ಹಾವೇರಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ 13 ಜನರ ಪೈಕಿ;  ಮಾನಸ ಎಂಬ ಅಂಧರ ಪುಟ್ಬಾಲ್ ತಂಡದ ನಾಯಕಿ  ದಾರುಣ ಸಾವು.

ಮೃತ ದುರ್ದೈವಿ ಮಾನಸ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೆ ಹಟ್ಟಿ ಗ್ರಾಮದ  ಒಂದೇ ಕುಟುಂಬದ 17 ಜನರು ಟಿಟಿ( Tempo Traveller) ವಾಹನದ ಮೂಲಕ ಮಹಾರಾಷ್ಟ್ರದ ಪ್ರಸಿದ್ಧ ದೇವಸ್ಥಾನ ಹಾಗೂ ಬೆಳಗಾವಿ ಜಿಲ್ಲೆಯ ಚಿಂಚಲಿ ಮಾಯಮ್ಮ ಹಾಗೂ ಸವದತ್ತಿಯ ಎಲ್ಲಮ್ಮ ದರ್ಶನ ಮುಗಿಸಿ ವಾಪಸಾಗುತ್ತಿದ್ದ ವೇಳೆ ದುರಾದೃಷ್ಟಕರ ಸಂಭವಿಸಿ ಜವರಾಯನ ಅಟ್ಟಹಾಸದಿಂದ 13 ಜನ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಇಂದು ಶುಕ್ರವಾರ (ಜೂ.28) ಬೆಳ್ಳಂಬೆಳಗ್ಗೆ ಸುಮಾರು 3,30 ಕ್ಕೇ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್ ಬಳಿ ಸಂಭವಿಸಿದೆ.

ಈ ರಣ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 13 ಜನ ಸೋದರ ಸಂಬಂಧಿಗಳುಗಳು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆಯಲ್ಲಿ ಮಾನಸ ವೆಂಬ( 24 ) ವರ್ಷದ ಅಂದ ಬಾಲಕಿ ಫುಟ್ಬಾಲ್ ತಂಡದ ನಾಯಕಿ ಯಾಗಿದ್ದು ( Blind Football Team Captain) ಭಾರತದ ದೃಷ್ಟಿ ಚೇತನರ ಮಹಿಳಾ ಫುಟ್ಬಾಲ್ ತಂಡದಲ್ಲಿ ಹಲವಾರು ಸಾಧನೆ ಮಾಡಿ ಅಪಾರ ಕೀರ್ತಿ ತಂದಿದ್ದ  ಮಾನಸ ಬ್ರೈನ್ ಲಿಪಿ ಮೂಲಕ ಎಎಸ್ಪಿ ಮಾಡಿದ ಭದ್ರಾವತಿ ತಾಲೂಕಿನ ಮೊದಲ ಯುವತಿ ಯಾಗಿದ್ದ ಮಾನಸ IAS ಆಗುವ ಕನಸನ್ನು ಕಂಡಿದ್ದರು ಮಾನಸ ಅವರು IAS ಆಗಲು ಬೆಂಗಳೂರಿನಲ್ಲಿ ಅಭ್ಯಾಸ ಮಾಡುತ್ತಿದ್ದರು.

ಸದ್ಯ ಈ ಭೀಕರ ಅಪಘಾತಕ್ಕೆ ಚಾಲಕನ ನಿದ್ದೆಯ ಮಂಪರು ಹಾಗೂ ಅಜಾಗರೂಕತೆ ಕಾರಣದಿಂದಾಗಿ 13 ಜನರು ಸಾವನ್ನಪ್ಪಿದ್ದು ಅದೇ ರೀತಿ ಅಂದ ಬಾಲೆಯಾಗಿದ್ದರು ಜೀವನದಲ್ಲಿ ಸಾಧನೆ ಶಿಖರ ಏರಲು ಕನಸು ಕಂಡಂತ ದೃಷ್ಟಿ ಚೇತನರ ಮಹಿಳಾ ಫುಟ್ಬಾಲ್  ತಂಡದ ನಾಯಕಿ ಮಾನಸ ಅವರು ಕೂಡ ಸಾವು  ಕಂಡಿದ್ದು. ಈ ದಾರುಣ ಘಟನೆಯಿಂದಾಗಿ ಮೃತರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.