ಚಂದರಗಿ ಕ್ರೀಡಾ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

ಬೆಳಗಾವಿ ಆ.24 : ನಗರದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕುಸ್ತಿ ಪಂದ್ಯಾವಳಿಯಲ್ಲಿ ನಮ್ಮ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ


1) 63ಕೆಜಿ ವಿಭಾಗದಲ್ಲಿ ಶಿವಕುಮಾರ್ ಗುಡಸಲಮನಿ ಪ್ರಥಮ ಸ್ಥಾನ

2) 67ಕೆಜಿ ವಿಭಾಗದಲ್ಲಿ ದುರುದುಂಡಿಗೌಡ ಪಾಟೀಲ್ ಪ್ರಥಮ ಸ್ಥಾನ

3) 87 ಕೆಜಿ ವಿಭಾಗದಲ್ಲಿ ಮೋಹನ್ ಯ0ಗ್ರಿ ಪ್ರಥಮ ಸ್ಥಾನ

4) 70ಕೆಜಿ ವಿಭಾಗದಲ್ಲಿ ವಿಜಯಕುಮಾರ್ ಡಬಾಜ ತೃತಿಯ ಸ್ಥಾನ

5) 57ಕೆಜಿ ವಿಭಾಗದಲ್ಲಿ ವಿನಾಯಕ್ ಗುಡಿಕೇತರ ದ್ವಿತೀಯ ಸ್ಥಾನ

6) 74ಕೆಜಿ ವಿಭಾಗದಲ್ಲಿ ಸತೀಶ್ ಹಳ್ಳಿ ತೃತಿಯ ಸ್ಥಾನ

ಬೆಲ್ಟ್ ಕುಸ್ತಿ ಪಂದ್ಯಾವಳಿಯಲ್ಲಿ ಪದಕ ಪಡೆದ ವಿದ್ಯಾರ್ಥಿಗಳು


1) 45ಕೆಜಿ ವಿಭಾಗದಲ್ಲಿ ಮನೋಜ್ ಕುರೆನ್ನವರ ಅವರು ಪ್ರಥಮ ಸ್ಥಾನ

2) 50ಕೆಜಿ ವಿಭಾಗದಲ್ಲಿ ಯಲ್ಲಪ್ಪ ಯರಗಣವಿ ಪ್ರಥಮ ಸ್ಥಾನ

3) 70 ಕೆಜಿ ಭಾಗದಲ್ಲಿ ವಿಜಯಕುಮಾರ್ ಡಬಾಜ ಪ್ರಥಮ ಸ್ಥಾನ

4)70+ಕೆಜಿ ವಿಭಾಗದಲ್ಲಿ ಮೋಹನ್ ಯಂಗ್ರಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪದಕ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಕುಸ್ತಿ ತರಬೇತಿದಾರರಾಗಿ ಶ್ರೀ ಮಂಜುನಾಥ ಕಾರ್ಯನಿರ್ವಹಿಸಿದ್ದರು. ವಿದ್ಯಾರ್ಥಿಗಳ ಈ ಸಾಧನೆಗೆ ಸ್ಪೋಕೋ ಸಂಸ್ಥೆಯ ಸಂಸ್ಥಾಪಕರು, ಸ್ಪೋಕೋ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಆಡಳಿತ ಮಂಡಳಿಯ ನಿರ್ದೇಶಕರು, ವ್ಯವಸ್ಥಾಪಕರು, ಮುಖ್ಯ ಅಭಿಯಂತ್ರರು, ಎಲ್ಲ ವಿಭಾಗದ ಪ್ರಾಚಾರ್ಯರು, ಬೋಧಕ ಬೋಧಕೇತರ ಸಿಬ್ಬಂದಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.