ಗೋಕಾಕ್: ಬೆಳಗಾವಿ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಂದ ಗೋಕಾಕ್ ಮತಕ್ಷೇತ್ರದ ಕುಂದರ ನಾಡಿನ ಅಂಕಲಗಿ ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಪರಮಪೂಜ್ಯ ಶ್ರೀ ಅಮರ ಸಿದ್ದೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀಗಳಿಗೆ ಜಗದೀಶ್ ಶೆಟ್ಟರ್ ಸತ್ಕರಿಸಿದರು.
ಈ ಸಂದರ್ಭದಲ್ಲಿ ಸಾಹುಕಾರ್ ಆಪ್ತ ಸಹಾಯಕರಾದ ಭೀಮನಗೌಡ ಪೊಲೀಸ್ ಗೌಡರ್ ಟಿ ಆರ್ ಕಾಗಲ್, ಮಡ್ಡೆಪ್ಪ ತೋಳಿನವರ್ ಹಾಗೂ ಬಿಜೆಪಿ ಬೆಳಗಾವಿ ಗ್ರಾಮೀಣ ಅಧ್ಯಕ್ಷ ಸುಭಾಸ್ ಪಾಟೀಲ,ಸುರೇಶ್ ಸಣದಿ ಹಾಗೂ ಭೀಮಸಿ ಬರಮನ್ನವರ್ ಸೇರಿದಂತೆ ಗೋಕಾಕ್ ಮತಕ್ಷೇತ್ರದ ಶಾಸಕರಾದ ಶ್ರೀ ರಮೇಶ್ ಜಾರಕಿಹೊಳಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.