ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿ ಎಂದು ನಕಲಿ ವೇಷ್ ತೊಟ್ಟು ಊರಲ್ಲಿ ಹವಾ ಸೃಷ್ಟಿಸಿದ ಯುವಕ; ಕೊನೆಗೆ ಪೋಲಿಸರ್ ಅಥಿತಿಯಾದ ಆಸಾಮಿ.

ಆರೋಪಿ ಸಂಗಮೇಶ್ ಲಕ್ಕಪ್ಪಗೊಳ

ಇತ್ತೀಚಿಗೆ ನಕಲಿ ಅಧಿಕಾರಿಗಳ ಸೋಗಿನಲ್ಲಿ ಜನರನ್ನು ವಂಚಿಸುವ ಪ್ರಕರಣಗಳು ದಿನದಿಂದ ದಿನಕ್ಕೆ ಬೆಳಕಿಗೆ ಬರುತ್ತಲೆ ಇವೆ.  ಅದೇ ರೀತಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿನ ಯುವಕನೊಬ್ಬ ನಾನೊಬ್ಬ ಇಂಟಲಿಜೆನ್ಸಿ ಬ್ಯೂರೋ ಆಫೀಸರ್ ಎಂದು ಹೇಳಿ ಕೊಂಡು ಊರಲ್ಲಿ ಬಿಟ್ಟಿ ಫೋಜು ಕೊಡುವ ಅಸಾಮಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ರಬಕವಿ- ಬನಹಟ್ಟಿ ಮೇ.24: ಹೌದು ಇತ್ತೀಚಿಗೆ ನಕಲಿ ಅಧಿಕಾರಿಗಳೆಂದು ಜನರನ್ನು ವಂಚಿಸುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇವೆ. ಅದೇ ರೀತಿ ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಗ್ರಾಮದ ಸಂಗಮೇಶ್ ಲಕ್ಕಪ್ಪಗೊಳ (19). ಯುವಕ ತಾನೊಬ್ಬ ಇಂಟಲಿಜೆನ್ಸಿ ಬ್ಯುರೋ ಆಫೀಸರ್(IB), ಎಂದು ಊರಲ್ಲಿನ ಜನರಿಗೆ ಹೇಳಿ ತಿರುಪೆ ಶೋಕಿ ಮಾಡುತ್ತಿದ್ದ.  ಅದು ಅಲ್ಲದೆ ಬೈಕ್ ಮೇಲೆ ಐಬಿ ಲೋಗೋ ಹಾಗೂ ಇಂಟೆಲಿಜೆನ್ಸಿ ಬ್ಯುರೋದ ನಕಲಿ ಐಡಿ,  ಜೊತೆಗೆ ವಾಕಿ-ಟಾಕಿ ಇಟ್ಟುಕೊಂಡು ಪೋಸ್ ಕೊಡುತ್ತಿದ್ದ ಯುವಕ ಇಂದು ಪೊಲೀಸರ ಅತಿಥಿಯಾಗಿದ್ದಾನೆ ಈತನ ತಿರುಪೆ ಶೋಕಿ ಪೊಲೀಸರ ಗಮನಕ್ಕೆ ಬಿದ್ದ ಕೂಡಲೇ ಎಚ್ಚೆತ್ತ ಬನಹಟ್ಟಿ ಪೊಲೀಸರು ಆರೋಪಿಯನ್ನು ಬಂಧಿಸಿ ಈತನ ಹಿನ್ನೆಲೆ ಏನು ಎಂದು ವಿಚಾರಣೆ ನಡೆಸುತ್ತಿದ್ದಾರೆ.