ಚಿಕ್ಕೋಡಿ: ಅಂಬೇಡ್ಕರ ಭಾವ ಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳು: ಎರಡು ಗುಂಪುಗಳ ಮಧ್ಯೆ ಗಲಾಟೆ.

ಅಂಬೇಡ್ಕರ ಭಾವ ಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳು

ನಿನ್ನೆ ಏಪ್ರಿಲ್ 14 ರಂದು ಡಾ! ಬಿ, ಆರ್, ಅಂಬೇಡ್ಕರ್ ಅವರ ಜಯಂತಿಯ ಆಚರಣೆಯ ನಿಮಿತ್ಯ ಮೆರವಣಿಗೆ ಮತ್ತು ವೇದಿಕೆ ಕಾರ್ಯಕ್ರಮ ಚಿಕ್ಕೋಡಿ ತಾಲೂಕಿನ ಶಮನೇವಾಡಿ ಗ್ರಾಮದಲ್ಲಿ ಆಯೋಜಿಸಿದ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಡಾ! ಬಿ, ಆರ್, ಅಂಬೇಡ್ಕರ್ ಅವರ ಭಾವಚಿತ್ರ(ಫೋಟೊ) ವನ್ನು ಕಿಡಿಗೇಡಿಗಳು ಕೆಳಗಡೆ ಬಿಳಿಸಿದ್ದರಿಂದ  ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ.

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಶಮನೆವಾಡಿ ಗ್ರಾಮದಲ್ಲಿ ನಿನ್ನೆ ದಿನ ಅಂಬೇಡ್ಕರ್ ಜಯಂತಿ ಆಚರಣೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ, ಜಯಂತಿಯ ನಿಮಿತ್ಯ ವೇದಿಕೆ ನಿರ್ಮಿಸಿ ಅಂಬೇಡ್ಕರ ಬಾವ ಚಿತ್ರ ಇರಿಸಲಾಗಿತ್ತು, ನಂತರ ಮೆರವಣಿಗೆ ಹೊರಟ ವೇಳೆ ಕೆಲ ಕಿಡಿಗೇಡಿಗಳು ವೇದಿಕೆ ಮೇಲೆ ಇದ್ದ ಡಾ! ಬಿ, ಆರ್, ಅಂಬೇಡ್ಕರ್ ಅವರ ಭಾವ್ ಚಿತ್ರವನ್ನು ಕೆಳಗೆ ಬಿಳಿಸಿ ಅಪಮಾನ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಕಾರ್ಯಕ್ರಮದ ಆಯೋಜಕರ ಜೊತೆಗೆ ಕಿಡಿಗೇಡಿಗಳು ಗಲಾಟೆಗೆ ನೀತಿದ್ದಾರೆ. ಇದು ಅಲ್ಲದೆ ಮೆರವಣಿಗೆ ವೇಳೆ ಬಾಗಿಯಾಗಿದ್ದ ಮಹಿಳೆಯರ ಮೇಲೆ ಮತ್ತು ಮಕ್ಕಳ ಮೇಲೂ ಕೂಡ ಹಲ್ಲೆ ಮಾಡಿರುವ ಆರೋಪ್ ಕೇಳಿ ಬಂದಿದೆ.

ಇದರ ಕುರಿತು ಸದಲಗಾ ಪೊಲೀಸ ಠಾಣೆ ಎದುರು ಅಂಬೇಡ್ಕರ್ ಭಾವ ಚಿತ್ರಕ್ಕೆ ಅಪಮಾನ ಮಾಡಿದರ ಸಲುವಾಗಿ ಠಾಣೆಗೆ ಮುತ್ತಿಗೆ ಹಾಕಿ ಖಂಡಿಸಲಾಯಿತು, ತಕ್ಷಣ ಆರೋಪಿಗಳ ವಿರುಧ್ದ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಠಾಣೆಯ ಎದುರು ಜಮಾಯಿಸಿದ ಮಹಿಳೆಯರು ಹಾಗೂ ಆಯೋಜಕರು ಒತ್ತಾಯಿಸಿದರು.