ಮಂಡ್ಯ ಆ.21: ವಯಸ್ಸಲ್ಲದ ವಯಸ್ಸಿನಲ್ಲಿ ಮಾಡಬಾರದನ್ನು ಮಾಡಿದರೆ ಇಂತಹ ಅನಾಹುತಗಳು ಆಗುವುದ ಸರ್ವೇಸಾಮಾನ್ಯ. ಹೌದು ಯಾವ ವಯಸ್ಸಿನಲ್ಲಿ ಯಾರು ಏನು ಮಾಡಬೇಕು ಅದು ಮಾಡಿದರೆ ಮಾತ್ರ ಚೆಂದ್, ಫೇಸ್ಬುಕ್ ಇನ್ಸ್ಟಾಗ್ರಾಂ ನಂತಹ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವ ಯುವಕ ಯುವತಿಯರು ಹಾಗೂ ಪುರುಷರು ಈ ಸ್ಟೋರಿ ಒಂದು ಸಾರಿ ಓದಲೇಬೇಕು.
ಜೀವನೋಪಾಯಕ್ಕಾಗಿ ಹೇಗೂ ದೇವಸ್ಥಾನ ಒಂದರಲ್ಲಿ ಪೂಜಾರಿಯಾಗಿದ್ದ ಪೂಜಾರಪ್ಪನ ಜೀವನದಲ್ಲಿ ಆಕಸ್ಮಿಕವಾಗಿ ಸಿಕ್ಕ ಫೇಸ್ಬುಕ್ ಸುಂದರಿ ಪೂಜಾರಪ್ಪನ ತಟ್ಟೆಯಲ್ಲಿದ್ದ ಕಾಸನ್ನು ಬಿಡದೆ ಲಕ್ಷ ರೂಪಾಯಿಗಳನ್ನು ಕೂಡ ಮುಂಡಾಯಿಸಿ ನಾಪತ್ತೆಯಾದ ಫೇಸ್ಬುಕ್ ಸುಂದರಿಯ ಕಹಾನಿ ಸ್ಟೋರಿ.
ಹೌದು ಇವರಿಬ್ಬರೂ ವಯಸ್ಸಿನಲ್ಲಿ ತಂದೆ ಮಗಳ ಸಂಬಂಧದಂತೆ ಕಂಡರೂ ಕೂಡ ಮಾಡಬಾರದನ್ನು ಮಾಡಿದ್ದಾರೆ. ಚಿನ್ನ ರನ್ನ ಬಂಗಾರ ಅಂತ ಹೇಳಿ ರಾತ್ರಿ ಹಗಲು ಮೆಸೇಜ್ ಮಾಡಿದ್ದೆ ಮಾಡಿದ್ದು! ಹೀಗೆ ಪೂಜಾರಪ್ಪನ ನಿದ್ದೆಗೆಡಿಸಿದ ಫೇಸ್ಬುಕ್ ಸುಂದರಿ ಮಾತಿನಲ್ಲೇ ಮೋಡಿ ಮಾಡಿ ಮಂಚ ತೋರಿಸಿದ್ದಾಳೆ. ಹಂತ ಹಂತವಾಗಿ ಸಾವಿರ, ನೂರು ಹೀಗೆ ಲಕ್ಷಾಂತರ ರೂಪಾಯಿಗಳನ್ನು ಫೋನ್ ಪೆ ಮೂಲಕ ವಸೂಲಿ ಮಾಡಿ ಪೂಜಾರಪ್ಪನ ಹುಂಡಿಯನ್ನೆ ಖಾಲಿ ಮಾಡಿದ್ದಾಳೆ.
ಹೀಗೆ ಪೂಜಾರಪ್ಪನ ನಿದ್ದೆಗೆಡಿಸಿ ಜೊಲ್ಲು ಸುರಿಸುವ ಹಾಗೆ ಮಾಡಿದ ಫೇಸ್ಬುಕ್ ಸುಂದರಿ ಯಾವಾಗ ಹುಂಡಿಯಲ್ಲಿ ಹಣಕಾಲಿ ಎಂದು ತಿಳಿಯಿತೋ ಅಷ್ಟರಲ್ಲೇ ಬಂಡಿ ಹೂಡಿ ಫೋನ್ ಸ್ವಿಚ್ ಆಫ್ ಮಾಡಿದ್ದಾಳೆ. ಇತ್ತ ಪೂಜಾರಪ್ಪ ಫೋನು ಇಲ್ಲ! ಮೆಸೇಜ್ ಇಲ್ಲ! ನಿಂದು ಅಂತ ಒಂದೇ ಸಮನೆ ಫೇಸ್ಬುಕ್ ಸುಂದರಿಯ ನೆನಪಲ್ಲೇ ಕಣ್ಣೀರು ಇಡುತ್ತಿದ್ದಾನೆ.
