಭಿಸಿದಾಗ ಇದನ್ನು ಕಂಡ ಸ್ವಾಮಿ ಶೆಟ್ಟಿ ಅವರು ಅಣ್ಣನ ಹೆಂಡತಿಗೆ ಹೇಳಿದ್ದರು.  ಆಗ ಅವರು ಇದೆಲ್ಲ ಇಲ್ಲಿ ಸರ್ವೇಸಾಮಾನ್ಯ ಎಂದು ಸುಮ್ಮನಾಗಿದ್ದರು ಆದರೂ ಅನುಮಾನ ಗೊಂಡ ಸ್ವಾಮಿ ಶೆಟ್ಟಿ ಕೊಟ್ಟಿಗೆಯಲ್ಲಿರುವ ಅವರ ದನ ಕರುಗಳನ್ನು ಹಗ್ಗ ಬಿಚ್ಚಿ ಬಿಟ್ಟಿದ್ದರು.

ರಾತ್ರಿ ಸುಮಾರು 11.30 ಕ್ಕೆ ಮನೆ ಬಾಗಿಲ್ಲವನ್ನು ಯಾರು ಬಾರಿಸಿದ ಹಾಗೆ ಕೇಳಿದ್ದರಿಂದ ಸ್ವಾಮಿ ಶೆಟ್ಟಿ ಅವರು ಯಾರಾದರೂ ಬಂದಿರಬಹುದು ಎಂದು ಬಾಗಿಲು ತೆರೆದಾಗ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದ ವಸ್ತುಗಳು ಮರದ ಕೊಂಬೆಗಳು ಒಮ್ಮೆಲೇ ಮನೆಯೊಳಗೆ ನುಗ್ಗಿವೆ. ರಣ ಭೀಕರ ಪ್ರವಾಹಕ್ಕೆ ಸ್ವಾಮಿ ಶೆಟ್ಟಿ ಅವರು ಕೊಚ್ಚಿಕೊಂಡು ಮನೆಯ ಬೇಲಿಯಲ್ಲಿ ಸಿಕ್ಕಾಕಿಕೊಂಡಿದ್ದರು. ಪ್ರಾಣವನ್ನು ಉಳಿಸಿಕೊಳ್ಳಲು ಬೇಲಿಯನ್ನೇ ಹಿಡಿದುಕೊಂಡು ಅಲ್ಲೇ ಕುಳಿತಿದ್ದರು ಬಳಿಕ ಬೇಲಿಯ ಸಹಾಯದಿಂದ ಮನೆಯಲ್ಲಿದ್ದ ಮೂವರ ಹೆಣ್ಣು ಮಕ್ಕಳನ್ನು ಕರೆದುಕೊಂಡು ಮನೆಯ ಹಿಂದುಗಡೆ ಇರುವ ಬೆಟ್ಟವನ್ನು ಹತ್ತಿದ್ದಾರೆ ಅವರ ಪ್ರಾಣ ರಕ್ಷಣೆ ಮಾಡಿಕೊಳ್ಳುವ ಬರದಲ್ಲಿ ಸ್ವಾಮಿ ಶೆಟ್ಟಿ ಅವರಿಗೆ ಎದೆಗೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ.

ಸ್ವಾಮಿ ಶೆಟ್ಟಿ ಅವರು ಗುಡ್ಡವನ್ನು ಏರುತ್ತಿರುವಾಗ ಮತ್ತೊಂದು ಸಾರಿ ಗುಡ್ಡ ಕುಸಿತವಾಗಿದೆ. ಕಣ್ಣೆದುರೆ ಇಪ್ಪತ್ತಕ್ಕೂ ಹೆಚ್ಚು ಜನರು ನೀರು ಪಾಲಾಗಿ ಕೊಚ್ಚಿಕೊಂಡು ಹೋದರು ಜೊತೆಗೆ ದನ ಕರಗಲು ಸಹ ಕೊಚ್ಚಿಕೊಂಡು ಹೋಗಿದ್ದು ಕಣ್ಣೆದುರೇ ಸಾವಿನ ಕದತಟ್ಟುವ ದೃಶ್ಯಗಳು ಕಣ್ಮುಂದೆ ಸಾವಿನ ಆಕ್ರಂದನ.  ಏನು ಮಾಡದೇ ಅಸಹಾಯಕ ಸ್ಥಿತಿಯಲ್ಲಿದ್ದೆ ಎಂದು ಸ್ವಾಮಿ ಶೆಟ್ಟಿ ಅವರು ತಮ್ಮ ಅಳಲನ್ನು ತೋಡಿಕೊಂಡರು.

ಇಂತಹ ಭೀಕರ ಘಟನೆಯಲ್ಲಿ ಸಿಲುಕಿದ ಜನರನ್ನು ಮಾರನೇ ದಿನ ರೆಸ್ಕ್ಯೂ ಟೀಮ್ ಇವರನ್ನೆಲ್ಲ ರಕ್ಷಿಸಿ ಅಲ್ಲಿಂದ ಸುರಕ್ಷಾ ಕೇಂದ್ರಕ್ಕೆ ಅವರನ್ನು ಇರಿಸಲಾಗಿತ್ತು. ಗಾಯಗೊಂಡ ನಿರಾಶ್ರಿತ ಜನರಿಗೆ ಚಿಕಿತ್ಸೆ ಕೊಡುವಲ್ಲಿ ಸ್ವಾಮಿನಾರಾಯಣರು ಕನ್ನಡವನ್ನು ಮಾತನಾಡುದನ್ನು ಕಂಡ ಗುಂಡ್ಲುಪೇಟೆ ಎಸ್ಐ ಪ್ರಕಾಶ್ ಸ್ವಾಮಿ ಶೆಟ್ಟಿ ಅವರನ್ನು ತಮ್ಮ ಊರಿಗೆ ಕಳುಹಿಸಿಕೊಟ್ಟರು.