ಫೈನಲ್ ತಲುಪಿದ ಬೆಳಗಾವಿ ಜಿಲ್ಲಾ ಕಬಡ್ಡಿ ತಂಡಕ್ಕೆ ಅನ್ಯಾಯ! ಪ್ರಭಾವಿಗಳ ವತ್ತಡಕ್ಕೆ ಮಣಿದು ಪಂದ್ಯಾವಳಿಯನ್ನೇ ಮರು ಸಂಘಟಿಸಿದ  ಅಧಿಕಾರಿಗಳು:

ಯಾರದೋ ವತ್ತಡಕ್ಕೆ ಮನಿದು ಫೈನಲ್ ಹಂತಕ್ಕೆ ತಲುಪಿದ ಬೆಳಗಾವಿ ವಿಭಾಗ ಮಟ್ಟದ 17 ವಯೋಮಿತಿಯ ಬಾಲಕರ ಕಬಡ್ಡಿ ಪಂದ್ಯಾವಳಿಯನ್ನು ಮೊಟಕುಗೊಳಿಸಿ ಮರು ಸಂಘಟನೆಗೆ ಆದೇಶಿಸಿದ ಶಿಕ್ಷಣ ಇಲಾಖೆ.

ಮರು ಸಂಘಟನೆಗೆ ಆದೇಶಿಸಿದ ಪತ್ರ

ಬೆಳಗಾವಿ ಅ.15: ಬೆಳಗಾವಿ ವಿಭಾಗ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಳಗಾವಿ ಹಾಗೂ ಶಿರಸಿ ತಂಡಗಳಿಗೆ ಅನ್ಯಾಯ!  ಹೌದು ದಿ.04/10/2024 ರಿಂದ 06/10/2024ರ ವರೆಗೆ ವಿಜಯಪುರ ಜಿಲ್ಲೆಯ ಡಾ! ಬಿ, ಆರ್, ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ವಿಭಾಗ ಮಟ್ಟದ 17 ವಯೋಮಿತಿಯ ಬಾಲಕರ ಕಬಡ್ಡಿ ಪಂದ್ಯಾವಳಿ ಅಂತಿಮ ಹಂತಕ್ಕೆ ತಲುಪಿ ಕಾರಣಾಂತರಗಳಿಂದ ಪಂದ್ಯಾವಳಿಗಳನ್ನು ತಡೆಹಿಡಿದಿದ್ದ ವಿಜಯಪುರ ಶಾಲಾ ಶಿಕ್ಷಣ ಇಲಾಖೆಯ  ಉಪನಿರ್ದೇಶಕರು (ಆಡಳಿತ).

ಬೆಳಗಾವಿ ಹಾಗೂ ಗದಗ ತಂಡಗಳ ನಡುವಿನ ಮೊದಲನೆಯ ಪಂದ್ಯ

ಬೆಳಗಾವಿ ಹಾಗೂ ಚಿಕ್ಕೋಡಿ ತಂಡಗಳ ನಡುವೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚಿಕ್ಕೋಡಿ ತಂಡವನ್ನು ಮಣಿಸಿ ಫೈನಲ್ ಹಂತಕ್ಕೆ ತಲುಪಿದ ಬೆಳಗಾವಿ ತಂಡ. ಇನ್ನೋಂದು ಭಾಗದಲ್ಲಿ ವಿಜಯಪುರ ಹಾಗೂ ಶಿರಸಿ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಶಿರಸಿ ತಂಡ ವಿಜಯಪುರ ತಂಡವನ್ನು ಸೋಲಿಸಿ ಫೈನಲ್ ಹಂತಕ್ಕೆ ತಲುಪಿತ್ತು, ಆದರೆ ಶಿರಸಿ ತಂಡದಲ್ಲಿ ವಯೋಮಿತಿ ಮೀರಿ ವಿದ್ಯಾರ್ಥಿಗಳು ಆಡುತ್ತಿದ್ದಾರೆಂದು. ಶಿರಸಿ ತಂಡದ ವಿರುದ್ಧ  ದೂರು ನೀಡಿದ ವಿಜಯಪುರ ತಂಡ. ಹೀಗಾಗಿ ಶಿರಿಸಿ ತಂಡದ ವಿದ್ಯಾರ್ಥಿಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಅಂದಿನ ಫೈನಲ್ ಪಂದ್ಯಾವಳಿಯನ್ನು ಮೊಟಕುಗೊಳಿಸಿ ಪರಿಶೀಲನೆ ಮುಗಿದ ನಂತರ ಫೈನಲ್ ಪಂದ್ಯಾವಳಿಯನ್ನು ಆಡಿಸಲಾಗುವುದು ಎಂದು ಹೇಳಿದ ವಿಜಯಪುರ ದೈಹಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು.