ಓಲ್ಡ್ ಮ್ಯಾನ್ ಮನದಲ್ಲಿ ಪ್ರೀತಿ ಹುಟ್ಟಿಸಿ! ನಾಟಕವಾಡಿದ ಯಂಗ್ ಲೇಡಿ ?
ವಯಸ್ಸಲ್ಲದ ವಯಸ್ಸಲ್ಲಿ ಪ್ರೀತಿ ಗೀತಿ ಎಂದು ಹೋದರೆ ಟೋಪಿ ಹಾಕುವರೇ ಹೆಚ್ಚು, ಇಂತಹ ನಾಟಕೀಯ ಪ್ರೀತಿಯ ಬಲೆಗೆ ಸಿಕ್ಕು ಮೋಸ ಹೋದ ಪೂಜಾರಪ್ಪನ ಹೆಸರು ವಿಜಯಕುಮಾರ್ ಮಂಡ್ಯ ಜಿಲ್ಲೆಯ ಪುಟ್ಟ ಸೋಮನಹಳ್ಳಿಯವರು ವೃತ್ತಿಯಲ್ಲಿ ಪೂಜಾರಿಯಾಗಿದ್ದ ಇವರು ಪೂಜೆ ಪುನಸ್ಕಾರ ಅಂತ ತಮ್ಮ ಪಾಡಿಗೆ ತಾವು ಇದ್ದಿದ್ದರೆ ಇವತ್ತು ಇಂತಹ ಸ್ಥಿತಿ ಬರುತ್ತಿರಲಿಲ್ಲ. ಇದೇ ಪೂಜಾರಪ್ಪನಿಗೆ ಕೆಲವು ತಿಂಗಳುಗಳ ಹಿಂದೆ ಫೇಸ್ಬುಕ್ನಲ್ಲಿ ಸಿರಿ ಶ್ರೇಶಾ ಸರಿತಾ ಎಂಬ ಹುಡುಗಿಯ ಪರಿಚಯವಾಗಿ, ಆರಂಭದಲ್ಲಿ ಚಾಟಿಂಗ್! ಟಾಕಿಂಗ್ ! ಎಂದು ತಮ್ಮ ತಮ್ಮ ಅಳಲನ್ನು ಪರಸ್ಪರ ತೋಡಿಕೊಂಡಿದ್ದಾರೆ.
ಮೊದಲೇ ಇಳಿ ವಯಸ್ಸು! ಕಾಡು ಬಾ ಅಂತಾ ಇದೆ ನಾಡು ಹೋಗು ಅಂತಿದೆ! ಅಂತದರಲ್ಲಿ ಏಕಾಂಗಿಯಾಗಿ ಇದ್ದ ಈ ಜೀವಕ್ಕೆ ಮೇಲಿಂದ ಮೇಲೆ ಟೀನೇಜ್ ಯುವತಿಯ ಮೆಸೇಜು ಬರ್ತಾ ಇದ್ದರೆ ಈ ಜೀವ ತಾನೆ ಏನ್ ಮಾಡುತ್ತೆ ಹೇಳಿ? ಆಕೆಯ ಮಾತಿಗೆ ಇರೋ ಬರುವ ವಿಷಯನೆಲ್ಲ ಅವಳ ಮುಂದೆ ಹೇಳಿಕೊಂಡಿದ್ದಾರೆ. ಇದೇ ಸರಿಯಾದ ಸಮಯ ಎಂದು ಫೇಸ್ಬುಕ್ ಸುಂದರಿ ಪೂಜಾರಪ್ಪನಿಗೆ ಸರಿಯಾಗಿ ಪುಂಗಿ ಓದಿದ್ದಾಳೆ. ನನಗೆ ಅಂತ ಯಾರು ಇಲ್ಲ ನಾನು ನಿಮ್ ಜೊತೆಗೇನೆ ಇರ್ತೀನಿ ನನಗೆ ತಿನ್ನೋಕೆ ಎರಡು ಹೊತ್ತು ಊಟ ಹಾಕಿ ಸಾಕು ಅಂತ ಹೀಗೆ ಬುರುಡೆ ಬಿಟ್ಟಿದ್ದೆ ತಡ ಪೂಜಾರಪ್ಪನ ಮನಸ್ಸು ಬೆಣ್ಣೆ ತರ ಕರಗಿದೆ.
