ಕರ್ನಾಟಕ ಎಕ್ಸಪ್ರೆಸ್ ರೈಲು ಹರಿದು 7 ಜನ ಸಾವು!

Maharashta Train Accident:  ಮಹಾರಾಷ್ಟ್ರದ ಜಲಗಾಂವನ ಪರಾಂಡ ರೈಲು ನಿಲ್ದಾಣದಲ್ಲಿ ಸುಳ್ಳು ವದಂತಿಗೆ ಹೆದರಿ ರೈಲಿನಿಂದ ಜಿಗಿದು ಇನ್ನೊಂದು ರೈಲಿನ ಚಕ್ರದಡಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡ ಪ್ರಯಾಣಿಕರು. ಹೌದು ಲಕ್ನೋದಿಂದ  ಮುಂಬೈ ಕಡೆ ತೆರಳುತ್ತಿದ್ದ ಪುಷ್ಪಕ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಸುಳ್ಳು ವದಂತಿಗೆ ಹೆದರಿ ರೈಲಿನಲ್ಲಿದ್ದ  30 ಕ್ಕೂ ಹೆಚ್ಚು ಪ್ರಯಾಣಿಕರು ರೈಲಿನಿಂದ ಜಿಗಿದು ಪಕ್ಕದ ರೈಲು ಹಳಿಯಲ್ಲಿ ನಿಂತಿದ್ದರು ಅದರಲ್ಲಿ 7 ಜನ ಸಾವನಪ್ಪಿದ ದಾರುನ ಘಟನೆ ನಡೆದಿದೆ.

ಘಟನೆ ನಡೆದ ಸ್ಥಳದಲ್ಲಿ ರೈಲು ಹಳಿಯ ಕಾಮಗಾರಿ ನಡೆಯುತ್ತಿದರಿಂದ ಚಲಿಸುವ ರೈಲುಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದರಿಂದ ಬ್ರೇಕ್ ಹಾಕುತ್ತಿದ್ದಂತೆ  ರೈಲಿನ ಚಕ್ರಗಳಲ್ಲಿ ಬೆಂಕಿ ಕಿಡಿಗಳು ಹೊರಹೋಮ್ಮಿದವು ಇದರಿಂದ ರೈಲಿಗೆ ಬೆಂಕಿ ಬಿದ್ದಿದೆ ಎಂಬ ವದಂತಿಯಿಂದ ಪ್ರಯಾಣಿಕರು ಪ್ರಣಾಪಾಯದಿಂದ ರೈಲಿನಿಂದ ಜಿಗಿದಿದ್ದಾರೆ ಕೆಲವರು ದೂರ ಹೋಗಿ ನಿಂತರೆ ಇನ್ನೂ ಕೆಲವರು ಪಕ್ಕದ ಹಳಿಯ ಮೇಲೆ ನಿಂತಿದ್ದಾರೆ. ಹೀಗಾಗಿ ಪಕ್ಕದ ಹಳಿಯ ಮೇಲೆ ವೇಗವಾಗಿ ಬರುತ್ತಿದ್ದ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಹರಿದು ಸ್ಥಳದಲ್ಲೇ 7 ಜನ ಸಾವನಪ್ಪಿದ್ದಾರೆ. ಇನ್ನೂ ರೈಲು ಜಿಗಿದ ಕೆಲ ಪ್ರಯಾಣಿಕರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *