ಚಿಕ್ಕೋಡಿಯಲ್ಲಿ ಮಾಸ್ಟರ್ ಮೈಂಡ್ ಕಮಾಲ್; ಭಾರಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ.

ಚಿಕ್ಕೋಡಿ ಲೋಕಸಭೆ ಚುನಾವಣೆ ಕ್ಷೇತ್ರವನ್ನು ಶತಾಯ್ ಗತಾಯ್ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕಿಳಿಸಿದ್ದು, ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಮಣಿಸಲು ಮಾಸ್ಟರ್ ಮೈಂಡ್ ಸತೀಶ್ ಜಾರಕಿಹೊಳಿ ಭಾರಿ ತಂತ್ರ ಹೆಣೆದಿದ್ದು ಇದೀಗ ಕಾಂಗ್ರೆಸ್ ಅಭ್ಯರ್ಥಿ ಭಾರಿ ಅಂತರದಿಂದ ಗೆಲುವು ಸರಳ ಮುನ್ನಡೇ ಕಾಯ್ದುಕೊಂಡಿದ್ದಾರೆ.

ಸಚಿವ ಸತೀಶ ಜಾರಕಿಹೊಳಿ

ಲೋಕಸಭೆ ಚುನಾವಣೆಯ ಮತದಾನ ಸುಗಮವಾಗಿ ನಡೆಯುತ್ತಿದ್ದು ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರು ಅಂಚೆ ಮತಗಳಿಂದಲೂ ಸಹ ಭಾರಿ ಅಂತರ ಕಾಯ್ದುಕೊಂಡು ಬಂದಿರುವ ಅವರು ಇದು ವರೆಗು 15 ನೆ ಸುತ್ತಿನ ಮತ ಎಣಿಕೆಯಲ್ಲೂ ಬಿಜೆಪಿ ಅಭ್ಯರ್ಥಿ ಅಣ್ಣಸಾಹೇಬ ಜೊಲ್ಲೆ ವಿರುಧ್ದ 70,410 ಸಾವಿರ ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅದೇ ರೀತಿ ಮುಂದಿನ ಕೆಲವು ಸುತ್ತಲೂ ಸಹ ಇದೇ ಅಂತರ ಕಾಯ್ದುಕೊಂಡ್ರೆ ಗೆಲುವು ನಿಶ್ಚಿತ.