ಹಿಂದೂ ಮಗುವಿನ ಆರೈಕೆ ಮಾಡಿದ ಮುಸ್ಲಿಂ ಮಹಿಳೆ
ಜಾತಿ-ಧರ್ಮದ ನಡುವೆ ಅನಾದಿಕಾಲದಿಂದಲೂ ಯುದ್ಧ-ಹೋರಾಟಗಳು ನಡೆಯುತ್ತಲೇ ಬಂದಿವೇ ಆದರೇ, ತಾಯಿಯ ಮಮತೆಗೆ ಜಾತಿ ಮತದ ಭೇದವಿಲ್ಲ. ತಾಯಿಯ ಮಮಕಾರಕ್ಕೆ ಬೆಲೆ ಕಟ್ಟಲಾಗದು. ಧರ್ಮ ಬೇರೆಯಾದರೇನು ಮಾನವಿಯತೇ ಎಲ್ಲರಲ್ಲೂ ಇರುತ್ತದೆ ಎಂಬುದಕ್ಕೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ನಡೆದ ಈ ಘಟನೆ ಭಾನುವಾರ ಸಾಕ್ಷಿಯಾಗಿದೆ.
ಬೆಳಗಾವಿ: ಹೌದು ಜಾತಿ ಧರ್ಮಗಳ ನಡುವೆ ಹೊಡೆದಾಟ ಬಡೆದಾಟ ಹೋರಾಟಗಳು ನಡೆಯುತ್ತಲೇ ಇರುತ್ತದೆ, ಅಂತಹದರಲ್ಲೂ ಕೂಡ ಮಾನವೀಯತೆ ಜಾತಿ ಅನ್ನೋದು ಕೂಡ ಮಹತ್ತರವಾಗಿದೆ. ಸ್ವಂತ ಸಂಬಂಧಿಗಳೇ ಕಣ್ಣೆತ್ತಿ ನೋಡದ ಈ ದಿನಮಾನಗಳಲ್ಲಿ ಬೇರೆ ಧರ್ಮದ ಬಾನಂತಿ ಹಾಗೂ ಮಗುವನ್ನು ಹಾರೈಕೆ ಮಾಡಿ ಸುಮಾರು ಎರಡು ತಿಂಗಳುಗಳಿಂದ ತಮ್ಮ ಮನೆಯಲ್ಲಿ ಬಾನಂತಿಗೆ ಆರೈಕೆ ಮಾಡಿದ ಮುಸ್ಲಿಂ ಸಮುದಾಯದ ಕುಟುಂಬಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಶಾಂತವ್ವ ನಿಡಸೋಶಿ ಎಂಬ ಮಹಿಳೆಯು ಹೆರಿಗೆಗೆ ಬರುವ ಮುನ್ನ ಆಕೆಯ ಗಂಡ ಜಗಳವಾಡಿ ಹೋಗಿದ್ದ, ಶಾಂತವ್ವ ಒಬ್ಬಳೇ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಹೆರಿಗೆಗೆ ಅಂತ ಬಂದು ದಾಖಲಾಗಿದ್ದರು. ಶಾಂತವ್ವಳಿಗೆ ಸಿಜರಿನ್ ಮೂಲಕ ಹೆರಿಗೆ ಆಗಿದ್ದು ಹೆರಿಗೆಯಾದ ನಂತರ ಶಾಂತವ್ವಳಿಗೆ ತೀವ್ರ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿರುತ್ತಾರೆ, ಅದೇ ಆಸ್ಪತ್ರೆಯ ಪಕ್ಕದ ಬೆಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯನ್ನು ನೋಡಲು ಬಂದ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದ ಶಮಾ ದೇಸಾಯಿ ಅವರು ಬಾಣಂತಿ ಶಾಂತವ್ವಳಿಗೆ ಯಾರು ಸಂಬಂಧಿಕರು ಇಲ್ಲದ ಕಾರಣ ಮಗು ಹಾಗೂ ಬಾಣಂತಿಯನ್ನು ಶಮಾ ದೇಸಾಯಿ ಅವರು ಕೊಣ್ಣೂರಿನ ತಮ್ಮ ಮನೆಗೆ ಕರೆದುಕೊಂಡು ಹೋಗಿ ಸುಮಾರು 45 ದಿನಗಳ ಕಾಲ ಆರೈಕೆಯನ್ನು ಮಾಡಿ ತಾಯಿ ಹಾಗೂ ಮಗುವನ್ನು ಮಾರ್ಕೆಟ್ ಪೊಲೀಸ್ ಸ್ಟೇಷನ್ ಬೆಳಗಾವಿ ಸಿಬ್ಬಂದಿಗಳ ಸಮ್ಮುಖದಲ್ಲಿ ಮಗು ಜೋಪಾನವಾಗಿ ನೀಡಿರುತ್ತಾರೆ. ಮುಸ್ಲಿಂ ಕುಟುಂಬದ ಈ ಹೃದಯಸ್ಪರ್ಸಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.