ಚಿಕ್ಕೋಡಿ ಹಾಗೂ ಬೆಳಗಾವಿ ತಂಡದ ಸೆಮಿ ಫೈನಲ್ ಪಂದ್ಯ

ಆದರೆ ಇಂದು ನಡೆದ ಸಭೆಯಲ್ಲಿ ಬೆಳಗಾವಿ ವಿಭಾಗ ಮಟ್ಟದ ಪಂದ್ಯಾವಳಿಯನ್ನು ಮೊಟ್ಟಕುಗೊಳಿಸಿ ಮತ್ತೊಮ್ಮೆ ಸಂಘಟಿಸಲಾಗುವುದು ಎಂದು ಆದೇಶಿಸಿದ ಶಿಕ್ಷಣ ಇಲಾಖೆ. ಶಿಕ್ಷಣ ಇಲಾಖೆಯ ಈ ನಿರ್ಧಾರ ಯಾವ ಆಧಾರದ ಮೇಲೆ ಮಾಡಿದ್ದಾರೆ ಎಂಬುದು ಮಾತ್ರ ಪ್ರಶ್ನಾರ್ಥವಾಗಿದೆ. ಯಾರದೋ ಮಾತಿನ ಮೇಲೆ ಅಥವಾ ಯಾರದೋ ಒತ್ತಡಕ್ಕೆ ಒಳಗಾಗಿ ಶಿಕ್ಷಣ ಇಲಾಖೆಯ ನಿಯಮವನ್ನು ಉಲ್ಲಂಘನೆ ಮಾಡಿದ ಅಧಿಕಾರಿಗಳು. ಒಂದು ಬಾರಿ ಫೈನಲ್ ಹಂತಕ್ಕೆ ತಲುಪಿದ ತಂಡಗಳನ್ನು ಮೊಟಕುಗೊಳಿಸಿ ಮತ್ತೊಮ್ಮೆ ಪಂದ್ಯಾವಳಿಯನ್ನು ಸಂಘಟಿಸಲು ಶಿಕ್ಷಣ ಇಲಾಖೆಯಲ್ಲಿ ಏನಾದರೂ ಆಧಾರಗಳಿವೆಯೆ?  ಎಂಬುದು ಮಾತ್ರ ನಿಗೂಢವಾಗಿದೆ.

17 ವಯೋಮಿತಿಯ ಬಾಲಕರ ಕಬಡ್ಡಿ ಪಂದ್ಯಾವಳಿಯ ತಳಕು

ಇತ್ತ ಶಿಕ್ಷಣ ಇಲಾಖೆ ತೆಗೆದುಕೊಂಡ ನಿರ್ಧಾರದಿಂದ ಫೈನಲ್ ಹಂತಕ್ಕೆ ತಲುಪಿದ ವಿದ್ಯಾರ್ಥಿಗಳು ನಿರಾಶದಾಯಕವಾಗಿದ್ದು ಶಿಕ್ಷಣ ಇಲಾಖೆಗೆ ವಿದ್ಯಾರ್ಥಿಗಳು ಹಾಗೂ ಪಾಲಕರು ಹಿಡಿ ಶಾಪವನ್ನು ಹಾಕುತ್ತಿದ್ದಾರೆ ಶಿಕ್ಷಣ ಇಲಾಖೆಯ ಈ ನಿರ್ಧಾರ ನಿಜಕ್ಕೂ ಅಚ್ಚರಿಯನ್ನು ಉಂಟು ಮಾಡಿದೆ. ಇತ್ತ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಕೂಡ ಚೆಲ್ಲಾಟವನ್ನು ಆಡಿದ  ಶಿಕ್ಷಣ ಇಲಾಖೆ ಅಧಿಕಾರಿಗಳು.

ಉತ್ತಮ ತಂಡವನ್ನು ಕಟ್ಟುವ ಹಿಂದಿನ ನ ಶ್ರಮ ಅಧಿಕಾರಿಗಳಿಗೆ ಏನು ಗೊತ್ತು ಸರ್…?

