ಹೆಂಡತಿಯರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಕೊರಳೋಡ್ಡುವ ಪುರುಷರ ಪ್ರಮಾಣ ಹೆಚ್ಚಳವಾಗಿದೆ.
ಬೆಂಗಳೂರು ಡಿ. 23: ಕ್ಷುಲ್ಲಕ ಕಾರಣಕ್ಕೆ ಪದೇ ಪದೇ ಜಗಳಕ್ಕೆ ನಿಲ್ಲುವ ಮಹಿಳೆಯರು ಈ ಕಥೆ ಒಂದು ಸಾರಿ ಓದಲೇಬೇಕು. “ ಮೊದಲೆಲ್ಲ ಗಂಡಂದಿರಿಂದ ಹೆಂಡತಿಯರಿಗೆ ಕಿರುಕುಳ ” ಎಂಬ ಪ್ರಕರಣಗಳು ಕೇಳಿ ಬರುತ್ತಿದ್ದವು. ಗಂಡನಾದವನು ಎಷ್ಟೇ ಕುಡಕನಾದರೂ ಸಹ, ಪ್ರತಿ ನಿತ್ಯ ಕಿರುಕುಳ ನೀಡಿದರು “ ಪತಿಯೇ ಪರದೈವ ”ಎಂದು ಭಾವಿಸಿ ದಾಂಪತ್ಯ ಜೀವನದಲ್ಲಿ ಎಷ್ಟೇ ಅಡೆತಡೆಗಳು ಬಂದರೂ ಕೂಡ ಅದನ್ನು ದಾಟಿ ಪತಿಯ ವಿರುದ್ಧ ಪ್ರಶ್ನೆ ಮಾಡದೆ ಸಂಸಾರದ ಗುಟ್ಟನ್ನು ರಟ್ಟು ಮಾಡದೆ ಸಂಸಾರ ಸಾಗರವನ್ನು ದಾಟಿದ ಮಹಿಳೆಯರು. ಆದರೆ ಇತ್ತೀಚಿನ ದಿನಮಾನಗಳಲ್ಲಿ ಹೆಂಡತಿಯರ ಕಿರುಕುಳಕ್ಕೆ ಗಂಡಂದಿರು ಬೇಸತ್ತಿದ್ದು. ಇದೇ ಕಾರಣಕ್ಕೆ ಸಂಬಂಧಿಸಿದಂತೆ ಕೆಲ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಹೌದು ಇತ್ತೀಚಿನ ದಿನಗಳಲ್ಲಿ ಕುಟುಂಬದಲ್ಲಾಗುವ ದಾಂಪತ್ಯದ ಕಲಹಗಳಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಆಘಾತಕಾರಿ ಅಂಶವೊಂದು ಬಿಡುಗಡೆಯಾಗಿದ್ದು, ಇತ್ತೀಚಿಗೆ ರಾಷ್ಟೀಯ ಅಪರಾಧ ಬ್ಯುರೋ ವರದಿಯಲ್ಲಿ ಬಹಿರಂಗವಾಗಿದೆ. 2023 ರ ವರದಿಯ ಪ್ರಕಾರ ವೈವಾಹಿಕ ಜೀವನ ಕಲಹದಿಂದ ಶೇ. 4,8. ಪ್ರೇಮ ಪ್ರಕರಣ ಕಲಹದಿಂದ ಶೇ 4,6 ರಷ್ಟು ಹಾಗೂ ಕುಟುಂಬ ಕಲಹದಿಂದ 33,2 ರಷ್ಟು ಸಾವನಪ್ಪಿದ್ದಾರೆ.
ಕಾನೂನಿನ ಹೆದರಿಕೆ : ಸಂವಿಧಾನಿಕವಾಗಿ ಜಾರಿಗೆ ತರಲಾದ ವರದಕ್ಷಿಣೆ ನಿಷೇದ ಕಾಯ್ದೆ 1961 (ತಿದ್ದುಪಡಿ ಕಾಯ್ದೆ) ಅನ್ವಯ ಗಂಡು ಮಕ್ಕಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ಬಹುತೇಕ ವಿವಾಹಿತ ಪುರುಷರು ವರದಕ್ಷಿಣೆಯ ಪ್ರಕರಣ ಹಾಗೂ ಕಾನೂನಿಗೆ ಹೆದರಿ ಆತ್ಮಹತ್ಯೆಯೇ ಪರಿಹಾರವೆಂದು ನೇಣಿಗೆ ಕೊರಳೊಡ್ಡುತ್ತಿದ್ದಾರೆ. ಎಂಬ ಅಂಶ ವರದಿಯಲ್ಲಿ ಉಲ್ಲೇಖವಾಗಿದೆ.
ಕಾನೂನು ದುರ್ಬಳಕೆ: ಮಹಿಳೆಯರು ತಮ್ಮ ಪರವಾಗಿ ಇರುವ ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು. ಸಣ್ಣ ಪುಟ್ಟ ಕಾರಣಗಳಿಗೂ ಸಹ ಕೋರ್ಟ್ ಕಚೇರಿ ಅಂತ ಅಲೆದಾಡಿಸುತ್ತಿದ್ದಾರೆ. ಹೀಗಾಗಿ ಕ್ಷುಲ್ಲಕ ಕಾರಣಕ್ಕೆ ಗಂಡಂದಿರು ಜೈಲುವಾಸ ಅನುಭವಿಸುವಂತೆ ಮಾಡುತ್ತಿದ್ದಾರೆ. ಇದೆ ಕಾರಣಗಳಿಂದ ಗಂಡಸರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ವರದಕ್ಷಿಣೆ ಕಾನೂನಿನ ಅಡಿಯಲ್ಲಿ ಪ್ರತಿ ಹಂತದಲ್ಲೂ ಪುರುಷರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದ್ದೆ.
ಒತ್ತಡದ ಜೀವನ: ಕೆಲಸ ಮಾಡುವ ಕಚೇರಿಗಳಲ್ಲಿ ಕೆಲಸದ ಒತ್ತಡ ಒಂದು ಕಡೆ ಆದರೆ ಮನೆಯಲ್ಲಿ ಹೆಂಡತಿಯ ಮಾನಸಿಕ್ ಕಿರುಕುಳದಿಂದ ಬಳಲುತ್ತಿರುವ ಗಂಡಂದಿರ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳೆಯರ ವಿರುದ್ಧ ಕಾನೂನಿನ ಮೂಲಕ ಹೋರಾಡಲು ಪುರುಷರ ಪರ ಸೂಕ್ತ ಕಾನೂನು ಇಲ್ಲದಂತಾಗಿದೆ. ಇದರಿಂದ ಕೌಟುಂಬಿಕ ಕಲಹಗಳಲ್ಲಿ ಮಹಿಳೆಯರಿಗಿಂತ ಪುರುಷರೆ ಹೆಚ್ಚಾಗಿ ಮಾಡಿಕೊಳ್ಳುತ್ತಿರುವ ಅಂಶ ವರದಿಯಲ್ಲಿ ಉಲ್ಲೆಖವಾಗಿದೆ.