ಮನುಷ್ಯನ ದೇಹವನ್ನು ಸಾಮಾನ್ಯವಾಗಿ ಮರಣ ಹೊಂದಿದ ನಂತರ ಮಣ್ಣು ಮಾಡುವುದು ಹಾಗೂ ಚಿತೆಗೆ ಕೊಡುವುದು ಸಾಮಾನ್ಯ ಆದರೆ ಸಾವಿನಲ್ಲು ಸಾರ್ಥಕತೆ ಮೆರೆಯುವವರು ಕೆಲವರು ಮಾತ್ರ ಹೌದು ಚಿತ್ರನಟ ಪುನೀತ್ ರಾಜಕುಮಾರ್ ಅವರು ನಿಧನದ ನಂತರ ಕಣ್ಣು ದಾನ ಮಾಡಿದ್ದರು ಹೀಗಾಗಿ ಪುನೀತ್ ರಾಜಕುಮಾರ್ ಅವರ ಪ್ರೇರಣೆಯಾಗಿ ಅವರ ಸಾವಿನ ನಂತರ ರಾಜ್ಯದಲ್ಲಿ ಹಲವಾರು ಜನರು ತಮ್ಮ ಕಣ್ಣು ದಾನಗಳನ್ನು ಮಾಡಲೂ ಮುಂದೆ ಬಂದರು, ಅದೇ ರೀತಿ ಕಣ್ಣು ದಾನಗಳು ಮಾಡುವುದು ಅಷ್ಟೇ ಅಲ್ಲದೆ ದೇಹ ದಾನವನ್ನು ಕೂಡ ಮಾಡಿದ ಕೆಲ ವ್ಯಕ್ತಿಗಳಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಗೋಳ ಗ್ರಾಮದ ಅರ್ಚಕರಾಗಿದ್ದ ಶಿವಪ್ಪಜ್ಜ ಹೂಗಾರ್ ಅವರು ಮರಣದ ನಂತರ ತಮ್ಮ ದೇಹವನ್ನು ದಾನ ಮಾಡುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಬೆಳಗಾವಿ: ರಾಮದುರ್ಗ ತಾಲೂಕು ಕಟಕೋಳ ಗ್ರಾಮದ
ಶ್ರೀ ಕಲ್ಮೇಶ್ವರ ದೇವಸ್ಥಾನದ ಅರ್ಚಕರು ಶಿವಪ್ಪಜ್ಜ ಶೆಟ್ಯಪ್ಪ ಹೂಗಾರ (78) ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಮೃತರ ಅಂತಿಮ ಇಚ್ಛೆಯಂತೆ ಡಾ. ರಾಮಣ್ಣವರ ಚರಿಟೆಬಲ್ ಟ್ರಸ್ಟ್ ಬೈಲಹೊಂಗಲ ಮುಖಾಂತರ ದೇಹವನ್ನು ಕೆಎಲ್ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನ ಮಾಡಿ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ.
ಮರಣದ ನಂತರ ಮಣ್ಣು ಮಾಡಿದರೆ ಆತ್ಮಕ್ಕೆ ಶಾಂತಿ ಸಿಗುವುದು ಎಂಬ ಧಾರ್ಮಿಕ ಕಟ್ಟಳೆಯಿಂದ ಹೊರಬಂದು ಅರ್ಚಕ ಶಿವಪ್ಪಜ್ಜ ವೈದ್ಯ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ತಮ್ಮ ದೇಹವನ್ನು ಅಧ್ಯಯನ ಹಾಗೂ ಸಂಶೋಧನಕ್ಕೆ ದೇಹದಾನ ಮಾಡಿದ್ದಾರೆ.
ಕಾಲೇಜಿನ ಪ್ರಾಂಶುಪಾಲರು ಡಾ ಎನ್. ಎಸ್. ಮಹಾಂತಶೆಟ್ಟಿ,
ಶರೀರ ರಚನಾ ವಿಭಾಗದ ಮುಖ್ಯಸ್ಥರು ಶೀತಲ್ ಪಟ್ಟಣಶೆಟ್ಟಿ ಹಾಗೂ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಡಾ. ಮಹಾಂತೇಶ ರಾಮಣ್ಣವರ ಹೂಗಾರ ಕುಟುಂಬದವರಿಗೆ
ಕೃತಜ್ಞತೆ ಸಲ್ಲಿಸಿದ್ದಾರೆ.
ಇನ್ನೂ ಮೃತರಿಗೆ ಪತ್ನಿ ಕಮಲಾ,ಇಬ್ಬರು ಪುತ್ರರು ಪ್ರಕಾಶ್ ಶಿವಪ್ಪ ಹೂಗಾರ್,ಬಸವರಾಜ್ ಶಿವಪ್ಪ ಹೂಗಾರ, ಸೊಸೆಯಂದಿರು ಮೊಮ್ಮಕ್ಕಳು ಹಾಗೂ ಅಪಾರ ಬಳಗವನ್ನು ಅಗಲಿದ್ದಾರೆ.
ವರದಿ: ಶ್ರೇಯಸ ಪ್ರಕಾಶ ಅಸುಂಡಿ
ವರದಿಗಾರರು
ಮುಕ್ತ ನ್ಯೂಸ್ ಕನ್ನಡ ( ಕಟಕೋಳ )