ಅಲ್ಲಿಗೆ ಪೂಜಾರಪ್ಪನ ಕಥೆ ಗೋವಿಂದ! ತೆಳ್ಳಗೆ ಬೆಳ್ಳಗೆ ಟೀನೇಜಿನ ಸುಂದರಿ ಇಂತಹ ಮಾತುಗಳಾಡಿದರೆ ಈ ಇಳಿಜೀವಾ ಆದರೂ ಏನ್ ಮಾಡುತ್ತೆ ಹೇಳಿ! ಫೇಸ್ಬುಕ್ ಸುಂದರಿಯ ನಾಟಕೀಯ ಮಾತುಗಳಿಗೆ ಬೆರುಗಾದ ಪೂಜಾರಪ್ಪ ಕೇಳಿದಾಗೆಲ್ಲ ಹಣ ಕಳಿಸಿದ್ದೇ ಕಳಿಸಿದ್ದು. ಹೀಗೆ ಪ್ರತಿಯೊಂದುಕ್ಕೂ ಹಣ ವಸೂಲಿ ಮಾಡಿ ಒಟ್ಟಾರೆ 1,36,648 ರೂಪಾಯಿಗಳ ಹಣ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾಳೆ.
ಪಾಪ ಪೂಜಾರಪ್ಪನಿಗೆ ಆಸರೆ ಆಗುತ್ತೀನಿ ಅಂತ ಹೇಳಿ ಸಾವಿರು ಗಂಟಲೆ ದುಡ್ಡು ಅಷ್ಟೇ ಅಲ್ಲದೆ ನೂರು ರೂಪಾಯಿ ಸಹ ಬಿಡದೆ ಪೂಜಾರಪ್ಪನ್ನ ಹುಂಡಿ ಖಾಲಿ ಮಾಡಿ ಫೋನ್ ಬ್ಲಾಕ್ ಮಾಡಿದ್ದಾಳೆ. ಫೇಸ್ಬುಕ್ ಸುಂದರಿಯ ಮಾತುಗಳಿಗೆ ಮರುಳಾದ ಪೂಜಾರಪ್ಪ ದುಡ್ಡು ಕಳೆದುಕೊಂಡರೂ ಕೂಡ ಆಕೆಯ ಮೇಲಿನ ವ್ಯಾಮೋಹ ಮಾತ್ರ ಕಡಿಮೆಯಾಗಿಲ್ಲ. ಈಗಲೂ ಕೂಡ ಆಕೆ ಬರುವುದಾದರೆ ಬರಲಿ ಇಲ್ಲ ಎಂದರೆ ನನ್ನ ಹಣ ವಾಪಸ್ ಕೊಡಲಿ ಎಂದು ಪೂಜಾರಪ್ಪ ಹೇಳುತ್ತಿದ್ದಾನೆ.
ಒಟ್ನಲ್ಲಿ ಕೊಟ್ಟೋನು ಕೋಡಂಗಿ ಇಸ್ಕೊಂಡವನು ವೀರಭದ್ರ ಎನ್ನುವ ಹಾಗೆ ಆಗಿದೆ ಈ ಸ್ಟೋರಿ. ಯಾವಾಗ ತಾನು ಮೋಸ ಹೋಗಿದ್ದೇನೆ ಎಂದು ಅರಿತ ಪೂಜಾರಪ್ಪ ವಿಜಯ್ ಕುಮಾರ್ ಮಂಡ್ಯ ಸೈಬರ್ ಪೊಲೀಸ್ ಠಾಣೆಯಲ್ಲಿ ಯುವತಿಯ ವಿರುದ್ಧ ದೂರು ದಾಖಲಿಸಿದ್ದಾರೆ.