ಪ್ರತಿ ವರ್ಷ ಶಾಲಾ ಶಿಕ್ಷಣ ಇಲಾಖೆಯು  ಸಂಘಟಿಸುವ ಕ್ರೀಡಾ ಚಟುವಟಿಕೆಗಳು ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಆಯೋಜಿಸುವ ಯೋಜನೆಯಾಗಿದ್ದು ಆದರೆ ಈ ಯೋಜನೆಯಲ್ಲಿ ಸಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗೋದು ಮಾತ್ರ ಘೋರ ದುರಂತವೇ ಸರಿ. ಹೌದು ಒಬ್ಬ ವಿದ್ಯಾರ್ಥಿಯನ್ನು ಉತ್ತಮ ಕ್ರೀಡಾಪಟುವನ್ನಾಗಿ ಮಾಡಲು ಅದರ ಹಿಂದಿನ ಶ್ರಮ ಮಾತ್ರ ಆ ತರಬೇತಿದಾರನಿಗೆ ಮಾತ್ರ ತಿಳಿದಿರುತ್ತದೆ ಹಲವಾರು ಕಠಿಣಶ್ರಮ ಹಾಗೂ ನಿರಂತರ ತರಬೇತಿಯಿಂದ ಒಬ್ಬ ವಿದ್ಯಾರ್ಥಿಯನ್ನು ಉತ್ತಮ ಕ್ರೀಡಾಪಟುವನ್ನಾಗಿ ಮಾಡುವ ಉದ್ದೇಶದಿಂದ ತರಬೇತಿ ನೀಡಿದ ತರಬೇತಿದಾರನಿಗೆ ನಿರಾಶದಾಯಕವೇ ಸರಿ. ಇಂತಹ  ಆಧಾರವಿಲ್ಲದ ನಿರ್ಣಯಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಬಾಳಲಿ ಚೆಲ್ಲಾಟವಾಡಿದ ಅಧಿಕಾರಿಗಳು.

“ಸರ್ ಇವ್ರಿಗೇನೂ ಗೊತ್ತು ಸರ್ ಇವರು ಸರ್ಕಾರಿ ಸಂಬಳ ತಗೊಂಡು ಆರಾಮಾಗಿ ಆಫೀಸಲ್ಲಿ ಇರ್ತಾರೆ. ಇವರಿಗೆ ಸರ್ಕಾರ ಯಾವುದೇ ರೀತಿ ಸಾಧನೆ ಮಾಡಲು ನಿರ್ಬಂಧ ಹೇರಿರುವುದಿಲ್ಲ! ಆದರೆ ನಾವು ಇದಿವಲ್ಲ ಸರ್!  ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ  ಕೇವಲ ಹತ್ತು-ಹದಿನೈದು ಸಾವಿರಕ್ಕೆ ದುಡಿಯುವ ನಾವುಗಳು ಪ್ರತಿ ವರ್ಷ ಏನಾದರೂ ಒಂದು ಸಾಧನೆ ಮಾಡುವ ಹಂಬಲದಲ್ಲಿ ಇರ್ತೀವಿ ಸರ್. ಆದರೆ ಇಂತಹ ನಿರ್ಧಾರಗಳಿಂದ ನಮಗೆ ನೋವುಂಟು ಆಗಿದೆ ಸರ್. ದೊಡ್ಡವರ ಆಟದಲ್ಲಿ ಚಿಕ್ಕವರ ನರಳಾಟ.”  ಇದು ಬೆಳಗಾವಿ ತಂಡದ ತರಬೇತುದಾರರೊಬ್ಬರ ಮನಸ್ಸಿನ ಮಾತು.

ಇತ್ತ ಈ ನಿರ್ಧಾರವನ್ನು ಯಾವ ಆಧಾರದ ಮೇಲೆ ಕೈಗೊಂಡಿದ್ದೀರಿ ಎಂದು  ಅಧಿಕಾರಿಗಳನ್ನು ಕೇಳಿದರೆ ಇದಕ್ಕೆ ಇಲಾಖೆಯು ತಂಡವನ್ನು ರಚಿಸಿದೆ ಆ ತಂಡದಲ್ಲಿ ಕೈಗೊಂಡ ನಿರ್ಧಾರ ಎಂದು ಹಾರಿಕೆ ಉತ್ತರ ನೀಡುತ್ತಿರುವ ಅಧಿಕಾರಿಗಳು. ಫೈನಲ್ ಪ್ರವೇಶಿಸಿದ ಪಂದ್ಯಗಳಿಗೆ ಅನ್ಯಾಯ ವಾಗುವುದಿಲ್ಲವೇ ಎಂದು ಕೇಳಿದರೆ ನಾಳೆ ಬನ್ನಿ ಅಲ್ಲೇ ಮಾತಾಡೋಣ ಎಂದು ಹೇಳುತ್ತಿರುವ ಅಧಿಕಾರಿಗಳು ಇತ್ತ ರಾಜ್ಯ ಮಟ್ಟದ ಪಂದ್ಯಾವಳಿಗಳು ದಿನಾಂಕ್ 17 ರಿಂದ 18ರವರೆಗೆ ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆಯುತ್ತಿದ್ದು ತಂಡಗಳಿಗೆ ಸಮಯ ಅವಕಾಶ ಇಲ್ಲದಂತಾಗಿದೆ.