ರಾಮದುರ್ಗ : ರಾಜ್ಯದಲ್ಲಿ ಕ್ರೀಡೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಹೆಸರಾಂತ ಚಂದರಗಿ ಕ್ರೀಡಾ ವಸತಿ ಶಾಲೆಯಲ್ಲಿ ಬೇಸಿಗೆ ರಜೆಯ ಪ್ರಯುಕ್ತ ಗಂಡು ಮಕ್ಕಳಿಗೆ 20 ದಿನಗಳ ಬೇಸಿಗೆ ಕ್ರೀಡಾ ಶಿಬಿರ ಏಪ್ರಿಲ್ 11 ರಿಂದ ಆರಂಭ.
ಪ್ರತಿ ವರ್ಷದಂತೆ ಈ ವರ್ಷವು ಕೂಡ 20 ದಿನಗಳ ಕಾಲ ಬೇಸಿಗೆ ಕ್ರೀಡಾ ಶಿಬಿರ ಏಪ್ರಿಲ್ 11 ರಂದು ಆರಂಭವಾಗುತ್ತದ್ದು.ಸುಮಾರು 100 ಎಕರೆ ವಿಸ್ತೀರ್ಣವಾದ ಸುಂದರ ಪರಿಸರ, ಮಕ್ಕಳಿಗೆ ಸುಸಜ್ಜಿತವಾದ ಕೊಠಡಿಗಳು, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳು, ಪ್ರತಿ ಕ್ರೀಡೆಗಳಿಗೆ ಪ್ರತ್ಯೇಕ ತರಬೇತುದಾರರು, 20 ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಈಜು (Swimming) ಕಲಿಸಲಾಗುವುದು, ಮತ್ತು ಕುದುರೆ ಸವಾರಿ ( Horse Riding ) ಹಾಗೂ ಬೇರೇ ಬೇರೆ ಕ್ರೀಡೆಗಳ ಬಗ್ಗೆ ಹೇಳಿಕೊಡಲಾಗುವುದು.
ತರಬೇತಿ ನೀಡುವ ಕ್ರೀಡೆಗಳು
- ಈಜು
- ಕುದುರೆ ಸವಾರಿ
- ಯೋಗ
- ಅಥ್ಲೆಟಿಕ್ಸ್
- ವ್ಹಾಲಿಬಾಲ್.
- ಸೈಕ್ಲಿಂಗ್
- ಖೋ- ಖೋ
- ಹಾಕಿ
- ಅಟ್ಯಾಪಟ್ಯಾ
- ಸಪೆಕಟಕ್ರಾ
- ಇತ್ಯಾದಿ ದೇಶಿ ಕ್ರೀಡೆಗಳು
- ಕ್ರೀಡೆಯ ಜೊತೆಗೆ ಕಂಪ್ಯೂಟರ್ ಮತ್ತು ಡ್ಯಾನ್ಸ್ ತರಬೇತಿ ನೀಡಲಾಗುವುದು.
ಬೇಸಿಗೆಯ ರಜೆಯನ್ನು ಚೆನ್ನಾಗಿ ಸದುಪಯೋಗ ಪಡಿಸಿಕೊಳ್ಳಲು ಸುಸ್ಸಜಿತವಾದ ಒಳಾಂಗಣ ಕ್ರೀಡಾಂಗಣ, ಮಲ್ಟಿ ಜಿಮ್, ಸೈಕ್ಲಿಂಗ್ ವೆಲೋಡ್ರೋಮ್, ಮತ್ತು ಧ್ಯಾನ್ ಮಂದಿರ ಅವುಗಳ ಮೂಲಕ ಉತ್ತಮ ಆರೋಗ್ಯ ಹಾಗೂ ಸದೃಢ ದೇಹ ಹೊಂದುವಂತೆ ತರಬೇತಿ ನೀಡಲಾಗುವುದು.
ಅದೇ ರೀತಿ 6 ರಿಂದ 9 ನೇ ತರಗತಿ ಕನ್ನಡ ಹಾಗೂ CBSE ವಿಭಾಗದ ಪ್ರವೇಶ ಬಯಸುವ ವಿದ್ಯಾರ್ಥಿಗಳೂ ಪ್ರವೇಶ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಶಾಲೆಗೆ ಪ್ರವೇಶ ಪರೀಕ್ಷೆ ಬಯಸುವರು ಕೂಡಲೇ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ.
ಹೆಚ್ಚಿನ ಮಾಹಿತಿಗಾಗಿ
8073674427, 9380627825, 9448863242