ಕೃಷ್ಣಾ ನದಿ ದಡದಲ್ಲಿ ಇಸ್ಪೀಟ್ ಆಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ಮಾಡುವ ಮಾಹಿತಿ ಅರಿತ ಗುಂಪು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಲು ತೆಪ್ಪದ ಮೂಲಕ ಕೃಷ್ಣಾ ನದಿಯ ನಡುಗಡ್ಡೆಯತ್ತ ತೆರಳುತ್ತಿದ್ದ ಎಂಟು ಜನರ ಗುಂಪೊಂದು ದುರಾದೃಷ್ಟಕರ ಜೋರಾದ ಗಾಳಿ ಬೀಸಿದ ಕಾರಣ ತೆಪ್ಪ ಮಗುಚಿ ನದಿಯಲ್ಲಿ ಬಿದ್ದಿದೆ ಪರಿಣಾಮ ಇಬ್ಬರು ಈಜಿ ದಡ ಸೇರಿದರೆ ಆರು ಜನ ಜಲ ಸಮಾಧಿಯಾಗಿದ್ದು. ನದಿಯಲ್ಲಿ ಜಲ ಸಮಾಧಿ ಆದವರ ಹುಡುಕಾಟಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳಿಂದ ಶೋಧ ಕಾರ್ಯ ನಡೆಯುತ್ತಿದೆ.
ವಿಜಯಪುರ: ವಿಜಯಪುರ ಜಿಲ್ಲೆಯ ಕೋಲಾರ ತಾಲೂಕಿನ ಬಳುತಿ ಜಾಕ್ ವೆಲ್ ಬಳಿಯ ಕೃಷ್ಣಾ ನದಿ ದಡದಲ್ಲಿ ಇಸ್ಪೀಟ್ ಆಡುತ್ತಿದ್ದವರಿಗೆ ಪೊಲೀಸರು ದಾಳಿ ಮಾಡಲು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಅರಿತ ಮೇಲೆ ಗಾಬರಿಯಿಂದ ಅಲ್ಲಿಂದ ತಪ್ಪಿಸಿಕೊಳ್ಳಲು ತೆಪ್ಪದ ಸಹಾಯದಿಂದ ಕೃಷ್ಣಾ ನದಿಯಲ್ಲಿ ಪರಾರಿ ಆಗುತ್ತಿದ್ದ ವೇಳೆ ದುರಾದೃಷ್ಟಕರವಾಗಿ ಜೋರಾಗಿ ಬೀಸಿದ ಗಾಳಿಯ ಪರಿಣಾಮ ತೆಪ್ಪ ಮಗುಚಿ ಬಿದ್ದು ಆರು ಜನ ನೀರು ಪಾಲಾಗಿದ್ದರು. ಅದರಲ್ಲಿದ್ದ ಇಬ್ಬರು ಈಜಿ ದಡ ಸೇರಿದ್ದಾರೆ ಈಗಾಗಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳ ಸಹಾಯದಿಂದ ಇಬ್ಬರ ಮೃತ್ ದೇಹವನ್ನು ಹೊರತೆಗೆಯಲಾಗಿದ್ದು ಇನ್ನುಳಿದವರ ಮೃತ ದೇಹಗಳಿಗಾಗಿ ಹುಡುಕಾಟ ನಡೆಸಿದ್ದು ಶೋಧ ಕಾರ್ಯ ಮುಂದುವರಿದಿದೆ.
ಇನ್ನು ಮೃತ ಪಟ್ಟ ಇಬ್ಬರನ್ನು ಪುಂಡಲೀಕ ಯಂಕಂಚಿ (35), ಹಾಗೂ ಮಹಮ್ಮದ್ ಚೌಧರಿ (45) ಎಂದು ಗುರುತಿಸಲಾಗಿದೆ. ಹಾಗೂ ರಕ್ಷಣೆ ಮಾಡಲಾಗಿದ ಸಚಿನ್ ಕಟಬರ, ಫಾರುಕ್ ಅಮದರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ನೀರು ಪಾಲಾದವರ ಪೈಕಿ ದಶರತ್ ( 58) ಮೈಬೂಬ್ ವಾಲಿಕಾರ್ (35) ರಫೀಕ್ ಬಾಂಬೆ(40),ರಫಿಕ್ ಜಾಲಗಾರರಾಗಿ(48) ಶೋಧ ಕಾರ್ಯ ನಡೆಯುತ್ತಿದೆ ಪ್ರಕರಣ ನಡೆದ ಸ್ಥಳಕ್ಕೆ ಕೋಲ್ಹಾರ್ ಪೊಲೀಸರು ಹಾಗೂ ಎ ಎಸ್ ಪಿ ಶಂಕರ್ ಮಾರಿಹಾರ ಹಾಗೂ ವಿಜಯಪುರ ಎಸ್ ಪಿ ಋಷಿಕೇಶ್ ಸೋನೆವನೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಒಟ್ಟಿನಲ್ಲಿ ಜೂಜಾಟದ ಅಮಲಿಗೆ ಬಿದ್ದು ಅಮೂಲ್ಯವಾದ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಸ್ಪೀಟ್ ಚಟಕ್ಕೆ ದಾಸರಾದವರು ದುರಂತ ಅಂತ್ಯ ಕಂಡಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.