ಇತ್ತೀಚಿಗೆ ಕೆಲ ಮನುಷ್ಯರು ಆಸ್ತಿ,ಅಂತಸ್ತು, ಜಮೀನುಗಳ ವಿಚಾರಕ್ಕಾಗಿ ಇನ್ನೊಬ್ಬ ವ್ಯಕ್ತಿಯ ಜೀವವನ್ನು ತೆಗೆಯುವ ಮಟ್ಟಕ್ಕೆ ನಿಂತಿರುವುದು ದುರಂತವೇ ಸರಿ. ಮನುಷ್ಯನಾದವನು ಮೃಗಗಳ ಹಾಗೆ ವರ್ತಿಸುತ್ತಿದ್ದಾನೆ. ಇಲ್ಲಿ ಮಾನವನ ಮಾನವೀಯತೆ ಮರೆತು ಹೋದಂತಾಗಿದೆ. ಬದುಕು ಎಂದರೆ ಸಮಸ್ಯೆಗಳು ಬರುವುದು ಸಹಜವೇ! ಆದರೆ ಅಂತಹ ಸಮಸ್ಯೆಗಳಿಗೆ ಒಂದು ಜೀವವನ್ನೆ ತೆಗೆಯುವ ಮಟ್ಟಿಗೆ ಹೋಗುವುದಾದರೂ ಎಷ್ಟು ಸರಿ.? ಅಂದಹಾಗೆ ಇಂತಹದೇ ವಿಚಾರವಾಗಿ ವ್ಯಕ್ತಿಯೊಬ್ಬನನ್ನು ಜಮೀನಿನ ಸೀಮೆ ಸಲುವಾಗಿ ದೇವಸ್ಥಾನದಲ್ಲಿ ಮಲಗಿದವನನ್ನು ಕೊಚ್ಚಿ ಕೊಲೆ ಮಾಡಿದ ಪ್ರಕರನ ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಸೆ.4: ಶ್ರಾವಣ ಮಾಸದ ಕೊನೆಯ ಸೋಮವಾರ ದಿನ ರಾತ್ರಿ ಇಡಿ ಬೀರಸಿದ್ದೇಶ್ವರ ದೇವಸ್ಥಾನದಲ್ಲಿ ಭಜನೆ ಮಾಡಿ ದೇವಸ್ಥಾನದ ಹೊರಾಂಗಣದಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಹರಿತವಾದ ಕಬ್ಬು ಕಡಿಯುವ ಕೊಯ್ತಾದಿಂದ ಅಟ್ಟಾಡಿಸಿಕೊಂಡು ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಮದಾಪೂರ ಗ್ರಾಮದ ಬೀರಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಇನ್ನು ಕೊಲೆಯಾದ ವ್ಯಕ್ತಿಯನ್ನು ಅದೇ ಗ್ರಾಮದ ಮಡ್ಡೆಪ್ಪ ಯಲ್ಲಪ್ಪ ಬಾಣಸಿ (47) ಎಂದು ತಿಳಿದು ಬಂದಿದೆ. ಹಾಗೂ ಕೊಲೆ ಮಾಡಿದ ಆರೋಪಿಯನ್ನು ಬೀರಪ್ಪ ಸಿದ್ದಪ್ಪ ಸುನದೋಳಿ ಎಂದು ಗುರುತಿಸಲಾಗಿದೆ. ಕೊಲೆಯಾದ ಮಡ್ಡೆಪ್ಪ ಹಾಗೂ ಆರೋಪಿ ಬೀರಪ್ಪನಿಗೂ ಜಮೀನಿನ ಸೀಮೆಯ ವಿಚಾರದಲ್ಲಿ ಗಲಾಟೆ ನಡೆದಿತ್ತು. ಹೀಗಾಗಿ ಇದೇ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಪ್ರಕರಣ ದಾಖಲಾಗಿದೆ.
ಕೊಲೆಯಾದ ಮಡ್ಡೆಪ್ಪ ದೇವಸ್ಥಾನದ ಹೊರಾಂಗಣದಲ್ಲಿ ಮಲಗಿದ್ದ ಸಮಯ ನೋಡಿ ಆರೋಪಿ ಬೀರಪ್ಪ ಹರಿತವಾದ ಕಬ್ಬು ಕಡಿಯುವ ಕೊಯ್ತಾದಿಂದ ಹಲವಾರು ಬಾರಿ ಕೊಚ್ಚಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ್ಡು ತೀವ್ರ ರಕ್ತಸ್ರಾವವಾಗುತ್ತಿದ ಮಡ್ಡೆಪ್ಪನನ್ನು ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮಡ್ಡೆಪ್ಪನು ಮೃತಪಟ್ಟಿದ್ದಾನೆ.
ಇನ್ನು ಈ ಪ್ರಕರಣ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಈ ಪ್ರಕರಣ ಕುರಿತು ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಆರೋಪಿ ಬೀರಪ್ಪನನ್ನು ವಶಕ್ಕೆ ಪಡೆದ ಪೊಲೀಸರು ಗೋಕಾಕನ ಸಬ್ ಜೈಲಿಗೆ ಅಟ್ಟಿದ್ದಾರೆ.