ಕಂಠ ಪೂರ್ತಿ ಕುಡಿದು ಆಸ್ಪತ್ರೆಗೆ ಬಂದ ವೈದ್ಯನ ಹೈಡ್ರಾಮಾ:  ಪೀಠೋಪಕರಣಗಳು ಪುಡಿ ಪುಡಿ!

ದುಶ್ಚಟಗಳಿಂದ ದೂರವಿದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಸಾರ್ವಜನಿಕರಿಗೆ ಆರೋಗ್ಯದ ಕುರಿತು ಸಲಹೆ ನೀಡುವ ಹಾಗೂ ಅನಾರೋಗ್ಯ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಮುಖ ಮಾಡುವ ವೈದ್ಯನೆ ಕಂಠಪೂರ್ತಿ ಕುಡಿದು ಆಸ್ಪತ್ರೆಗೆ ಬಂದರೆ ಹೇಗೆ? ಹೌದು  ವೈದ್ಯನೊಬ್ಬ ತನ್ನ ಕರ್ತವ್ಯ ಪ್ರಜ್ಞೆಯನ್ನು ಮರೆತು ಕಂಠಪೂರ್ತಿ ಕುಡಿದು  ಆಸ್ಪತ್ರೆಗೆ ಬಂದಿರುವ ಘಟನೆ  ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನಲ್ಲಿ ನಡೆದಿದೆ.

ವಿಜಯಪುರ ಸೆ.10: ಜಿಲ್ಲೆಯ ಚಡಚನ ತಾಲೂಕಿನ ಶಿರನಾಳ ಆಯುಷ್ಯ ಆರೋಗ್ಯ ಕೇಂದ್ರದಲ್ಲಿ ನಡೆದಿರುವ ಘಟನೆ ಇದಾಗಿದ್ದು ನಾರಾಯಣ್ ರಾಥೋಡ್ ಎಂಬ ವೈದ್ಯನು ಕಂಠಪೂರ್ತಿ ಕುಡಿದು ಬಂದು ಸರಕಾರಿ ಆಸ್ಪತ್ರೆಯಲ್ಲಿ ರಂಪಾಟ ಮಾಡಿದ್ದಲ್ಲದೆ ಆಸ್ಪತ್ರೆಯ ಪೀಠೋಪಕರಣಗಳನ್ನು ನಾಶಪಡಿಸಿದ್ದಾನೆ.

ಆಸ್ಪತ್ರೆಗೆ ಕುಡಿದು ಬಂದು ರಂಪಾಟ ಮಾಡಿದ ವೈದ್ಯನ ವಿಡಿಯೋ 👇

https://youtu.be/Scrpjp9dE0U

ನಾರಾಯಣ ರಾಠೋಡ್ ಶಿರನಾಳ ಗ್ರಾಮದ ಆಯುಷ್ಯ ಆರೋಗ್ಯ ಮಂದಿರದ ವೈದ್ಯನಾಗಿದ್ದು ಹೆಲ್ತ್ ಇನ್ಸ್ಪೆಕ್ಟರ್ ಆಫೀಸರ್ ಆಗಿ ಹುದ್ದೆ ನಿರ್ವಹಿಸುತ್ತಿದ್ದು ಕಂಠಪೂರ್ತಿ ಮಧ್ಯ ಸೇವಿಸಿ ನಶೆಯ ಮತ್ತಿನಲ್ಲಿಯೇ ಆಸ್ಪತ್ರೆಗೆ ಬಂದಿರುತ್ತಾನೆ. ನಶೆಯಲ್ಲಿ ಬಂದ ವೈದ್ಯ ನಾರಾಯಣ ಆಸ್ಪತ್ರೆಯಲ್ಲಿ ಬಿದ್ದು ಹೊರಳಾಡಿದ್ದಲ್ಲದೆ ಆಸ್ಪತ್ರೆಯ ಪೀಠೋಪಕರಣಗಳನ್ನು ಪುಡಿ ಮಾಡಿದ್ದಾನೆ.

ವೈದ್ಯ ನಾರಾಯಣ್ ರಾಠೋಡ್ ಈ ಹಿಂದೆ ಇದೇ ರೀತಿ ಮಧ್ಯ ಸೇವಿಸಿದ ಆರೋಪ ದಡಿ ಅಮಾನತ್ತಾಗಿದ್ದ ಈಗ ಮತ್ತೆ ಮಧ್ಯ ಸೇವಿಸಿ ಆಸ್ಪತ್ರೆಗೆ ಬಂದಿರುತ್ತಾನೆ ಅದು ಅಲ್ಲದೆ ಆಸ್ಪತ್ರೆಗೆ ಬರುವ ಮಹಿಳಾ ರೋಗಿಗಳಿಗೆ ಅವಾಚ್ಯವಾಗಿ ನಿಂದಿಸುತ್ತಾನೆಂದು ಆರೋಪ ಕೇಳಿ ಬಂದಿದ್ದು ಇಂತಹ ಕುಡುಕ ಮಹಾಶಯ ವೈದ್ಯನನ್ನು ಶಾಶ್ವತವಾಗಿ ಅಮಾನತು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.